Tel: 7676775624 | Mail: info@yellowandred.in

Language: EN KAN

    Follow us :


ಇಂದಿನಿಂದ ಆರಂಭಗೊಂಡ ಎಸ್ಎಸ್ಎಲ್ಸಿ ಪರೀಕ್ಷೆ. 17 ಪರೀಕ್ಷೆ ಕೇಂದ್ರಗಳು, 3,104 ವಿದ್ಯಾರ್ಥಿಗಳು

Posted date: 19 Jul, 2021

Powered by:     Yellow and Red

ಇಂದಿನಿಂದ ಆರಂಭಗೊಂಡ ಎಸ್ಎಸ್ಎಲ್ಸಿ ಪರೀಕ್ಷೆ. 17 ಪರೀಕ್ಷೆ ಕೇಂದ್ರಗಳು, 3,104 ವಿದ್ಯಾರ್ಥಿಗಳು

ರಾಜ್ಯದಾದ್ಯಂತ ಇಂದು ನಡೆಯುತ್ತಿರುವ ಎಸ್ಎಸ್ಎಲ್ಸಿ ಪರೀಕ್ಷೆಯು ತಾಲ್ಲೂಕಿನಲ್ಲಿಯೂ ನಡೆಯುತ್ತಿದೆ. ತಾಲ್ಲೂಕಿನಾದ್ಯಂತ ಒಟ್ಟು ಹದಿನೇಳು ಕೇಂದ್ರಗಳಲ್ಲಿ ಒಟ್ಟು 3,104 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿದ್ದು, ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆಯ, ಸ್ಕೌಟ್ ಗೈಡ್ ಜೊತೆಗೂಡಿ ಮುಂಜಾಗ್ರತಾ ಕ್ರಮ ಕೈಗೊಂಡಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು ತಿಳಿಸಿದರು.


ನಗರದ  ಬಾಲಕರ ಪದವಿ ಪೂರ್ವ ಕಾಲೇಜು, ಬಾಲಕಿಯರ ಪದವಿ ಪೂರ್ವ ಕಾಲೇಜು, ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯ, ಬಾಲು ಪಬ್ಲಿಕ್ ಶಾಲೆ, ಸೇಂಟ್ ಆನ್ಸ್ ಶಾಲೆ, ಸೇಂಟ್ ಜೋಸೆಫ್ ಶಾಲೆ ಮತ್ತು ಆ್ಯಪಲ್ ಶಾಲೆಯನ್ನು ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಗ್ರಾಮೀಣ ಭಾಗದಲ್ಲಿ ಕೋಡಂಬಳ್ಳಿ, ಅಕ್ಕೂರು, ಹೊಂಗನೂರು, ಅರಳಾಳುಸಂದ್ರ, ಇಗ್ಗಲೂರು, ಚಕ್ಕೆರೆ, ಮತ್ತೀಕೆರೆ-ಶೆಟ್ಟಿಹಳ್ಳಿ, ಹೊನ್ನನಾಯಕನಹಳ್ಳಿ, ಬೇವೂರು ಮತ್ತು ನಾಗವಾರ ಗ್ರಾಮಗಳ  ಮತ್ತು ಅನುದಾನಿತ ಶಾಲೆಗಳನ್ನು ಪರೀಕ್ಷಾ ಕೇಂದ್ರಗಳನ್ನಾಗಿ ಆಯ್ಕೆ ಮಾಡಿಕೊಂಡಿರುವುದಾಗಿ ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ಯೋಗೇಶ್ ಮಾಹಿತಿ ನೀಡಿದ್ದಾರೆ.


ಒಟ್ಟು ಹದಿನೇಳು ಕೇಂದ್ರಗಳಲ್ಲಿ 1587 ಗಂಡು ಮಕ್ಕಳು ಮತ್ತು 1517 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 3,104 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಪ್ರತಿ ಡೆಸ್ಕ್ ಗೆ ಒಬ್ಬ ವಿದ್ಯಾರ್ಥಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಒಳಬರುವ ಮುಂಚೆಯೇ ಪ್ರತಿ ವಿದ್ಯಾರ್ಥಿಗಳಿಗೆ ಮಾಸ್ಕ್, ನೀಡಲಾಗುತ್ತಿದ್ದು, ಸ್ಯಾನಿಟೈಸರ್ ಮಾಡಲಾಗುತ್ತಿದೆ. ಕೋವಿಡ್ ಟೆಂಪ್ರೇಚರ್ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಯಾವುದೇ ವಿದ್ಯಾರ್ಥಿಗಳಿಗೆ ಕೋವಿಡ್ ಶಂಕೆ ಕಂಡುಬಂದರೆ, ಅವರನ್ನು ನೇರವಾಗಿ ಆ್ಯಂಬುಲೆನ್ಸ್ ಮೂಲಕ ಹೊನ್ನನಾಯಕನಹಳ್ಳಿ ಗ್ರಾಮದಲ್ಲಿರುವ ಕೋವಿಡ್ ಸೆಂಟರ್ ಗೆ ಕರೆದೊಯ್ದು, ಪರೀಕ್ಷೆ ಬರೆಸಲಾಗುವುದು ಎಂದು ತಿಳಿಸಿದ್ದಾರೆ.


ತಾಲೂಕಿನಾದ್ಯಂತ ಇರುವ ಹದಿನೇಳು ಪರೀಕ್ಷಾ ಕೇಂದ್ರಗಳಲ್ಲಿ 288 ಕೊಠಡಿಗಳನ್ನು ಸಜ್ಜುಗೊಳಿಸಿದ್ದು, ಒಟ್ಟಾರೆ 544 ಮಂದಿ ವಿವಿಧ ರೀತಿಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇಂದು ಬೆಳಿಗ್ಗೆ 10:30 ರಿಂದ ಮಧ್ಯಾಹ 01:30 ರವರೆಗೆ ಗಣಿತ, ವಿಜ್ಞಾನ ಮತ್ತು ಸಮಾಜ ವಿಷಯಗಳ ಪರೀಕ್ಷೆ ನಡೆಯಲಿದೆ. ನಾಳೆ ರಜೆ ಇದ್ದು ನಾಡಿದ್ದು ಅಂದರೆ ಗುರುವಾರ ಕನ್ನಡ ಭಾಷಾವಾರು ಪ್ರಥಮ, ದ್ವಿತೀಯ ಮತ್ತು ತೃತೀಯ ಪರೀಕ್ಷೆಗಳು ನಡೆಯುತ್ತವೆ.


ಇಂದು ಮೊದಲನೇ ದಿನವೇ 56 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಇದೇ ಸಾಲಿನ 50 ವಿದ್ಯಾರ್ಥಿಗಳು, 3 ಮಂದಿ ಕಳೆದ ಸಾಲಿನ ಅನುತ್ತೀರ್ಣವಾಗಿದ್ದ ವಿದ್ಯಾರ್ಥಿಗಳು ಮತ್ತು 3 ಮಂದಿ ಖಾಸಗಿ ವಿದ್ಯಾರ್ಥಿಗಳು ಗೈರುಹಾಜರಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದೆ, ಗೊಂದಲವಿಲ್ಲದೆ ಪರೀಕ್ಷೆಯು ಯಶಸ್ವಿಯಾಗಿ ನಡೆಯುತು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑