Tel: 7676775624 | Mail: info@yellowandred.in

Language: EN KAN

    Follow us :


ಕೆಂಗಲ್ ಆಂಜನೇಯನ ದರ್ಶನ ಪಡೆದ ನಿರ್ಮಲಾನಂದನಾಥಸ್ವಾಮೀಜಿ

Posted date: 09 Nov, 2020

Powered by:     Yellow and Red

ಕೆಂಗಲ್ ಆಂಜನೇಯನ ದರ್ಶನ ಪಡೆದ ನಿರ್ಮಲಾನಂದನಾಥಸ್ವಾಮೀಜಿ

ಚನ್ನಪಟ್ಟಣ:ನ/09/20/ಸೋಮವಾರ. ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಭೇಟಿ ನೀಡಿ ದರ್ಶನ ಪಡೆದರು.


ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ರವೀಂದ್ರಕುಮಾರಭಟ್ಟ ರವರು ಕೆಂಗಲ್ ನ ಇತಿಹಾಸ, ಕೆಂಪು ಕಲ್ಲಿನ ಮಹತ್ವವನ್ನು ತಿಳಿಸಿದರು. ಕೆಂಗಲ್ ಕ್ಷೇತ್ರದ ತುಂಬೆಲ್ಲಾ ಕೆಂಪು (ಕೆಂಚು) ಕಲ್ಲುಗಳೇ ತುಂಬಿವೆ. ಆಂಜನೇಯ ಮೂರ್ತಿಯೂ ಸ್ವಯಂ ಉದ್ಭವವಾಗಿದ್ದು, ಮೂರ್ತಿಯ ಹಿಂಭಾಗವೆಲ್ಲವೂ ದೊಡ್ಡ ಕಲ್ಲಿನ ಗುಡ್ಡಯಿದೆ. ಈ ಗುಡ್ಡೆಯ ಮುಂದಿನ ಭಾಗವೇ ಆಂಜನೇಯ ಮೂರ್ತಿ ಎಂದು ಸ್ವಾಮೀಜಿಗಳಿಗೆ ತಿಳಿಸಿದರು.


ದರ್ಶನಗೈದ ನಿರ್ಮಲಾನಂದನಾಥ ಸ್ವಾಮೀಜಿಯವರು ಮಾತನಾಡಿ ಶ್ರೀ ಆಂಜನೇಯ ಸ್ವಾಮಿಯ ಉದ್ಭವ ಮೂರ್ತಿಯು ಆಕರ್ಷಕವಾಗಿದ್ದು, ಭಕ್ತಿ ಉಕ್ಕುವಂತಿದೆ. ಬಹುತೇಕ ಎಲ್ಲಾ ದೇವಾಯಗಳಲ್ಲೂ ಕಪ್ಪು ಮತ್ತು ಬಿಳುಪು ಕಲ್ಲಿನ ಮೂರ್ತಿಗಳಿವೆ. ಈ ಸ್ವಾಮಿಯ ಮೂರ್ತಿಯೂ ವಿಶೇಷವಾಗಿ ಕೆಂಗಲ್ಲಿನದ್ದಾಗಿದ್ದು, ಮಂತ್ರಮುಗ್ಧವಾಗಿಸುತ್ತಿದೆ ಎಂದರು.


ದರ್ಶನದ ಸಮಯದಲ್ಲಿ ರಾಮನಗರದ ಅರ್ಚಕರಹಳ್ಳಿಯ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ, ತಾಲ್ಲೂಕು ದಂಡಾಧಿಕಾರಿ ನಾಗೇಶ್, ಪೂರ್ವ ಪೋಲಿಸ್ ಠಾಣೆಯ ಉಪ ನಿರೀಕ್ಷಕ ಪ್ರಕಾಶ್, ಅರ್ಚಕ ಯೋಗಾನರಸಿಂಹ ರವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑