Tel: 7676775624 | Mail: info@yellowandred.in

Language: EN KAN

    Follow us :


ಮಕ್ಕಳು ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು: ಸಚಿವ ಎಸ್.ಸುರೇಶ್ ಕುಮಾರ್

Posted date: 02 Jan, 2021

Powered by:     Yellow and Red

ಮಕ್ಕಳು ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು: ಸಚಿವ ಎಸ್.ಸುರೇಶ್ ಕುಮಾರ್

ರಾಮನಗರ:ಜ/02/21/ಶನಿವಾರ. ಮಹಾಭಾರತದಲ್ಲಿ ಅರ್ಜುನ ಏಕಾಗ್ರತೆಯಿಂದ ಬಿಲ್ವಿದ್ಯೆಯಲ್ಲಿ ಪ್ರಾವೀಣ್ಯತೆ ಪಡೆದುಕೊಂಡ. ವಿದ್ಯಾರ್ಥಿಗಳು ಸಹ ಏಕಾಗ್ರತೆಯನ್ನು ರೂಢಿಸಿಕೊಂಡರೆ ಯಾವುದೇ ವಿಷಯವನ್ನು ಸುಲಭವಾಗಿ ಜ್ಞಾನಾರ್ಜನೆ ಮಾಡಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಎಸ್.ಸುರೇಶ್ ಕುಮಾರ್ ಅವರು ತಿಳಿಸಿದರು.


ಅವರು ಇಂದು ರಾಮನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಕ್ಕಳಿಗೆ ಶಾಲಾ ಪ್ರಾರಂಭದಿಂದ ಆದ ಅನೂಕೂಲದ ಬಗ್ಗೆ ಕೇಳಿದಾಗ. ಮಕ್ಕಳು ಆನ್‌ಲೈನ್ ಶಿಕ್ಷಣದಲ್ಲಿ ಅರ್ಥಮಾಡಿಕೊಳ್ಳುವುದು ಸ್ಪಲ್ಪ ಕಷ್ಟವಾಗುತ್ತಿತ್ತು. ಚಂದನದಲ್ಲಿ ಪ್ರಸಾರವಾಗುತ್ತಿದ್ದ ತರಗತಿಗಳು ಏಕಸಂವಾಹನವಾಗಿತ್ತು ಪಾಠದಲ್ಲಿ ಉದ್ಭವವಾಗುತ್ತಿದ್ದ ಸಂದೇಹವನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಶಾಲೆ ಆರಂಭವಾಗಿರುವುದು ಸಂತಸದ ವಿಷಯವಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.


 ಸಚಿವರು ಮಕ್ಕಳಿಗೆ ಈ ಸಾಲಿನ ಪರೀಕ್ಷೆ ಬೇಕೆ ಅಥವಾ ಪರೀಕ್ಷೆ ಇಲ್ಲದೇ ಉತ್ತೀರ್ಣ ಮಾಡುವುದೇ, ಪರೀಕ್ಷೆ ಯಾವಾಗ ನಡೆಸಬೇಕು, ಭಾನುವಾರ ಶಾಲೆಗೆ ರಜೆ ಬೇಕೆ ಎಂದು ಮಕ್ಕಳೊಂದಿಗೆ ಚರ್ಚಿಸಿದಾಗ ಮಕ್ಕಳು ಪರೀಕ್ಷೆ ಬೇಕು ನಾವು ಓದಿರುವ ಬಗ್ಗೆ ಖಾತ್ರಿಯಾಗಬೇಕು. ಪರೀಕ್ಷೆಯನ್ನು ಜೂನ್ ಜುಲೈನಲ್ಲಿ ನಡೆಸಿದರೆ ಓದಿಕೊಳ್ಳಲು ಕಾಲಾವಕಾಶ ದೊರೆಯುತ್ತದೆ. ಭಾನುವಾರವು ಸಹ ಶಾಲೆ ನಡೆಸಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ವಿದ್ಯಾರ್ಥಿಗಳು ನಿಶ್ಚಿಂತೆಯಿಂದ ವಿದ್ಯಾಭ್ಯಾಸ ಮಾಡಿ. ಸಿಕ್ಕಿರುವ ಸಮಯವನ್ನು ವ್ಯರ್ಥ ಮಾಡದೇ ಓದಿಕೊಳ್ಳಿ.  ಪರೀಕ್ಷೆಯ ಬಗ್ಗೆ ಹಾಗೂ ಪರೀಕ್ಷೆಗೆ ನಿಗದಿಪಡಿಸಿರುವ ಪಠ್ಯಗಳ ಬಗ್ಗೆ ತಮಗೆ ಮಾಹಿತಿ ನೀಡಲಾಗುವುದು ಎಂದರು.


 ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದನ್ನು ಮರೆಯಬಾರದು, ಸದಾ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈಗಳನ್ನು ಸ್ವಚ್ಛವಾಗಿಟ್ಟಿಕೊಳ್ಳಿ ಸ್ಯಾನಿಟೈಜರ್ ಬಳಸಿ. ಕರೋನಾದ ಬಗ್ಗೆ ಭಯ ಬೇಡ ಎಚ್ಚರಿಕೆ ಇರಲಿ. ಶಾಲೆಯಲ್ಲಿ ಗುಂಪು ಸೇರಬೇಡಿ. ಶಾಲೆಯನ್ನು ನಡೆಸಲು ವಿದ್ಯಾರ್ಥಿಗಳ ಸಹಕಾರವೂ ಮುಖ್ಯ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಪ್ರಾರಂಭವಾಗಿರುವುದಿಲ್ಲ. ಮಕ್ಕಳು ಬೆಳಿಗ್ಗೆ ಮರೆಯದೇ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಿ ಶಾಲೆಗೆ ಬನ್ನಿ. ವಿದ್ಯಾರ್ಜನೆ ಮಾಡಲು ಶಕ್ತಿ ಬೇಕು. ಬಿಸಿ ಊಟ ಪ್ರಾರಂಭವಾಗುವವರೆಗೂ ಮರೆಯದೇ ಮಧ್ಯಾಹ್ನದ ಊಟ ತನ್ನಿ. ಆರೋಗ್ಯ ಅತ್ಯಂತ ಮುಖ್ಯ ಆದರಿಂದ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಎಂದು ಕಿವಿಮಾತು ಹೇಳಿದರು.


ಸರ್ಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮಾಡಿ ೬೨೫ ಅಂಕ ಪಡೆದ ವಿದ್ಯಾರ್ಥಿಗಳಿದ್ದಾರೆ. ಕೈಯಿಲ್ಲದ ವಿದ್ಯಾರ್ಥಿಯೊಬ್ಬ ತನ್ನ ಕಾಲಿನ ಸಹಾಯದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಶೇ ೭೨ ಅಂಕ ಪಡೆದಿದ್ದಾನೆ. ಇವರೆಲ್ಲರೂ ನಿಮಗೆ ಮಾದರಿ. ಉತ್ತಮವಾಗಿ ವಿದ್ಯಾಭ್ಯಾಸ ನಡೆಸಿ ಶಾಲೆ ಹಾಗೂ ಜಿಲ್ಲೆಗೆ ಒಳ್ಳೆಯ ಹೆಸರನ್ನು ತನ್ನಿ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೋಮಸುಂದರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑