Tel: 7676775624 | Mail: info@yellowandred.in

Language: EN KAN

    Follow us :


ನಾನೇ ರೆಬೆಲ್ ಎನ್ನುತ್ತಿದ್ದ ಜೆಸಿಬಿ ಲೋಕೇಶ್ ಕುಟುಂಬ ನಾಯಕರ ಮಾತಿಗೆ ಬೆಲೆ ನೀಡಿ ಎಜಿಎಸ್ ಕುಟುಂಬಕ್ಕೆ ಶರಣು

Posted date: 20 Apr, 2021

Powered by:     Yellow and Red

ನಾನೇ ರೆಬೆಲ್ ಎನ್ನುತ್ತಿದ್ದ ಜೆಸಿಬಿ ಲೋಕೇಶ್ ಕುಟುಂಬ ನಾಯಕರ ಮಾತಿಗೆ ಬೆಲೆ ನೀಡಿ ಎಜಿಎಸ್ ಕುಟುಂಬಕ್ಕೆ ಶರಣು

ನನಗೆ ಪಕ್ಷ ತಾಯಿ ಇದ್ದಂತೆ, ಆ ಪಕ್ಷಕ್ಕೆ ದ್ರೋಹ ಬಗೆಯಲಾರೆ. ಯಾರದೋ ಮೂರನೇ ವ್ಯಕ್ತಿಯ ಮಾತಿಗೆ ನಾನು ಮತ್ತು ಎ ಜಿ ಸ್ವಾಮಿಯವರು ಅಸಮಧಾನಗೊಳ್ಳುವಂತೆ ಆಯಿತು. ಹಾಗಾಗಿ ಈ ನಗರಸಭೆಯ ಚುನಾವಣೆಯಲ್ಲಿ ನಾನು ಜೆಡಿಎಸ್ ಅಭ್ಯರ್ಥಿಯಾದ ಶಶಿರೇಖಾ ಎ ಜಿ ಸ್ವಾಮಿ ರವರಿಗೆ ಸಂಪೂರ್ಣ ಸಹಕಾರ ನೀಡಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು 31 ನೇ ವಾರ್ಡ್ ನ ಮಾಜಿ ನಗರಸಭಾ ಸದಸ್ಯ ಜೆಸಿಬಿ ಲೋಕೇಶ್ ತಿಳಿಸಿದರು.

ಅವರು ಇಂದು ತಾಲ್ಲೂಕು ಜೆಡಿಎಸ್ ಪಕ್ಷದ ವತಿಯಿಂದ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಸ್ವಾಮಿ ಯವರೂ ಸಹ ನನಗೆ ಆತ್ಮೀಯರು. ಅವರು ಹೇಳಿಕೆಯ ಮಾತನ್ನು ಕೇಳಲಾಗಿ ಇಷ್ಟೊಂದು ಅವಾಂತರಗಳಾದವು. ಅವರೇ ನೇರವಾಗಿ ಬಂದಿದ್ದರೆ ಇಷ್ಟೊಂದು ಸಮಸ್ಯೆಗಳಾಗುತ್ತಿರಲಿಲ್ಲ. ಸಮಯದ ಅಭಾವದಿಂದ ನನ್ನ ಮಡದಿ ಪ್ರಭಾವತಿ ಲೋಕೇಶ್ ರವರ ನಾಮಪತ್ರವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ‌. ಹಾಗಾಗಿ ನಾನು ಯಾವುದೇ ಕಾರಣಕ್ಕೂ ನಮ್ಮ ಕುಟುಂಬಕ್ಕೆ ಮತ ಯಾಚಿಸುವುದಿಲ್ಲ. ಈ ವಾರ್ಡ್ ನ ಎಲ್ಲಾ ಮತದಾರರನ್ನು ಓಲೈಸಿ ಶಶಿರೇಖಾ ರವರನ್ನು ಗೆಲ್ಲಿಸುತ್ತೇವೆ ಎಂದರು.


ಬಂಡಾಯ ಅಭ್ಯರ್ಥಿ ಪ್ರಭಾವತಿ ಲೋಕೇಶ್ ರವರು ಮಾತನಾಡಿ ನಮ್ಮ ಕುಟುಂಬಕ್ಕೆ ನಮ್ಮ ಪಕ್ಷದ ಕೆಲವರು ಅನ್ಯಾಯ ಎಸಗಿದ್ದಾರೆ‌. ಅವರೇ ದೊಡ್ಡವರು ಎನಿಸಿಕೊಳ್ಳಲಿ. ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಈ ವಾರ್ಡ್ ನ್ನು ಜೆಡಿಎಸ್ ಭದ್ರಕೋಟೆಯನ್ನಾಗಿ ಮಾಡಿದ್ದೆವು. ನಗರದಲ್ಲಿ ಹೆಚ್ಚು ಕೆಲಸಗಳನ್ನು ಮಾಡಿದ ವಾರ್ಡ್ ಎಂಬ ಹಣೆಪಟ್ಟಿಯನ್ನು ಈ ವಾರ್ಡ್ ಪಡೆದಿದೆ. ಆದರೂ ಸಹ ನೀವೆಲ್ಲರೂ ನಮಗೆ ಮೋಸ ಮಾಡಿದ್ದೀರಿ ಎಂದು ಅಳಲು ತೋಡಿಕೊಂಡ ಅವರು ನಾನು ಸಹ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದರು. ಇದೇ ವೇಳೆ ಅಭ್ಯರ್ಥಿ ಶಶಿರೇಖಾ ಮತ್ತು ಎ ಜಿ ಸ್ವಾಮಿ ಮಾತನಾಡಿ ನಾವು ಬೇರೆ ಅಲ್ಲಾ ಲೋಕೇಶ್ ರವರ ಕುಟುಂಬ ಬೇರೆ ಅಲ್ಲಾ, ನಾವಿಬ್ಬರು ಸೇರಿ ಪಕ್ಷವನ್ನು ಬಲಪಡಿಸುತ್ತೇವೆ. ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಮತದಾರರ ಆಶೀರ್ವಾದ ನಮ್ಮ ಮೇಲಿದೆ ಎಂದರು.


ಜೆಡಿಎಸ್ ನ ತಾಲ್ಲೂಕು ನಾಯಕರಾದ ಹಾಪ್ ಕಾಮ್ಸ್ ದೇವರಾಜು ಮಾತನಾಡಿ ಪಕ್ಷದ ಕೆಲವರಲ್ಲಿ ಕೆಲ ಗೊಂದಲಗಳಿದ್ದು ಅವುಗಳನ್ನು ಪರಿಹರಿಸಿದ್ದೇವೆ. ಎಲ್ಲಾ ಕಡೆ ಇರುವಂತೆ ನಮ್ಮ ಪಕ್ಷದಲ್ಲೂ ಗೊಂದಲ ಇತ್ತು. ಇಂದು ಶಮನಗೊಳಿಸಿದ್ದೇವೆ. ಜೆಸಿಬಿ ಲೋಕೇಶ್ ಕುಟುಂಬವು ಶಶಿರೇಖಾ ರವರಿಗೆ ಸಹಕಾರ ನೀಡಲಿದೆ ಎಂದರು. ಇದೇ ವೇಳೆ ಎ ಜಿ ಸ್ವಾಮಿ ರವರು ಲೋಕೇಶ್ ಮತ್ತು ಶಶಿರೇಖಾ ರವರು ಪ್ರಭಾವತಿ ರವರಿಗೆ ಹೂವಿನ ಹಾರ ಹಾಕಿ ಸಿಹಿ ತಿನ್ನಿಸಿದರು.

ಸಭೆಯಲ್ಲಿ ತಾಲ್ಲೂಕಿನ ಜೆಡಿಎಸ್ ಮುಖಂಡರು, ಸ್ಥಳೀಯ ಕಾರ್ಯಕರ್ತರು ಮತ್ತು ಮತದಾರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑