Tel: 7676775624 | Mail: info@yellowandred.in

Language: EN KAN

    Follow us :


ಯೋಗೇಶ್ವರ್ ಯಡಿಯೂರಪ್ಪ ನಾಯಕತ್ವದ ಬಗ್ಗೆ ಮಾತನಾಡಿಲ್ಲ, ಕ್ಷೇತ್ರದ ಜನರು ಪ್ರತಿಭಟನೆ ಮಾಡಬೇಕಾಗುತ್ತದೆ. ಮಲವೇಗೌಡ

Posted date: 30 May, 2021

Powered by:     Yellow and Red

ಯೋಗೇಶ್ವರ್ ಯಡಿಯೂರಪ್ಪ ನಾಯಕತ್ವದ ಬಗ್ಗೆ ಮಾತನಾಡಿಲ್ಲ, ಕ್ಷೇತ್ರದ ಜನರು ಪ್ರತಿಭಟನೆ ಮಾಡಬೇಕಾಗುತ್ತದೆ. ಮಲವೇಗೌಡ

ಕಳೆದೆರಡು ದಿನಗಳಿಂದ ರೇಣುಕಾ ಚಾರ್ಯ ಮತ್ತು ಸುರೇಶ್ ಗೌಡ ಸೇರಿದಂತೆ, ಕೆಲವು ಶಾಸಕರು ನಮ್ಮ ನಾಯಕರಾದ ಸಚಿವ ಸಿ ಪಿ ಯೋಗೇಶ್ವರ್ ಬಗ್ಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಸಚಿವರು ಎಲ್ಲಿಯೂ ಯಡಿಯೂರಪ್ಪ ನವರ ನಾಯಕತ್ವ ಮತ್ತು ವ್ಯಕ್ತಿತ್ವದ ಬಗ್ಗೆ ಮಾತನಾಡಿಲ್ಲ. ನಿನ್ನೆ ದಿನ ಸ್ಪಷ್ಟತೆಯನ್ನು ನೀಡಿದ್ದಾರೆ. ಆದರೂ ಸಹ ಕೆಲ ಹಾಲಿ, ಮಾಜಿ ಶಾಸಕರು ನಮ್ಮ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಹೀಗೆ ಮುಂದುವರಿದರೆ ಅವರ ಮನೆಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ. ಎಂದು ಚನ್ನಪಟ್ಟಣ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್ ಎನ್ ಮಲವೇಗೌಡ ತಿಳಿಸಿದರು.

ಅವರು ಇಂದು ನಗರದ ಐದನೇ ತಿರುವಿನಲ್ಲಿರುವ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಸಿ ಪಿ ಯೋಗೇಶ್ವರ್ ರವರು ಪ್ರಮುಖರನ್ನು ಭೇಟಿಯಾಗಲು, ಕುಶಲೋಪರಿ ವಿಚಾರಿಸಲು, ವಾರ, ಹದಿನೈದು ದಿನಗಳಿಗೊಮ್ಮೆ ದೆಹಲಿಗೆ ಹೋಗುತ್ತಾರೆ. ಇದರಲ್ಲಿ ಯಾವುದೇ ವಿಶೇಷವಿಲ್ಲ. ಇದನ್ನೇ ಅವರ ರಾಜಕೀಯ ಬಂಡವಾಳ ಮಾಡಿಕೊಂಡ ಶಾಸಕ ರೇಣುಕಾ ಚಾರ್ಯ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ. ರೇಣುಕಾ ಚಾರ್ಯ ನರ್ಸ್ ಜಯಲಕ್ಷ್ಮಿ ಯವರ ಬಗ್ಗೆ ಹೇಗೆಲ್ಲಾ ನಡೆದುಕೊಂಡರು ಎಂಬುದು ದೇಶಕ್ಕೆ ಗೊತ್ತಿದೆ. ಈ ಮೊದಲು ಇದೇ ರೇಣುಕಾಚಾರ್ಯ ವಿಯೇಂದ್ರ ಮತ್ತು ಯಡಿಯೂರಪ್ಪ ನ ವಿರುದ್ಧ ಇದ್ದರು. ಈಗ ನಮ್ಮ ನಾಯಕರ ವಿರುದ್ಧ ಇದ್ದಾರೆ. ಇದು ಅವರ ನಡವಳಿಕೆಯನ್ನು ತೋರಿಸುತ್ತದೆ ಎಂದರು.


ತುಮಕೂರು ಕ್ಷೇತ್ರದ ಮಾಜಿ ಶಾಸಕ ಹಾಗೂ ಜಿಲ್ಲಾಧ್ಯಕ್ಷ ಸುರೇಶ್ ಗೌಡ ರವರು ಸಚಿವರನ್ನು ರಾಜೀನಾಮೆ ನೀಡುವಂತೆ ಆಗ್ರಹಿಸಿರುವುದು ಹಾಸ್ಯಾಸ್ಪದ. ಅವರು ಒಬ್ಬ ಜಿಲ್ಲಾಧ್ಯಕ್ಷರಾಗಿ ಒಬ್ಬ ಸಚಿವರನ್ನು ರಾಜೀನಾಮೆ ಕೇಳುವುದು ಸರಿಯಲ್ಲ. ಕೇವಲ ಎರಡ್ಮೂರು ಶಾಸಕರು ಬಿಟ್ಟರೆ, ಯಾರೂ ನಮ್ಮ ನಾಯಕರ ವಿರುದ್ಧ ಮಾತನಾಡುತ್ತಿಲ್ಲ. ಇವರ ರಾಜಕೀಯ ಬೆಳವಣಿಗೆಗಾಗಿ ದೂರುತ್ತಿದ್ದಾರೆ. ಯಡಿಯೂರಪ್ಪ ನವರಾಗಲಿ, ವಿಜಯೇಂದ್ರ ರವರಾಗಲಿ ಎಲ್ಲೂ ನಮ್ಮ ನಾಯಕರ ವಿರುದ್ಧ ಅಸಮಧಾನ ವ್ಯಕ್ತಪಡಿಸಿಲ್ಲ. ಸಚಿವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಯಡಿಯೂರಪ್ಪ ನವರು ಎಂಎಲ್ಸಿ ಮಾಡಿದ್ದಾರೆ, ಮಂತ್ರಿ ಮಾಡಿದ್ದಾರೆ. ಮತ್ಯಾಕೆ ನಾಯಕತ್ವ ಬದಲಾವಣೆ ? ಇದು ಶುದ್ಧ ಸುಳ್ಳು ಎಂದರು.


ನಗರ ಘಟಕದ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಇನ್ನು ಮುಂದೆ ಸಚಿವರ ಬಗ್ಗೆ ಅವಹೇಳನಕಾರಿಯಾಗಿ, ಮಾತನಾಡುವ ಸ್ವಪಕ್ಷ ನಾಯಕರ ವಿರುದ್ಧ ಚನ್ನಪಟ್ಟಣ ಕ್ಷೇತ್ರದ ಜನರು ಅವರ ಮನೆಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ. ನಮ್ಮ ನಾಯಕರು ಯಾವ ತಪ್ಪನ್ನೂ ಮಾಡಿಲ್ಲ. ಮಾಡುವುದು ಇಲ್ಲ. ಹಳೇ ಮೈಸೂರು ಭಾಗದ ಮುಂಚೂಣಿ ನಾಯಕರಾಗಿರುವ ಸಚಿವರನ್ನು ತೇಜೋವಧೆ ಮಾಡುವುದು ತರವಲ್ಲ ಎಂದರು.


ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹರೂರು ರಾಜಣ್ಣ, ಸಿ ಪಿ ನಾಗೇಶ್, ವಕೀಲ ನಿಂಗಪ್ಪ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಶಿವಲಿಂಗಯ್ಯ, ಯು ಬಿ ಚಂದ್ರು, ರಾಮು, ಪ್ರಭು, ಕೋಟೆ ಚಂದ್ರು, ರಾಮಚಂದ್ರ, ಕೃಷ್ಣಪ್ಪ ಮತ್ತು ಕುಮಾರ್ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑