Tel: 7676775624 | Mail: info@yellowandred.in

Language: EN KAN

    Follow us :


ದಾನಿಗಳ ನೆರವಿನಿಂದ ಚನ್ನಪ್ಪಸ್ವಾಮಿ ಬೆಟ್ಟಕ್ಕೆ ಶಾಶ್ವತವಾಗಿ ನೀರೆರೆದ ಗ್ರಾಮಸ್ಥರು

Posted date: 19 Dec, 2020

Powered by:     Yellow and Red

ದಾನಿಗಳ ನೆರವಿನಿಂದ ಚನ್ನಪ್ಪಸ್ವಾಮಿ ಬೆಟ್ಟಕ್ಕೆ ಶಾಶ್ವತವಾಗಿ ನೀರೆರೆದ ಗ್ರಾಮಸ್ಥರು

ಚನ್ನಪಟ್ಟಣ:ಡಿ/19/20/ಶನಿವಾರ. ಭೂಮಿಯಲ್ಲಿ ಕೊಳವೆ ಬಾವಿಗೆ ನೀರು ದಕ್ಕಿದ್ದು ತಾಳು ಬೆಟ್ಟಕ್ಕೆ 900 ಮೀಟರ್ ದೂರದಲ್ಲಿ. ತಾಳು ಬೆಟ್ಟದಿಂದ ಶ್ರೀ ಚನ್ನಪ್ಪ ಸ್ವಾಮಿ ಬೆಟ್ಟದ ಎತ್ತರ 1610 ಮೀಟರ್. ಒಟ್ಟು 2510 ಮೀಟರ್ ಬೆಟ್ಟಕ್ಕೆ ಶಾಶ್ವತವಾಗಿ ನೀರು ಸರಬರಾಜು ಆಗುವಂತೆ ದಾನಿಗಳ ನೆರವಿನಿಂದ, ಮಂಗಾಡಹಳ್ಳಿ ಗ್ರಾಮದ ಮುಖಂಡ ಮುನಿಸಿದ್ದೇಗೌಡ ರ ನೇತೃತ್ವದಲ್ಲಿ ನಿನ್ನೆ ಜರುಗಿತು.


ಕೇವಲ ಒಂದೇ ದಿನದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರ ನೆರವಿನಿಂದ 2500 ಮೀಟರ್ ಪೈಪುಗಳನ್ನು ಎಳೆದು ಮಧ್ಯಾಹ್ನದ ವೇಳೆಗೆ ಬೆಟ್ಟದ ಮೇಲೆ ನೀರು ಸುರಿಯುವಂತೆ ಮಾಡಲಾಯಿತು. ಪೈಪುಗಳ ಜೋಡಣೆಗೆಂದೇ ಬಾಗಲಕೋಟೆ ಜಿಲ್ಲೆಯಿಂದ ನಿಪುಣರನ್ನು ಕರೆಸಲಾಗಿತ್ತು. ಶಾಶ್ವತವಾಗಿ ಉಳಿಯಲೆಂದು ಹೈದರಾಬಾದ್ ನ ಗೋದಾವರಿ ಕಂಪೆನಿಗೆ ಮುಂಗಡ ನೀಡಿ ಉತ್ತಮ ಗುಣಮಟ್ಟದ ಪೈಪುಗಳನ್ನು ತರಿಸಲಾಗಿದೆ ಎಂದು ಮುಖಂಡ ಮುನಿಸಿದ್ದೇಗೌಡ ತಿಳಿಸಿದರು.


ಚನ್ನಪ್ಪಸ್ವಾಮಿ ಬೆಟ್ಟಕ್ಕೆ ಇತಿಹಾಸವಿದ್ದು, ಒಂದು ಪ್ರವಾಸಿ ತಾಣವನ್ನಾಗಿ ಮಾಡಲು ಪಣ ತೊಟ್ಟಿದ್ದೇವೆ. ದೇವಸ್ಥಾನದ ಜೀರ್ಣೋದ್ಧಾರ, ಸಮುದಾಯ ಭವನ ನಿರ್ಮಾಣ ಮಾಡುವ ಯೋಜನೆಯೂ ಇದೆ. ಉತ್ತಮ ರಸ್ತೆ ಹಾಗೂ ಪ್ರವಾಸಿಗರು ಮತ್ತು ಭಕ್ತಾಧಿಗಳಿಗೆ ಸವಲತ್ತುಗಳನ್ನು ನೀಡಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಪೈಪು ಹಾದುಹೋಗಿರುವ ಕಡೆ ಪ್ರಾಣಿ ಪಕ್ಷಿಗಳಿಗೂ ನೀರು ಸಿಗುವಂತೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.


*ದಾನಿಗಳು ಕೈಜೋಡಿಸುವಂತೆ ಮನವಿ;*

ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಬೆಂಗಳೂರಿನ ಭಕ್ತರು ಸೇರಿದಂತೆ ಈಗಾಗಲೇ ಹಲವಾರು ಮಂದಿ ಮುಕ್ತವಾಗಿ ಧನ ಸಹಾಯ ಮಾಡಿದ್ದಾರೆ. ಚನ್ನಪ್ಪಸ್ವಾಮಿ ಮತ್ತು ಬೆಟ್ಟದ ಅಭಿವೃದ್ಧಿಗಾಗಿ ಮುಂದೆಯೂ ಸಹ ಧನ ಸಹಾಯ ಮಾಡುವಂತೆ ಅವರು ಕೋರಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑