Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೩೨೫: ಕಾಚಿ ಸೊಪ್ಪು (asparagus) ಸರ್ವರೋಗ ನಿವಾರಣೆಯೇ ?

Posted date: 04 Sep, 2020

Powered by:     Yellow and Red

ತಾಳೆಯೋಲೆ ೩೨೫: ಕಾಚಿ ಸೊಪ್ಪು (asparagus) ಸರ್ವರೋಗ ನಿವಾರಣೆಯೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಕಾಚಿ ಸೊಪ್ಪು (asparagus) ಸರ್ವರೋಗ ನಿವಾರಣೆಯೇ ?


ಕಾಚಿಸೊಪ್ಪು (ಇದೊಂದು ಆರೋಗ್ಯಕರ ಸೊಪ್ಪು. ಇದು ವಸಂತಕಾಲದಲ್ಲಿ ಹೆಚ್ಚಾಗಿ ಬೆಳೆಯುತ್ತದೆ.) ಸರ್ವರೋಗ ನಿವಾರಣೆ ಎಂದು ಪ್ರಾಚೀನ ವೈದ್ಯ ಶಾಸ್ತ್ರ ತಿಳಿಸಿದೆ.


ಆಯುರ್ವೇದ ವೈದ್ಯರು ಈ ಸೊಪ್ಪನ್ನು ಅನೇಕ ರೋಗಗಳಿಗೆ ಚಿಕಿತ್ಸೆಯಾಗಿ ತಿಳಿಸಿರುವರು. ಇದರ ಕಾಯಿಯಂತಹ ಭಾಗವು ಪುರುಷರಿಗೆ ಹಾಗೂ ಮಹಿಳೆಯರಿಗೆ ಬಹಳಷ್ಟು ಉಪಯೋಗವಾಗುವುದು. ಈ ಕಾಯಿಯಂತಹ ಭಾಗವನ್ನು ಸಕ್ಕರೆಯಲ್ಲಿ ಕಲಸಿ 14 ರಾತ್ರಿಗಳು ಕ್ರಮ ತಪ್ಪದೇ ಸೇವಿಸಿದರೆ ಸುಖ ವ್ಯಾಧಿಗಳು, (ಕಾಮ ರೋಗಗಳು) ಶೀಘ್ರ ಸ್ಕಲನದ ಸಮಸ್ಯೆ ಹಾಗೂ ಸ್ವಪ್ನ ಸ್ಕಲನಗಳು, ಮುಂತಾದವು ತೊಲಗಿ ಹೋಗುವವು.


ಕಾಚಿ ಸೊಪ್ಪನ್ನು ಸೇವಿಸುವುದರಿಂದ ಶರೀರಕ್ಕೆ ಬಲ ಹಾಗೂ ತೇಜಸ್ಸು ಹೆಚ್ಚುತ್ತದೆ. ಈ ಗಿಡದಲ್ಲಿ ಎರಡು ರೀತಿಗಳಿವೆ. ಒಂದು ಕಪ್ಪು ಹಣ್ಣು ಮತ್ತೊಂದು ಕೆಂಪು ಹಣ್ಣು ಬಿಡುವ ಗಿಡ. ಇದರಲ್ಲಿ ಕೆಂಪು ಹಣ್ಣು ಬಿಡುವ ಗಿಡದ ಸೊಪ್ಪು ತುಂಬಾ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಮಧುಮೇಹಕ್ಕೆ ಈ ಸೊಪ್ಪು ರಾಮಬಾಣ ಎಂದು ಪ್ರಾಚೀನ ವೈದ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑