Tel: 7676775624 | Mail: info@yellowandred.in

Language: EN KAN

    Follow us :


ಮಕರ ಸಂಕ್ರಾಂತಿ ಹಬ್ಬವು ರಾಶಿ ರಾಸುಗಳ ಜೊತೆಗೆ ಹೆಣ್ಮಕ್ಕಳ ಹಬ್ಬವೂ ಹೌದು ಜಿಲ್ಲಾಧಿಕಾರಿ ಅರ್ಚನಾ

Posted date: 14 Jan, 2021

Powered by:     Yellow and Red

ಮಕರ ಸಂಕ್ರಾಂತಿ ಹಬ್ಬವು ರಾಶಿ ರಾಸುಗಳ ಜೊತೆಗೆ ಹೆಣ್ಮಕ್ಕಳ ಹಬ್ಬವೂ ಹೌದು ಜಿಲ್ಲಾಧಿಕಾರಿ ಅರ್ಚನಾ

ರಾಮನಗರ:ಜ/14/21/ಗುರುವಾರ. ಮಕರ ಸಂಕ್ರಾಂತಿ ಹಬ್ಬವು ರಾಶಿ, ರಾಸುಗಳ ಜೊತೆಗೆ ರೈತರಿಗೆ ಸುಗ್ಗಿಯ ಹಬ್ಬ. ಹಾಗೆ ಹೆಣ್ಣು ಮಕ್ಕಳಿಗೆ ಬಾಗಿನ ಹಬ್ಬವೂ ಹೌದು ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ಅಭಿಪ್ರಾಯಪಟ್ಟರು.

ಅವರು ಇಂದು ಜಾನಪದ ಲೋಕದಲ್ಲಿ ಸಂಕ್ರಾಂತಿ ಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ನಾನು ಮೈಸೂರಿನಲ್ಲಿ ಬೆಳೆದ ಹೆಣ್ಣು ಮಗಳಾದರೂ ಸಂಕ್ರಾಂತಿ ಹಬ್ಬಗಳಲ್ಲಿ ಭಾಗಿಯಾಗಿದ್ದೇನೆ. ನಮ್ಮ ಎಲ್ಲಾ ಮೊಹಲ್ಲಾಗಳಲ್ಲೂ ಹಸುಗಳನ್ನು ಶೃಂಗರಿಸಿ ಕಿಚ್ಚು ಹಾಯಿಸುತ್ತಿದ್ದರು. ರಾಶಿಗಳ ಪೂಜೆ ನೆರವೇರಿಸುತ್ತಿದ್ದರು. ಈಗ ನಗರದಲ್ಲಿ ಬಹುತೇಕ ಈ ಸಂಪ್ರದಾಯ ಕಣ್ಮರೆಯಾಗಿದ್ದು, ಗ್ರಾಮೀಣ ಭಾಗದಲ್ಲೂ ಸಹ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.


ಕೊರೊನಾ ಇರುವುದರಿಂದ ಇಂದು ಸಾಂಕೇತಿಕವಾಗಿ ಜಾನಪದ ಲೋಕದಲ್ಲಿ ಸರಳವಾಗಿ ಸಂಕ್ರಮಣ ಹಬ್ಬವನ್ನು ಆಚರಿಸಲಾಗುತ್ತಿದೆ. ಮುಂದಿನ ವರ್ಷದಿಂದ ಇಡೀ ಜಿಲ್ಲೆಯ ಜನರಲ್ಲದೆ, ಪ್ರವಾಸಿಗರೂ ವೀಕ್ಷಿಸುವಂತಹ ದೊಡ್ಡ ಮಟ್ಟದಲ್ಲಿ ಹಬ್ಬ ಆಚರಿಸುವಂತಾಗಲಿ ಎಂದು ಹಾರೈಸಿದರು.


ಕರ್ನಾಟಕ ರಾಜ್ಯ ಜಾನಪದ ಪರಿಷತ್ತಿನ ರಾಜ್ಯಾಧಕ್ಷರಾದ ಟ ತಿಮ್ಮೇಗೌಡ ಮಾತನಾಡಿ ಸಂಕ್ರಾಂತಿ ಹಬ್ಬವು ನಮ್ಮ ರೈತರ ಸುಗ್ಗಿಯ ಸಂಕೇತವಾಗಿದೆ. ಈ ಹಬ್ಬವನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುತ್ತಿದ್ದೇವೆ. ಮುಂದಿನ ವರ್ಷದಿಂದ ಅದ್ದೂರಿಯಾಗಿ ಆಚರಿಸಲಾಗುವುದು. ನಾಡೋಜ ಹೆಚ್ ಎಲ್ ನಾಗೇಗೌಡರ ಕನಸಿನ ಕೂಸಾದ ಜಾನಪದ ಲೋಕವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದು ನಮ್ಮೆಲ್ಲರ ಗುರಿಯಾಗಿದೆ. ವಿಶ್ವದರ್ಜೆಯಪ್ರವಾಸಿ ತಾಣವಾಗಿ ರೂಪಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದು, ಆ ನಿಟ್ಟಿನಲ್ಲಿ ಸರ್ಕಾರ ನಮ್ಮ ಜೊತೆ ಕೈಜೋಡಿಸಿರುವುದಕ್ಕೆ ನಮ್ಮ ಸಂಸ್ಥೆಯ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.


ಕಾರ್ಯಕ್ರಮದಲ್ಲಿ ಹೆಚ್ ಎಲ್ ನಾಗೇಗೌಡರ ಪ್ರತಿಮೆಗೆ ಹೂಮಾಲೆ ಅರ್ಪಿಸಿ ನಂತರ ರಾಶಿ ಪೂಜೆ ಮಾಡಲಾಯಿತು, ದೊಡ್ಡ ಕಣ ಮಾಡಿ ಮೇಟಿ ನೆಟ್ಟು, ಮೇಟಿಯ ಸುತ್ತಲೂ ರಾಗಿಯನ್ನು ರಾಶಿ ಹಾಕಲಾಗಿತ್ತು. ಎಡಬಲದಲ್ಲಿ ಅವರೆಕಾಯಿ, ನೆಲಗಡಲೆ ಕಾಯಿ ಮತ್ತು ಗೆಣಸು ರಾಶಿಯನ್ನು ಹಾಕಿ ಪೂಜಿಸಲಾಯಿತು. ರೈತರು ಅಂದು ವ್ಯವಸಾಯಕ್ಕೆ ಉಪಯೋಗಿಸುತ್ತಿದ್ದ ನೇಗಿಲು, ಹಲುಬೆ, ಮರದ ಗಾಡಿ ಸೇರಿದಂತೆ ಅನೇಕ ವಸ್ತುಗಳನ್ನು ಪೇರಿಸಲಾಗಿತ್ತು.


ಕಾರ್ಯಕ್ರಮದ ನಡುವೆ ಹಸುಗಳನ್ನು ಕಿಚಾಯಿಸಿ ಸಂಭ್ರಮಿಸಿದರು. ಜಿಲ್ಲಾಧಿಕಾರಿ ಅರ್ಚನಾ ರವರಿಗೆ ಬಾಗಿನ ನೀಡುವ ಮೂಲಕ ಸನ್ಮಾನಿಸಲಾಯಿತು. ತಮಟೆ ವಾದನ, ಡೊಳ್ಳುಕುಣಿತ, ಹೆಣ್ಣುಮಕ್ಕಳ ಡೊಳ್ಳುಕುಣಿತ, ಜಾನಪದ ಮತ್ತು ಸೋಬಾನೆ ಗೀತಗಾಯನವನ್ನು ಕಲಾವಿದರು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ರುದ್ರಪ್ಪ, ಜಿಲ್ಲಾಧ್ಯಕ್ಷ ಸು ತ ರಾಮೇಗೌಡ, ರಂಗಕರ್ಮಿ ಪ್ರದೀಪ್ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑