Tel: 7676775624 | Mail: info@yellowandred.in

Language: EN KAN

    Follow us :


ಸಂಪ್ರೀತಿ ರಾಮಾಯಣ ಕೃತಿ ಅನಾವರಣ ಜಾಲತಾಣಗಳ ಬಿಟ್ಟು ಪುಸ್ತಕ ಓದೋಣ:ಡಾ.ಸಿ.ಎನ್ ಆಶ್ವತ್ ನಾರಾಯಣ

Posted date: 02 Sep, 2021

Powered by:     Yellow and Red

ಸಂಪ್ರೀತಿ ರಾಮಾಯಣ ಕೃತಿ ಅನಾವರಣ ಜಾಲತಾಣಗಳ ಬಿಟ್ಟು ಪುಸ್ತಕ ಓದೋಣ:ಡಾ.ಸಿ.ಎನ್ ಆಶ್ವತ್ ನಾರಾಯಣ

ರಾಮಾಯಣವನ್ನು ಪ್ರೀತಿಯಿಂದ ಓದಬೇಕು ಎಂಬ ನಿಟ್ಟಿನಲ್ಲಿ ರಚನೆಯಾದ ಲೇಖಕ ಡಾ.ಡಿ.ಸಿ ರಾಮಚಂದ್ರರವರ ಲೇಖನಿಯಲ್ಲಿ ಮೂಡಿಬಂದ ಮೂರನೇ ಕೃತಿಯಾದ ಸಂಪ್ರೀತಿ ರಾಮಾಯಣ ಪುಸ್ತಕವನ್ನು ಉನ್ನತಶಿಕ್ಷಣ, ಐಟಿ,ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಅವರು ಇಂದು  ಲೋಕಾರ್ಪಣೆಗೊಳಿಸಿದರು.


ಮಾಗಡಿಯ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಕಚೇರಿಯ ಸಂಪ್ರೀತಿ ಪ್ರಕಾಶನದ ವತಿಯಿಂದ ನಡೆದ ಸರಳ ಕಾಯಕ್ರಮದಲ್ಲಿ ಪುಸ್ತಕವನ್ನು ಅನಾವರಣಗೊಳಿಸಿ ಆಶಯ ವ್ಯಕ್ತಪಡಿಸಿದ ಸಚಿವರು, ಜಾಲತಾಣಗಳು ಅಬ್ಬರ ಮಾಡುತ್ತಿರುವ ಯುಗದಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಪ್ರತಿಯೊಬ್ಬರು ಬೆಳಸಿಕೊಳ್ಳಿ ಮತ್ತು ನಮ್ಮ ಸಂಸ್ಕೃತಿ ಸಾರುವ ಪುಸ್ತಕಗಳನ್ನು ಬರೆಯಲು ಪ್ರೋತ್ಸಾಹ ನೀಡುವ ಕೆಲಸಮಾಡೋಣ ಜತೆಗೆ ಓದುಗ ವಲಯವನ್ನು ಸೃಷ್ಠಿಸೋಣ ಎಂದರು.


ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ  ಮಾಗಡಿ ಶಾಸಕ ಎ.ಮಂಜುನಾಥ್ ರಾಮಾಯಣವನ್ನು ಪ್ರೀತಿಯಿಂದ ಓದಬೇಕೆಂಬ ದೃಷ್ಠಿಯಲ್ಲಿ ರಾಮಾಯಣದ ಕಥೆಗಳನ್ನು ವಿಭಿನ್ನ ಆಯಾಮದಲ್ಲಿ ಚಿತ್ರಿಸಿರುವುದು ಸುಂದರವಾಗಿ ಮೂಡಿಬಂದಿದೆ ರಾಮಾಯಣ ಗ್ರಂಥದ ಮೌಲ್ಯವನ್ನು ಅನುಸರಿಸುವ ದಾರಿಯಲ್ಲಿ ನಡೆಯೋಣ ಎಂದರು.


ಲೇಖಕ ಡಾ.ಡಿ.ಸಿ ರಾಮಚಂದ್ರ ಲೇಖಕರ ನುಡಿಗಳನ್ನಾಡಿ ಮೊಗ್ಗು ಹೂವಾಗುವುದು ಪ್ರೀತಿಯಿಂದ, ಮೋಡ ಮಳೆಸುರಿಸುವುದು ಪ್ರೀತಿಯಿಂದ, ಕಾಳು ಭುವಿಯಲ್ಲಿ ಮೊಳೆಯುವುದು ಪ್ರೀತಿಯಿಂದ ಹೀಗಾಗಿ ಓದನ್ನು ಪ್ರೀತಿಯಿಂದ ಸ್ವೀಕರಿಸಿ ಆಸ್ವಾದಿಸಿದಾಗ ಮಾತ್ರ ಪ್ರತಿಯೊಂದಕ್ಕೂ ಅರ್ಥಸಿಗಲಿದೆ ಎಂದು ಪುಸ್ತಕದ ಬಗೆಗಿನ ಸ್ವಾರಸ್ಯ ವಿಚಾರಗಳನ್ನು ಮನದಟ್ಟು ಮಾಡಿದರು.


ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ  ಡಾ: ರಾಕೇಶ್ ಕುಮಾರ್ ಕೆ , ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ  ಅಧ್ಯಕ್ಷರಾದ ಡಾ.ಸಿ. ನಂಜುಂಡಯ್ಯ, ಮಾಗಡಿ ತಹಶಿಲ್ದಾರ್ ಶ್ರೀನಿವಾಸ್ ಪ್ರಸಾದ್, ಇಓ ಪ್ರದೀಪ್ ಕುಮಾರ್, ತಾಲೂಕು ಕಸಾಪ ಅಧ್ಯಕ್ಷರಾದ ಕಲ್ಪನಾ ಶಿವಣ್ಣ,  ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಮೃದ್ಧಿ ಗ್ರಾಮೀಣಾಭಿವೃಧ್ಧಿ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑