Tel: 7676775624 | Mail: info@yellowandred.in

Language: EN KAN

    Follow us :


ಕುವೆಂಪು ಮಹಾನ್ ದಾರ್ಶನಿಕರು ದಂಡಾಧಿಕಾರಿ ನಾಗೇಶ್

Posted date: 29 Dec, 2020

Powered by:     Yellow and Red

ಕುವೆಂಪು ಮಹಾನ್ ದಾರ್ಶನಿಕರು ದಂಡಾಧಿಕಾರಿ ನಾಗೇಶ್

ಚನ್ನಪಟ್ಟಣ:ಡಿ/29/20/ಮಂಗಳವಾರ. ಕುವೆಂಪು ರವರು ಕೇವಲ ಕವಿಯಾಗಿರಲಿಲ್ಲ. ಅವರು ಒಬ್ಬ ಮಹಾನ್ ದಾರ್ಶನಿಕರಾಗಿದ್ದರು. ಅವರ ಮಾತು ಮತ್ತು ಕೃತಿಗಳು ಮೌಲ್ಯಯುತವಾಗಿದ್ದವು ಎಂದು ದಂಡಾಧಿಕಾರಿ ನಾಗೇಶ್ ರವರು ಅಭಿಪ್ರಾಯ ಪಟ್ಟರು.

ಅವರು ಇಂದು ತಾಲ್ಲೂಕು ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಕುವೆಂಪು ರವರ 116 ನೇ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.


ಕುವೆಂಪುರವರು ಬರೆದ ಶ್ರೀ ರಾಮಾಯಣ ದರ್ಶನಂ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಬಂದು ಐವತ್ತೊಂದು ವರ್ಷಗಳು ಸಂದಿವೆ. ಇವರು ಹಲವಾರು ಕೃತಿಗಳನ್ನು ರಚಿಸಿದ್ದು ಭಾರತದಲ್ಲೇ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಮಹಾಕವಿ ಮತ್ತು ಅತ್ಯುನ್ನತ ಕೃತಿ ರಚನಾಕಾರರಾಗಿದ್ದಾರೆ ಎಂದು ಬಣ್ಣಿಸಿದರು.


ಅವರ ಜೀವನ ಚರಿತ್ರೆ 'ನೆನಪಿನ ದೋಣಿಯಲ್ಲಿ' ಚನ್ನಪಟ್ಟಣದ ನೆನಹುಗಳನ್ನು ಹಂಚಿಕೊಂಡಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ. ಮಂತ್ರ ಮಾಂಗಲ್ಯಕ್ಕೆ ಮಹತ್ವ ನೀಡಿ, ಬಡವರ ಬದುಕನ್ನು ಹಸನುಗೊಳಿಸಿದ್ದಾರೆ. ಇಂತಹ ಮಹಾನುಭಾವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು.


ಶಿರಸ್ತೇದಾರ ಹರೀಶ್, ಜಯರಾಮು, ಕಂದಾಯ ನಿರೀಕ್ಷಕ ಕಾಂತರಾಜು ಹಾಗೂ ತಾಲ್ಲೂಕು ಕಛೇರಿಯ ಸಿಬ್ಬಂದಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑