Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೩೨೨: ನಿಂಬೆ ಗಿಡಗಳನ್ನು ಏಕೆ ನಾಟಿ ಮಾಡಬಾರದು ?

Posted date: 02 Sep, 2020

Powered by:     Yellow and Red

ತಾಳೆಯೋಲೆ ೩೨೨: ನಿಂಬೆ ಗಿಡಗಳನ್ನು ಏಕೆ ನಾಟಿ ಮಾಡಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ನಿಂಬೆ ಗಿಡಗಳನ್ನು ಏಕೆ ನಾಟಿ ಮಾಡಬಾರದು ?


ನಿಂಬೆ ಗಿಡವನ್ನು ನಾಟಿ ಮಾಡಿದವರು ಅಕಾಲಿಕ ಮರಣಕ್ಕೆ ತುತ್ತಾಗುವರು ಅಥವಾ ಊರು ಬಿಟ್ಟು ಹೋಗುವರು ಎಂಬ ಒಂದು ನಂಬಿಕೆ ಇತ್ತು. ಆದರೆ ಗಿಡ ಮರಗಳು ಮನುಷ್ಯನ ಮತ್ತು ಪ್ರಕೃತಿಯ ಒಂದು ಅಂಗ. ಮನುಷ್ಯ ಹುಟ್ಟಿದಾಗಿನಿಂದ ಇವುಗಳು ಮನುಷ್ಯನಿಗೆ ಸದಾ ಲಾಭದಾಯಕವಾಗಿರುವವು.


ಗಿಡ ಮರಗಳು ಮನುಷ್ಯನಿಗೆ ಎಂದಿಗೂ ಯಾವುದೇ ರೀತಿಯಲ್ಲೂ ತೊಂದರೆ ಕೊಡುವುದಿಲ್ಲ. ಹಾಗಾದರೆ ಈ ನಿಷೇಧ ಹೇಗೆ ಬಂತು ?

ನಿಂಬೆ ಹಣ್ಣಿನ ಔಷಧೀಯ ಗುಣ ಮತ್ತು ಅದರ ಉಪಯೋಗಗಳು ಅಸಂಖ್ಯಾತ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇದನ್ನು ನಾಟಿ ಮಾಡಿದ ನಂತರ ಅದು ಫಲ ನೀಡುವುದು ತುಂಬಾ ನಿಧಾನ. ಇಷ್ಟು ನಿಧಾನವಾಗಿ ಫಲ‌ ನೀಡುವುದರಿಂದ ರೈತನಿಗೆ ಕಾಯಲು ಸಹನೆ ಇರಲಿಲ್ಲ. ಆದ್ದರಿಂದ ಇದನ್ನು ಬೆಳೆಸಲು ಅವನು ಬೇರೆಯವರಿಗೆ ಪ್ರೋತ್ಸಾಹ ನೀಡುತ್ತಿರಲಿಲ್ಲ. ಈ ಬೆಳೆಯು ಸಾಮಾನ್ಯ ರೈತನಿಗೆ ಆಗುವ ಬೆಳೆಯಲ್ಲ. ಯಾಕೆಂದರೆ ಈ ಗಿಡ ಫಲ ನೀಡುವ ತನಕ ಅವನಿಗೆ ಕಾಯಲು ಸಾಧ್ಯವಾಗುವುದಿಲ್ಲ.


ಪರೋಕ್ಷವಾಗಿ ಈ ನಂಬಿಕೆಗೆ ಅರ್ಥವೇನೆಂದರೆ ನಿಂಬೆ ಗಿಡವನ್ನು ನಾಟಿ ಮಾಡಿ ಅದು ಫಲ ನೀಡುವ ಮುಂಚಿತವಾಗಿ ಗಿಡವನ್ನು ನಾಟಿ ಮಾಡಿದ ವ್ಯಕ್ತಿ ಮರಣ ಹೊಂದಿರಬಹುದು ಅಥವಾ ಉನ್ನತ ಸಂಪಾದನೆಗಾಗಿ ಊರನ್ನು ಬಿಟ್ಟಿರಬೇಕು. ಆದ್ದರಿಂದ ಈ ರೀತಿಯ ನಿಷೇಧವು ಬಂದಿರಬೇಕು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑