Tel: 7676775624 | Mail: info@yellowandred.in

Language: EN KAN

    Follow us :


ರೆಡ್ ಕ್ರಾಸ್ ರಕ್ತನಿಧಿಗೆ ಕಂದಾಯ ಭವನದಲ್ಲಿ ಜಾಗ ನೀಡಲು ಮನವಿ

Posted date: 01 Aug, 2021

Powered by:     Yellow and Red

ರೆಡ್ ಕ್ರಾಸ್ ರಕ್ತನಿಧಿಗೆ ಕಂದಾಯ ಭವನದಲ್ಲಿ ಜಾಗ ನೀಡಲು ಮನವಿ

ರಾಮನಗರ: ಇಲ್ಲಿನ ಕಂದಾಯ ಭವನದಲ್ಲಿ ರೆಡ್ ಕ್ರಾಸ್ ರಕ್ತನಿಧಿಗೆ ಸ್ಥಳಾವಕಾಶ ಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಇದು ಸಾಧ್ಯವಾದರೆ ರೆಡ್ ಕ್ರಾಸ್‍ವತಿಯಿಂದಲೇ ರಕ್ತನಿಧಿಯನ್ನು ನಿರ್ವಹಣೆ ಮಾಡುವುದಾಗಿ ಜಿಲ್ಲಾ ರೆಡ್ ಕ್ರಾಸ್ ಘಟಕದ ಅಧ್ಯಕ್ಷ  ಎಚ್.ವಿ.ಶೇಷಾದ್ರಿ ಐಯ್ಯರ್ ಹೇಳಿದರು.


ರಾಮನಗರದ ರೆಡ್ ಕ್ರಾಸ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿತರಿಸಲು ಜೂಸ್, ಮಾಸ್ಕ್ ಮತ್ತು ಸೋಪ್‍ಗಳನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ (ಕೆ.ಯು.ಡಬ್ಲು.ಜೆ) ಹಸ್ತಾಂತರಿಸುವ ವೇಳೆ ಅವರು ಮಾತನಾಡಿದರು. ಸದ್ಯ ರಕ್ತ ನಿಧಿ ಜಿಲ್ಲಾಸ್ಪತ್ರೆಯಲ್ಲಿದೆ. ಜಿಲ್ಲಾಸ್ಪತ್ರೆಯ ಅಧಿಕಾರಿಗಳೇ ರಕ್ತನಿಧಿಯನ್ನು ನಿರ್ವಹಿಸುತ್ತಿದ್ದಾರೆ. ರೆಡ್ ಕ್ರಾಸ್‍ವತಿಯಿಂದಲೇ ರಕ್ತನಿಧಿಯನ್ನು ನಿರ್ವಹಿಸಲು ಸ್ಥಳಾವಕಾಶಕ್ಕಾಗಿ ಮನವಿ ಮಾಡಲಾಗಿದೆ ಎಂದರು.


ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗುವಂತೆ ರೆಡ್‍ಕ್ರಾಸ್‍ವತಿಯಿಂದ ಜಿಲ್ಲಾಡಳಿತಕ್ಕೆ ಆಮ್ಲಜನಕ ಸಾಂದ್ರಕಗಳು, ಪಲ್ಸ್ ಮೀಟರ್‌ಗಳು ಇತ್ಯಾದಿಯನ್ನು ಹಸ್ತಾಂತರಿಸಲಾಗಿದೆ. ಆಟೋ ರಿಕ್ಷಾ ಚಾಲಕರು, ಕೋವಿಡ್ ವಾರಿಯರ್‌ ಗಳಿಗೆ ಮಾಸ್ಕ್, ಸೋಪುಗಳನ್ನು ವಿತರಿಸಲಾಗಿದೆ. ಜಿಲ್ಲಾ ರೆಡ್‍ಕ್ರಾಸ್‍ನ ಕಾರ್ಯ ವೈಖರಿಯನ್ನು ಮೆಚ್ಚಿ  ಕೇಂದ್ರ ಶಾಖೆ ಪ್ರಶಂಸಾ ಪತ್ರವನ್ನು ನೀಡಿದೆ ಎಂದರು.


ಜಿಲ್ಲಾ ಶಾಖೆಯ ಉಪಾಧ್ಯಕ್ಷ ಹಾಗೂ ರಾಜ್ಯ ಸಮಿತಿಯ ಆಡಳಿತ ಮಂಡಳಿ ಸದಸ್ಯ ವಿ.ಬಾಲಕೃಷ್ಣ ಮಾತನಾಡಿ ಭಾರತ ಸೇರಿದಂತೆ ವಿಶ್ವದ 183 ರಾಷ್ಟ್ರಗಳಲ್ಲಿ ರೆಡ್‍ಕ್ರಾಸ್ ಸಂಸ್ಥೆ ಅಸ್ತಿತ್ವದಲ್ಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 425 ಶಾಖೆಗಳಿವೆ. ದೇಶದಲ್ಲಿ ಈ ಪ್ರಮಾಣದ ಶಾಖೆಗಳನ್ನುಉಳ್ಳ ಏಕೈಕ ರಾಜ್ಯ ಕರ್ನಾಟಕ ಎಂದರು.


ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲುಜೆ) ಅಧ್ಯಕ್ಷ ಬಿ.ವಿ.ಸೂರ್ಯಪ್ರಕಾಶ್ ಮಾತನಾಡಿ ಜಿಲ್ಲೆಯಲ್ಲಿ ರಕ್ತದಾನಿಗಳ ಡೈರಕ್ಟರಿ ಹೊರತರುವಂತೆ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕಕ್ಕೆ ಸಲಹೆ ನೀಡಿದರು.

ಜಿಲ್ಲಾ ಸಮಿತಿ ಸದಸ್ಯ ಕೆ.ಎಸ್.ಶಂಕರಯ್ಯ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯರುಗಳಾದ ಅಮ್ಜದ್ ಸಾಹುಕಾರ್, ಸಿಕ್ಬತ್‍ವುಲ್ಲಾ, ಜಿಲ್ಲಾ ರೆಡ್ ಕ್ರಾಸ್ ಯುವ ಘಟಕದ ಅಧ್ಯಕ್ಷ ಎಸ್.ರುದ್ರೇಶ್ವರ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑