Tel: 7676775624 | Mail: info@yellowandred.in

Language: EN KAN

    Follow us :


ಶಾಂತಿಯುತ, ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಡಳಿತ ಸಜ್ಜು: ಡಾ ರಾಕೇಶ್ ಕುಮಾರ್ ಕೆ

Posted date: 19 Apr, 2021

Powered by:     Yellow and Red

ಶಾಂತಿಯುತ, ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಡಳಿತ ಸಜ್ಜು: ಡಾ ರಾಕೇಶ್ ಕುಮಾರ್ ಕೆ

ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಯ ಒಟ್ಟು 62 ವಾಡ್೯ಗಳಲ್ಲಿ ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.


ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ದಿನಾಂಕ:  08-04-2021 ರಿಂದ 30-04-2021 ರವರೆಗೆ ಚುನಾವಣೆ ನಡೆಯುವ ನಗರಸಭೆ ವ್ಯಾಪ್ತಿಯಲ್ಲಿ ಮಾತ್ರ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಸದರಿ ಚುನಾವಣೆಯ ಮತದಾನವು ದಿನಾಂಕ: 27-04-2021 ರಂದು ಬೆಳಿಗ್ಗೆ 07-00 ಗಂಟೆಯಿಂದ ಸಾಯಂಕಾಲ 05.00 ಗಂಟೆಯವರೆಗೆ ನಡೆಯಲಿದೆ. ಅದರನ್ವಯ ಚುನಾವಣೆ ನಡೆಸಲು ಜಿಲ್ಲಾಡಳಿತವು ಸಂಪೂರ್ಣವಾಗಿ ಸಜ್ಜಾಗಿರುತ್ತದೆ ಎಂದರು.


ರಾಮನಗರ ನಗರಸಭೆಯ 31 ವಾಡ್೯ಗಳ  ಚುನಾವಣೆಗೆ 4 ಚುನಾವಣಾ ಅಧಿಕಾರಿ 4 ಸಹಾಯಕ ಚುನಾವಣಾ ಅಧಿಕಾರಿಗಳು ಮತದಾನದ ದಿನಕ್ಕೆ  83 ಪಿ.ಆರ್.ಓ, 83 ಎ.ಪಿ.ಆರ್.ಓ, 166 ಪಿಓ ಸೇರಿದಂತೆ ಒಟ್ಟು 332 ಮತಗಟ್ಟೆ ಸಿಬ್ಬಂದಿಗಳನ್ನು ನೇಮಕಮಾಡಲಾಗಿದೆ. 


ರಾಮನಗರ ನಗರ ಸಭೆಯ 31 ವಾಡ್೯ ಗಳಿಂದ ಒಟ್ಟು 145 ನಾಮ ಪಾತ್ರಗಳು ಸ್ವೀಕೃತ ವಾಗಿದ್ದು. 12 ತಿರಸ್ಕತ ಕೊಂಡು 133 ನಾಮ ಪತ್ರ ಗಳು ಕ್ರಮ ಬದ್ಧವಾಗಿ ನಾಮ ನಿರ್ದೇಶಿತವಾಗಿರುತ್ತದೆ.


ರಾಮನಗರ ನಗರಸಭೆಗೆ ಸಂಬಂಧಿಸಿದಂತೆ 72 ಮತಾಗಟ್ಟೆಗಳು ಹಾಗೂ ಹೆಚ್ಚುವರಿ 4 ಮತಗಟ್ಟೆಗಳು ಸೇರಿದಂತೆ ಒಟ್ಟು 76 ಮತಗಟ್ಟೆಗಳನ್ನು ತೆರೆಯಲಾಗುವುದು.  ರಾಮನಗರ ನಗರ ಸಭೆ ಚುನಾವಣೆಯಲ್ಲಿ 38,738 ಗಂಡಸರು, 40,780 ಹೆಂಗಸರು ಇತರೆ 12 ಸೇರಿದಂತೆ ಒಟ್ಟು 79,530 ಮತದಾರರಿದ್ದಾರೆ.  


ರಾಮನಗರ ನಗರ ಸಭೆಯ ಚುನಾವಣೆಯ ಮಸ್ಟರಿಂಗ್,  ಡಿ-ಮಸ್ಟರಿಂಗ್, ಮತ ಎಣೆಕೆ ಕಾರ್ಯವು  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. 



*ಚನ್ನಪಟ್ಟಣ* ನಗರ ಸಭೆಯ 31 ವಾಡ್೯ಗಳ ಚುನಾವಣೆಗೆ  4 ಚುನಾವಣಾ ಅಧಿಕಾರಿ 4 ಸಹಾಯಕ ಚುನಾವಣಾ ಅಧಿಕಾರಿ ನೇಮಕ ಮಾಡಲಾಗಿದೆ. ಮತದಾನಕ್ಕಾಗಿ 69 ಪಿ.ಆರ್.ಓ, 69 ಎ.ಪಿ.ಆರ್.ಓ, 138 ಪಿಓ ಸೇರಿದಂತೆ ಒಟ್ಟು 276 ಮತಗಟ್ಟೆ ಸಿಬ್ಬಂದಿಗಳನ್ನು ನೇಮಕಮಾಡಲಾಗಿದೆ.


ಚನ್ನಪಟ್ಟಣ ನಗರ ಸಭೆ ಚುನಾವಣೆಗೆ 134 ನಾಮ ಪತ್ರಗಳು ಸ್ವೀಕೃತ ವಾಗಿದ್ದು. 128 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿರುತ್ತದೆ. 


ಚನ್ನಪಟ್ಟಣ ನಗರ ಸಭೆಗೆ  ಸಂಬಂಧಿಸಿದಂತೆ 57 ಮತಗಟ್ಟೆಗಳು ಹಾಗೂ ಹೆಚ್ಚುವರಿ 2 ಮತಗಟ್ಟೆಗಳು ಸೇರಿದಂತೆ ಒಟ್ಟು 59 ಮತಗಟ್ಟೆಗಳನ್ನು ತೆರೆಯಲಾಗುವುದು.

 ಚನ್ನಪಟ್ಟಣ ನಗರ ಸಭೆಗೆ ಸಂಬಂಧಿಸಿದಂತೆ ಚುನಾವಣೆಯಲ್ಲಿ 28,693 ಗಂಡಸು, 30,227  ಹೆಂಗಸು  ಸೇರಿದಂತೆ ಒಟ್ಟು 58,920 ಮತದಾರರಿದ್ದಾರೆ.  


ಚನ್ನಪಟ್ಟಣ ನಗರ ಸಭೆಯ ಚುನಾವಣೆಯ ಮಸ್ಟರಿಂಗ್,  ಡಿ-ಮಸ್ಟರಿಂಗ್,  ಮತ ಎಣೆಕೆ ಕಾರ್ಯವು  ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದರು. 


ಚುನಾವಣೆ ನಡೆಯುತ್ತಿರುವ ನಗರಸಭೆ ವ್ಯಾಪ್ತಿಯಲ್ಲಿ ಭಾವಚಿತ್ರವಿರುವ ಬ್ಯಾನರ್ ಮತ್ತು ಬಂಟಿಂಗ್ಸ್ ಗಳನ್ನು ತೆರವುಗೊಳಿಸಲಾಗಿರುತ್ತದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಹಿತದೃಷ್ಟಿಯಿಂದ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಯಾಗಿ ಶ್ರೀ. ಸಿ. ರಘು (ಪ್ರಭಾರ), ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿಕೋಶ, ರಾಮನಗರ ಇವರನ್ನು ನೇಮಕ ಮಾಡಲಾಗಿರುತ್ತದೆ ಹಾಗೂ ಪ್ರತಿ ನಗರಸಭಾ ವ್ಯಾಪ್ತಿಗೆ 3 ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಲಾಗಿರುತ್ತದೆ ಎಂದರು. 


ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಆಯಾಯ ನಗರಸಭೆ  ವ್ಯಾಪ್ತಿಯಲ್ಲಿ ಬಂದೂಕು ಹಾಗೂ ಶಸ್ತ್ರಗಳನ್ನು ಹೊಂದಿರುವಂತಹವರು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಜಮೆ ಮಾಡಿಕೊಳ್ಳಲು ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಲಾಗಿದೆ ಎಂದರು.


ಕೋವಿಡ್ ನಿಯಮಾವಳಿಗಳನ್ನು ಚುನಾವಣೆಯ ಸಂದರ್ಭಗಳಲ್ಲಿ ಅನುಸರಿಸಲಾಗುವುದು. ಕೋವಿಡ್ ನಿಯಮಾವಳಿ ಪಾಲನೆಯ ಬಗ್ಗೆ ಪ್ರಚಾರ ಸಂದರ್ಭಗಳಲ್ಲಿ ವಿಶೇಷವಾಗಿ ನಿಗಾ ವಹಿಸಲಾಗುವುದು. ಕೋವಿಡ್ ಪಾಸಿಟಿವ್ ಇರುವವರಿಗೂ ಮತದಾನದ ಕೊನಯ ಒಂದು ಗಂಟೆಗಳ ಕಾಲ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.


ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ ಅವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑