Tel: 7676775624 | Mail: info@yellowandred.in

Language: EN KAN

    Follow us :


ಈ ಬಾರಿ ಏಕಮುಖ ಚುನಾವಣೆ, ಪ್ರತಿಸ್ಪರ್ಧಿಯೇ ಇಲ್ಲ. ನಾನೇ ಗೆಲ್ಲುವೆ ಎಂಬ ಆತ್ಮವಿಶ್ವಾಸವಿದೆ ಪುಟ್ಟಣ್ಣ

Posted date: 20 Sep, 2020

Powered by:     Yellow and Red

ಈ ಬಾರಿ ಏಕಮುಖ ಚುನಾವಣೆ, ಪ್ರತಿಸ್ಪರ್ಧಿಯೇ ಇಲ್ಲ. ನಾನೇ ಗೆಲ್ಲುವೆ ಎಂಬ ಆತ್ಮವಿಶ್ವಾಸವಿದೆ ಪುಟ್ಟಣ್ಣ

ಚನ್ನಪಟ್ಟಣ:ಸೆ/19/20/ಶನಿವಾರ. ಈ ಬಾರಿ ಏಕಮುಖ (ಒನ್ ಸೈಡ್) ಚುನಾವಣೆ ನಡೆಯಲಿದ್ದು, ಬಹುತೇಕ ಎಲ್ಲಾ ಶಿಕ್ಷಕರು ನನ್ನನ್ನು ಆಶೀರ್ವದಿಸಿ ಮತ್ತೊಮ್ಮೆ ವಿಧಾನಸಭೆಗೆ ಕಳುಹಿಸುತ್ತಾರೆ ಎಂದು ಮಾಜಿ ಉಪ ಸಭಾಪತಿ, ಶಿಕ್ಷಕರ ಕ್ಷೇತ್ರದ ಆಕಾಂಕ್ಷಿ ಪುಟ್ಟಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಇಂದು ನಗರದ ಮೂರು ಖಾಸಗಿ ಶಾಲೆಗಳಲ್ಲಿ ವಿವಿಧ ಸ್ತರದ ಶಿಕ್ಷಕರ ಸಭೆ ನಡೆಸಿ, ಗೋವಿಂದೇಗೌಡನದೊಡ್ಡಿ ಗ್ರಾಮದಲ್ಲಿರುವ ಸ್ಪ್ರಿಂಗ್ ಫೀಲ್ಡ್ ಶಾಲೆಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು.


ಕಳೆದ ಹದಿನೆಂಟು ವರ್ಷಗಳಿಂದ ನಾನು ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿದ್ದು, ಕೇವಲ ಬೆಂಗಳೂರು ಕ್ಷೇತ್ರವಲ್ಲದೆ, ಇಡೀ ರಾಜ್ಯದ ಶಿಕ್ಷಕರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಅನುದಾನಿತ, ಅನುದಾನ ರಹಿತ, ಮತ್ತು ಸರ್ಕಾರಿ ಶಾಲೆಗಳ ಶಿಕ್ಷಕರ ಕುಂದುಕೊರತೆಗಳನ್ನು ನೀಗಿಸುವಲ್ಲಿ, ಸದನದ ಹೊರಗೆ ಮತ್ತು ಒಳಗೆ, ಕೆಲವು ಸಮಯಗಳಲ್ಲಿ ನಮ್ಮದೇ ಸರ್ಕಾರದ ವಿರುದ್ಧವೂ ಪ್ರತಿಭಟಿಸಿ ಶಿಕ್ಷಕರಿಗೆ ನ್ಯಾಯ ಒದಗಿಸಿದ್ದೇನೆ ಎಂದರು.


ನನ್ನ ಹೋರಾಟದಿಂದ ಇಂದು ಹಲವಾರು ಶಿಕ್ಷಕರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈ ಕೊರೊನಾ ಸಮಯದಲ್ಲಿ ಅತಿ ಹೆಚ್ಚು ನಷ್ಟವಾಗಿರುವುದು ಖಾಸಗಿ ಶಾಲೆಗಳ ಶಿಕ್ಷಕರಿಗೆ, ಈಗಾಗಲೇ ಸರ್ಕಾರದ ಜೊತೆಗೆ ಮಾತನಾಡಿದ್ದು ಅವರೆಲ್ಲರಿಗೂ ಪ್ಯಾಕೇಜ್ ನೀಡಲು ಮನವಿ ಮಾಡಿದ್ದೇನೆ. ಶಿಕ್ಷಕರ ಏಳ್ಗೆಗಾಗಿ ನಾನು ಸದಾಕಾಲವೂ ಸಿದ್ದನಾಗಿದ್ದು, ನನ್ನನ್ನು ಗೆಲ್ಲಿಸುತ್ತಾರೆ ಎಂದರು.


ಪ್ರತಿಪಕ್ಷಗಳ ಟೀಕೆಗಳಿಗೆ ನಾನು ಉತ್ತರಿಸುವುದಿಲ್ಲ. ನನಗೆ ನನ್ನ ಶಿಕ್ಷಕ ಮಿತ್ರರು ಬೆನ್ನೆಲುಬಾಗಿದ್ದಾರೆ. ತಾಲ್ಲೂಕಿನಲ್ಲಿ ಶಿಕ್ಷಕರ ಭವನ ನಿರ್ಮಿಸುವ ಹೊಣೆ ನನ್ನದು. ಬಿಇಓ ಕಛೇರಿಯ ಅಧ್ವಾನದ ಬಗ್ಗೆ ಕೇಳಿದ್ದೇನೆ. ನನ್ನ ಗಮನಕ್ಕೆ ಬಂದಿರಲಿಲ್ಲ. ಅದನ್ನು ಸರ್ಕಾರದ ಗಮನ ಸೆಳೆದು ಶೀಘ್ರವಾಗಿ ಉನ್ನತೀಕರಣ ಮಾಡಲಾಗುವುದು ಎಂದು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.


ಕಾರ್ಯಕ್ರಮದಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳ ಅಧ್ಯಕ್ಷ ಪಟೇಲ್ ರಾಜು, ಮಾಜಿ ಅಧ್ಯಕ್ಷ ಸುಬ್ಬಯ್ಯಚೆಟ್ಟಿ, ಕಾರ್ಯದರ್ಶಿ ಕಿರಣಪ್ರಸಾದ್, ದಿವ್ಯಚೇತನ ಪಬ್ಲಿಕ್ ಶಾಲೆಯ ಮುಖ್ಯಸ್ಥ ವರದರಾಜು ಹಾಗೂ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಕಾಂತರಾಜು ಮತ್ತು  ಹಲವಾರು ಶಿಕ್ಷಕರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑