Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲೆಯಲ್ಲಿ ಮೂರನೇ‌ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮ ‌ಆರಂಭ: ಎಂ.ಎಸ್.ಅರ್ಚನಾ

Posted date: 01 Mar, 2021

Powered by:     Yellow and Red

ಜಿಲ್ಲೆಯಲ್ಲಿ ಮೂರನೇ‌ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮ ‌ಆರಂಭ: ಎಂ.ಎಸ್.ಅರ್ಚನಾ


ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಇಂದಿನಿಂದ ಆರಂಭಿಸಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ (M.S Archana) ಅವರು‌‌ ತಿಳಿಸಿದರು.


ಅವರು ಇಂದು‌ ಜಿಲ್ಲಾಧಿಕಾರಿಗಳ‌ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಭೆ ನಡೆಸಿ‌ ಮಾತನಾಡಿದರು. 45 ವರ್ಷ ಮೇಲ್ಪಟ್ಟವರು  59 ವರ್ಷದೊಳಗಿನವರು ಕೊಮೊರ್ಬಿಡಿಟಿ ಕಾಯಿಲೆ ಯಿಂದ ಬಳಲುತ್ತಿದ್ದರೆ ಅವರು ಸಹ  ಆರ್.ಎಂ.ಪಿ ವೈದ್ಯರಿಂದ ಕಾಯಿಲೆ ಇರುವ ಬಗ್ಗೆ ದೃಡೀಕರಣ ಪತ್ರ ಸಲ್ಲಿಸಿ ಲಸಿಕೆ ಪಡೆಯಲು ಹೆಸರು ನೊಂದಾಯಿಸಿಕೊಳ್ಳಬಹುದು ಎಂದರು.


ಲಸಿಕೆ ದೊರೆಯುವ ಸ್ಥಳಗಳು:  ಸಾರ್ವಜನಿಕ ರಜೆ ಹೊರತು ಪಡಿಸಿ ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಹೆಸರು ನೊಂದಾಯಿಸಿಕೊಂಡು  ಉಚಿತವಾಗಿ ಲಸಿಕೆ ಪಡೆದುಕೊಳ್ಳಬಹುದು.  ಖಾಸಗಿ ಆಸ್ಪತ್ರೆಗಳಾದ ರಾಮಕೃಷ್ಣ ಆಸ್ಪತ್ರೆ ಹಾಗೂ ದಯಾನಂದ ಸಾಗರ ಆಸ್ಪತ್ರೆಯಲ್ಲಿ ಪ್ರತಿ ಡೋಸ್ ಗೆ ರೂ 250/- ಪಾವತಿಸಿ ಲಸಿಕೆ ಪಡೆಯಬಹುದಾಗಿದೆ ಎಂದರು.


*ನೊಂದಣಿ ವಿಧಾನ :* ಆರೋಗ್ಯ ಸೇತು ಆ್ಯಪ್ ಹಾಗೂ www.selfregistration.cowin.gov.in/ವೆಬ್ ವಿಳಾಸದಲ್ಲಿ ಮೊಬೈಲ್ ಸಂಖ್ಯೆ ಹಾಗೂ ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್, ಮತದಾರ ಗುರುತಿನ ಚೀಟಿ, ಡ್ರೈವಿಂಗ್ ಲೈಸನ್ಸ್  ಇನ್ನಿತರ ಭಾವಚಿತ್ರವಿರುವ ಗುರುತಿನ ಚೀಟಿ ಸಲ್ಲಿಸಿ ತಮಗೆ ಹತ್ತಿರವಿರುವ ಲಸಿಕಾ ಕೇಂದ್ರವನ್ನು ಸಹ ಆಯ್ಕೆ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು. ಆನ್ ಸ್ಪಾಟ್ ನೊಂದಣಿಗೂ ಸಹ ಅವಕಾಶ ಮಾಡಿಕೊಡಲಾಗಿದೆ. ಲಸಿಕೆ ಕೇಂದ್ರಗಳಿಗೆ ದಾಖಲೆಗಳನ್ನು ನೀಡಿ ಸ್ಥಳದಲ್ಲೇ ನೊಂದಣಿ ಸಹ ಮಾಡಿಕೊಂಡು ಲಸಿಕೆ ಪಡೆಯಬಹುದಾಗಿದೆ ಎಂದರು.


*ಅಡ್ಡ ಪರಿಣಾಮವಿಲ್ಲ :* ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. 3 ನೇ ಹಂತದಲ್ಲಿ ಲಸಿಕೆ ನೀಡಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಲಸಿಕೆ ಪಡೆದು ಕೋವಿಡ್  ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕು ಎಂದರು.


ಸಭೆಯಲ್ಲಿ‌ ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್ ಹಾಗೂ ಆರ್.ಸಿ.ಹೆಚ್ ಅಧಿಕಾರಿ ಡಾ: ಪದ್ಮ( Dr Padma) ಅವರು ಉಪಸ್ಥಿತರಿದ್ದರು.


*ಚನ್ನಪಟ್ಟಣದ ವರದಿ*

ಇಂದು ಮಧ್ಯಾಹ್ನ ಹನ್ನೆರಡು ಗಂಟೆಯ ನಂತರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಹ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಹಾಗೂ ಕಳೆದ ತಿಂಗಳು ಲಸಿಕೆ ಪಡೆದಿದ್ದ ಕೊರೊನಾ ವಾರಿಯರ್ಸ್‌ ಗಳಿಗೆ ಲಸಿಕೆ ನೀಡಲಾಯಿತು.


ಗೋ ರಾ ಶ್ರೀನಿವಾಸ...

ಮೊ:9845856139. ‌

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑