Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣದಲ್ಲಿ ಯಶಸ್ವಿಯಾಗದ ಭಾರತ್ ಬಂದ್, ಮೆರವಣಿಗೆ, ಪ್ರತಿಭಟನೆಗಷ್ಟೇ ಸೀಮಿತವಾದ ಸಂಘಟನೆಗಳು

Posted date: 08 Dec, 2020

Powered by:     Yellow and Red

ಚನ್ನಪಟ್ಟಣದಲ್ಲಿ ಯಶಸ್ವಿಯಾಗದ ಭಾರತ್ ಬಂದ್, ಮೆರವಣಿಗೆ, ಪ್ರತಿಭಟನೆಗಷ್ಟೇ ಸೀಮಿತವಾದ ಸಂಘಟನೆಗಳು

ಚನ್ನಪಟ್ಟಣ:ಡಿ/08/20/ಮಂಗಳವಾರ. ರಾಷ್ಟ್ರ ಮಯ ರಾಜ್ಯ ರೈತ ಸಂಘಟನೆಗಳು ಹಾಗೂ ಮತ್ತಿತರ ಸಂಘಟನೆಗಳು ಇಂದು ದೇಶಾದ್ಯಂತ ಇಂದು ಭಾರತ್ ಬಂದ್ ಗೆ ಕರೆ ನೀಡಿದ್ದರು. ಆದರೆ ಚನ್ನಪಟ್ಟಣದಲ್ಲಿ ಸ್ವಯಂ ಪ್ರೇರಿತರಾಗಿ ಯಾರೂ ಸಹ ಬಂದ್ ಮಾಡಲಿಲ್ಲ. ರೈತ ಸಂಘಟನೆ ಮತ್ತು ಟಯೋಟಾ ಕಿರ್ಲೋಸ್ಕರ್ ಎಂಪ್ಲಾಯ್ಸ್ ಯೂನಿಯನ್ ಹಾಗೂ ಮತ್ತಿತರ ಸಂಘಟನೆಗಳು ಇಂದು ಒಗ್ಗೂಡಿ ಪ್ರತಿಭಟನೆ ನಡೆಸಿದ್ದು ಬಿಟ್ಟರೆ ಬಂದ್ ಆಚರಣೆ ಮಾಡಲಾಗಲಿಲ್ಲ.


ಮೊದಲಿಗೆ ರೈತ ಸಂಘದ ಜಿಲ್ಲಾಧ್ಯಕ್ಷ ಎಂ ಮಲ್ಲಯ್ಯ ಮತ್ತು ತಾಲ್ಲೂಕು ಅಧ್ಯಕ್ಷ ರಾಮೇಗೌಡ ನೇತೃತ್ವದಲ್ಲಿ ಗಾಂಧಿ ಭವನದ ಮುಂದೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಮಲ್ಲಯ್ಯನವರು ಕಡಿಮೆ ಅವಧಿ ಇದ್ದುದರಿಂದ ಹೆಚ್ಚು ಮಂದಿ ಸೇರಿಸಿ ಬಂದ್ ಮಾಡಲಾಗಲಿಲ್ಲ. ಆದ್ದರಿಂದ ನಾವು ಪ್ರತಿಭಟನೆಗಷ್ಟೇ ಸೀಮಿತವಾಗಿದ್ದೇವೆ. ಅತಿ ಹೆಚ್ಚು ಅನ್ಯಾಯವಾಗುತ್ತಿರುವುದು ರೈತರಿಗೆ ವಿನಹ ವ್ಯಾಪಾರಸ್ಥರಿಗಲ್ಲ. ಆದರೆ ವ್ಯಾಪಾರಿಗಳು ಬದುಕಿರುವುದು ಸಹ ರೈತರ ಉತ್ಪಾದನೆಯಿಂದಲೇ ಎಂಬುದನ್ನು ಅರಿತುಕೊಳ್ಳಬೇಕು. ಇನ್ನೂ ಸಮಯವಿದೆ. ಚನ್ನಪಟ್ಟಣ ನಗರದ ವರ್ತಕರೆಲ್ಲರೂ ಕನಿಷ್ಠ ಒಂದು ಗಂಟೆಯಾದರೂ ಸ್ವಯಂ ಬಾಗಿಲು ಹಾಕಿ ಬಂದ್ ಮಾಡುವ ಮೂಲಕ ರೈತನ ಋಣ ತೀರಿಸಬೇಕು ಎಂದು ಕರೆ ನೀಡಿದರು.


ನಂತರ ಟಯೋಟಾ ಕಾರ್ಮಿಕರು ಗಾಂಧಿ ಭವನದಿಂದ ಮೆರವಣಿಗೆ ಹೊರಟರು. ಈ ಮೆರವಣಿಗೆಯಲ್ಲಿ ತಾಲ್ಲೂಕಿನ ರೈತ ಸಂಘ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ದಲಿತ ಸಂಘರ್ಷ ಸಮಿತಿ, ಜೀವಿಕಾ ಸೇರಿದಂತೆ ಹಲವು ಸಂಘಟನೆಗಳ ಕೆಲವರು ಭಾಗವಹಿಸಿದ್ದರು.

ಗಾಂಧಿ ಭವನದಿಂದ ಹೊರಟ ಮೆರವಣಿಗೆಯು ಜೆ ಸಿ ರಸ್ತೆ, ಡೂಂಲೈಟ್ ಸರ್ಕಲ್, ಷೇರು ಹೋಟೆಲ್‌ ಬಳಸಿ ಹೆದ್ದಾರಿ ಮೂಲಕ ಸಾತನೂರು ವೃತ್ತ, ಬಸ್ ನಿಲ್ದಾಣದ ಮೂಲಕ ಮತ್ತೆ ಗಾಂಧಿ ಭವನ ತಲುಪಿ ಸಭೆ ಸೇರಿದರು.


ಕನ್ನಡ ಸಾಹಸ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿಂ ಲಿಂ ನಾಗರಾಜು ಮಾತನಾಡಿ ರೈತ ವಿರೋಧಿ ಕಾಯ್ದೆಗಳು ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಏಕಪಕ್ಷೀಯವಾಗಿ ಜಾರಿಗೆ ತಂದಿದ್ದಾರೆ. ಇದು ಅವರ ದುರಂಹಕಾರದ ಪರಮಾವಧಿ. ನಮ್ಮ ದ ಹಕ್ಕನ್ನು ಕಸಿದುಕೊಳ್ಳುತ್ತಿರುವ ಇಂತ ಭ್ರಷ್ಟ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲದು ಎಂದರು.


ಜೀವಿಕಾ ಸಂಘಟನೆಯ ಮುಖ್ಯಸ್ಥ ಪಿ ಜೆ ಗೋವಿಂದರಾಜು ಮಾತನಾಡಿ, ರೈತರಿಗೆ ಮತ್ತು ಕಾರ್ಮಿಕರಿಗೆ ಸಂಬಂಧಿಸಿದ ಕಾನೂನುಗಳು ಏನಿವೆಯೋ ಅಥವಾ ೧೯೬೪ ಸಂಬಂಧಿಸಿದಂತೆ ಯಾವುದೇ ತಿಳುವಳಿಕೆಯನ್ನು ಸರ್ಕಾರಗಳು ನಮಗೆ ಶಿಕ್ಷಣದಲ್ಲಿ ನೀಡಿಲ್ಲ. ಸಂವಿಧಾನದ ಅಶಯಗಳನ್ನು ಒಂದೊಂದಾಗಿ ಕಡಿದು ಬೋಳು ಮರದಂತೆ ಮಾಡುವುದೇ ಸರ್ಕಾರದ ಧ್ಯೇಯವಾಗಿದೆ. ನಮ್ಮ ಹಲವಾರು ಜನ್ಮದ ಸರ್ಕಾರದ ಕೈಗೊಂಬೆಗಳಾಗಿ ವರ್ತಿಸುತ್ತಿವೆ. ಸಂಘಟನೆಗಳೆಲ್ಲವೂ ಛಿದ್ರವಾಗಿವೆ. ಪ್ರಜಾಪ್ರಭುತ್ವ ಉಳಿಸಲು ಈಗಲಾದರೂ ನಾವು ಒಗ್ಗೂಡಿ ಹೋರಾಟ ನಡೆಸಬೇಕು. ಯುವಕರನ್ನು ಚಳವಳಿಗೆ ಕರೆತರಬೇಕು ಎಂದರು.


ಟಯೋಟ ಕಿರ್ಲೋಸ್ಕರ್ ಎಂಪ್ಲಾಯ್ಸ್ ಯೂನಿಯನ್ ನ ಮುಖಂಡ ಬಸವರಾಜ ಹವಾಲ್ದಾರ್ ಮಾತನಾಡಿ, ಕಾರ್ಮಿಕರನ್ನು ಆಡಳಿತ ಮಂಡಳಿಯು ಜೀತದಾಳಿನಂತೆ ದುಡಿಸಿಕೊಳ್ಳುತ್ತಿದ್ದಾರೆ. ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಸರ್ಕಾರಗಳು ಬಡವರ, ದೀನದಲಿತರ ಪರವಾಗಿಲ್ಲ. ಕೇವಲ ಬಂಡವಾಳ ಶಾಹಿಗಳ ಪರವಾಗಿ ನಿಂತಿವೆ. ಇಂದಿನ ಪ್ರತಿಭಟನೆಗಳು ಸಣ್ಣದಾಗಿ ಹುಟ್ಟಿಕೊಂಡಿವೆ. ನಾಳೆ ಈ ಪ್ರತಿಭಟನೆಗಳು ಇಡೀ ಕುಟುಂಬಗಳು ಬೀದಿಗೆ ಬಂದು ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ. ಆಗ ಇದೇ ಸರ್ಕಾರಗಳು ಬೀದಿಗೆ ಬರುತ್ತವೆ. ಸರ್ಕಾರಗಳು ಎಚ್ಚೆತ್ತುಕೊಂಡು ರೈತರ ಮತ್ತು ಕಾರ್ಮಿಕರ ಪರ ನಿಲ್ಲಲಿ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.


ಪ್ರತಿಭಟನೆಯಲ್ಲಿ ಕನ್ನಡ ಪರ ಹೋರಾಟಗಾರ ಶಂಭೂಗೌಡ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ, ಕಕಜವೇ ಯ ಜಿಲ್ಲಾಧ್ಯಕ್ಷ ಯೋಗೇಶ್ ಗೌಡ, ದಸಂಸ ದ ಸಂಚಾಲಕ ವೆಂಕಟೇಶ್ (ಶೇಟು) ಸೇರಿದಂತೆ ಅನೇಕ ಮುಖಂಡರು ಮತ್ತು ಟಯೋಟಾ ಕಂಪನಿಯ ಕಾರ್ಮಿಕರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑