ಉಚಿತ ಎಲೆಕ್ಟ್ರಿಕಲ್ ಮೋಟರ್ ರೀವೈಂಡಿಗ್ ಅಂಡ್ ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

ರಾಮನಗರ:ಅ/11/20/ಭಾನುವಾರ. ಬಿಡದಿ ಬಳಿಯ ಕೆನರಾ ಬ್ಯಾಂಕ್ ನ ಎ.ಡಿ.ಪೈ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗಾಗಿ 30 ದಿನಗಳ ಉಚಿತ ಎಲೆಕ್ಟ್ರಿಕಲ್ ಮೋಟರ್ ರೀವೈಂಡಿಗ್ ಅಂಡ್ ಪಂಪ್ ಸೆಟ್ ರಿಪೇರಿ ತರಬೇತಿಯನ್ನು ಆಯೋಜಿಸಲಾಗಿದೆ.
ಆಸಕ್ತಿ ಉಳ್ಳವರು ಕನಿಷ್ಠ 7 ನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದಿರಬೇಕು.18 ರಿಂದ 35 ವರ್ಷ
ವಯೋಮಾನದವರಿರಬೇಕು. ತರಬೇತಿಯ ಅವಧಿಯಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯವಿರುತ್ತದೆ.
ತರಬೇತಿಯ ಮುಖ್ಯ ಉದ್ದೇಶ ಯುವಕರು ಸ್ವ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲತೆ ಸಾಧಿಸುವುದಾಗಿರುತ್ತದೆ.
ಆಸಕ್ತರು ತಮ್ಮ ಇತ್ತೀಚಿನ 3 ಭಾವಚಿತ್ರಗಳು, ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲಿನೊಂದಿಗೆ ನೇರವಾಗಿ ಅಭ್ಯರ್ಥಿಗಳು ಅರ್ಜಿಗಳನ್ನು ದಿನಾಂಕ 20.10.2020 ರ ವರೆಗೆ ಕೆಳಗಿನ ವಿಳಾಸಕ್ಕೆ ಸಲ್ಲಿಸಿ ತಮ್ಮ ಹೆಸರನ್ನು ತರಬೇತಿಗೆ ನೊಂದಾಯಿಸಬಹುದಾಗಿದೆ. ತರಬೇತಿಯು ದಿನಾಂಕ 25.10.2020 ರಂದು ಪ್ರಾರಂಭವಾಗುತ್ತದೆ.
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ವಿಳಾಸ:*
ಕೆನರಾ ಬ್ಯಾಂಕ್,
ಎ.ಡಿ.ಪೈ ಗ್ರಾಮೀಣ ಅಭಿವೃದ್ಧಿ ತರಬೇತಿ ಸಂಸ್ಥೆ,
ಬೆಂಗಳೂರು-ಮೈಸೂರು ಹೆದ್ದಾರಿ,
ವಂಡರ್ ಲಾ ಹಾಗೂ ಬಿಡದಿಯ ಮಧ್ಯ ಭಾಗ, ಲಕ್ಷ್ಮಿ ಸಾಗರ ಗೇಟ್, ವಾಜರಹಳ್ಳಿ, ಬಿಡದಿ ಹೋಬಳಿ,
ರಾಮನಗರ ಜಿಲ್ಲೆ - 562109.
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಹುದಾದ ಮೊಬೈಲ್ ಸಂಖ್ಯೆ:_**ತರಬೇತಿ ಸಂಯೋಜಕರು.
96862 69653, 9591752123.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು