Tel: 7676775624 | Mail: info@yellowandred.in

Language: EN KAN

    Follow us :


ಮಾಕಳಿ ಸೆಕ್ರೆಟರಿಗೆ ಕಿರುಕುಳ; ಪೋಲೀಸರ ಹೆಸರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

Posted date: 02 Jun, 2021

Powered by:     Yellow and Red

ಮಾಕಳಿ ಸೆಕ್ರೆಟರಿಗೆ ಕಿರುಕುಳ; ಪೋಲೀಸರ ಹೆಸರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ತಾಲ್ಲೂಕಿನ ಮಾಕಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಮೇಶ್ ರವರು ಎಂ ಕೆ ದೊಡ್ಡಿ ಪೋಲಿಸ್ ಠಾಣೆಗಳು ಸಬ್ ಇನ್ಸಪೆಕ್ಟರ್ ಸದಾನಂದ ರವರ ಹೆಸರಿಗೆ ಡೆತ್ ನೋಟ್ ಬರೆದಿಟ್ಟು, ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇಂದು ಮುಂಜಾನೆ ನಡೆದಿದೆ.


ರಮೇಶ್ ಬಿನ್ ಲೇಟ್ ರಾಮೇಗೌಡ ಎಂಬ ಮಾಕಳಿ ಗ್ರಾಮದ ವ್ಯಕ್ತಿಯೋರ್ವರು ಕಳೆದ15 ವರ್ಷಗಳಿಂದ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಅಧ್ಯಕ್ಷ ಉಮೇಶ್ ಲೇಟ್ ಜವರೇಗೌಡ, ಸದಸ್ಯರಾದ ಪ್ರೇಮಾ ಸಿದ್ದರಾಜು ಮತ್ತು ರಾಜೇಗೌಡ ಬಿನ್ ಅರೆ ತಿಮ್ಮೇಗೌಡ ಎಂಬ ಈ ಮೂರು ಜನರು ನನ್ನನ್ನು ವೈಯುಕ್ತಿಕವಾಗಿ ದ್ವೇಷಿಸುತ್ತಿದ್ದರು. ಇದನ್ನೇ ಮುಂದುವರೆಸಿದ ಅವರು ಸಂಘದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಗ್ರಾಮದಲ್ಲಿ ಹೇಳಿಕೊಂಡು ತಿರುಗುತ್ತಿದ್ದರು.


ನನಗೆ ಇದು ಇರುಸುಮುರುಸು ಉಂಟು ಮಾಡಿದ್ದಲ್ಲದೆ, ಗ್ರಾಮದಲ್ಲಿ ತಲೆ ಎತ್ತಲಾಗದ ಸ್ಥಿತಿಯನ್ನು ತಂದಿಟ್ಟಿದ್ದು, ಈ ಮೂರು ಮಂದಿಯನ್ನು ಪಿಎಸ್ಐ ಸದಾನಂದ ರವರು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕೇಂದು ಅವರು ಮರಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಎಂ ಕೆ ದೊಡ್ಡಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು, ಶವವನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು.


ಆಸ್ಪತ್ರೆಯ ಆವರಣದಲ್ಲಿ ತಾಲ್ಲೂಕು ಎಂಪಿಸಿಎಸ್ ನ ತಾಲ್ಲೂಕು ಅಧ್ಯಕ್ಷ ಪುಟ್ಟೇಗೌಡ, ಮಾಜಿ ಅಧ್ಯಕ್ಷ ದೇವರಾಜು, ಸೆಕ್ರೆಟರಿಗಳಾದ ಪುಟ್ಟರಾಜು ಮತ್ತು ಶೇಖರ್ ರವರು ಮಾತನಾಡಿ, ಕೆಲ ಗ್ರಾಮಗಳಲ್ಲಿ ಸಣ್ಣ ರಾಜಕೀಯ ಮಾಡುವ ಕೆಲ ಮಂದಿಯಿಂದ ಸೆಕ್ರೆಟರಿಗಳು ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ಬಂದೊದಗಿದೆ. ರಮೇಶ್ ರವರ ಸಾವಿಗೆ ಕಾರಣರಾದವರಿಂದ ಕನಿಷ್ಠ 50 ಲಕ್ಷ ಪರಿಹಾರ ಕೊಡಿಸಬೇಕು. ಸಂಘ ಮತ್ತು ಬಮೂಲ್ ನಿಂದಲೂ ಅವರಿಗೆ ಪರಿಹಾರ ನೀಡಲು ಮನವಿ ಮಾಡುತ್ತೇವೆ. ಇದರ ಜೊತೆಗೆ ಶವಸಂಸ್ಕಾರ ಮಾಡುವ ಮುನ್ನವೇ, ಬಮೂಲ್ ನಿರ್ದೇಶಕರು, ಆಡಳಿತ ಮಂಡಳಿ ಮತ್ತು ತಾಲ್ಲೂಕು ಆಡಳಿತ ಒಗ್ಗೂಡಿ ರಮೇಶ್ ರವರ ಪತ್ನಿಗೆ ಸೆಕ್ರೆಟರಿ ಹುದ್ದೆ ನೀಡಬೇಕು ಎಂದು ಆಗ್ರಹಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑