Tel: 7676775624 | Mail: info@yellowandred.in

Language: EN KAN

    Follow us :


ಕರ್ನಾಟಕ ರಕ್ಷಣಾ ವೇದಿಕೆ ರಾಮನಗರ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಸಭೆ

Posted date: 03 Oct, 2021

Powered by:     Yellow and Red

ಕರ್ನಾಟಕ ರಕ್ಷಣಾ ವೇದಿಕೆ ರಾಮನಗರ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಸಭೆ

ರಾಮನಗರ: ಅ;03: ಕರ್ನಾಟಕ ರಕ್ಷಣಾ ವೇದಿಕೆಯು ಬೆಳ್ಳಿ ಹಬ್ಬದ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಕರವೇ ರಾಜ್ಯಾಧ್ಯಕ್ಷರಾದ ಶ್ರೀ ಟಿ,ಎ ನಾರಾಯಣ ಗೌಡರು ರಾಮನಗರ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳ ಸಭೆಯಲ್ಲಿ ಕರವೇ 24 ವರ್ಷಗಳ ಹೋರಾಟದ ಫಲವಾಗಿ ರೈಲ್ವೆ ಇಲಾಖೆಯ ಪರೀಕ್ಷೆಗಳು ಕನ್ನಡದಲ್ಲಿ ನಡೆಯುತ್ತಿವೆ, ಬೆಂಗಳೂರು ಮಹಾನಗರದಲ್ಲಿ, ಎಐಡಿಎಂಕೆ, ಡಿಎಂಕೆ ಪಕ್ಷ, ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಗಳಿಂದ ಜನಪ್ರತಿನಿಧಿಗಳ ಆಯ್ಕೆಗೆ ಕರವೇ ಹೋರಾಟಗಳು ತಡೆಯೊಡ್ಡಿವೆ, ರಾಜಕೀಯ ಪಕ್ಷಗಳಲ್ಲಿ ಭಾಷೆ, ನಾಡು-ನುಡಿಯ ಸಂರಕ್ಷಣೆ ಮತ್ತು ಪ್ರಾದೇಶಿಕ ಅಸ್ಮಿತೆ ಜಾಗ್ರತೆ ಗೊಂಡಿದೆ, ಐಟಿ-ಬಿಟಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ, ಕಾವೇರಿ, ಮಹದಾಯಿ, ಆಲಮಟ್ಟಿ, ನೀರಿನ ಹೋರಾಟಗಳಲ್ಲಿ ಕರವೇ ಮುಂಚೂಣಿಯ ಪಾತ್ರವನ್ನು ನಿರ್ವಹಿಸಿದೆ.


ರಾಮನಗರ ಜಿಲ್ಲೆಯು ಸೇರಿದಂತೆ ನಾಡಿನ ಲಕ್ಷಾಂತರ ಕಾರ್ಯಕರ್ತರು ಸಾವಿರಾರು ಹೋರಾಟಗಳನ್ನು ನಡೆಸಿ ಕನ್ನಡ, ಕನ್ನಡಿಗ, ಕರ್ನಾಟಕದ ವಿಚಾರಗಳಲ್ಲಿ ನಾಡಿನ ಯುವಕರು ಸದಾಕಾಲ ಜಾಗ್ರತರಾಗಿರುವಂತೆ ಮಾಡಿದೆ, ಒಂದು ಭಾಷಾ ಚಳುವಳಿಯ ಸಂಘಟನೆ 24 ವರ್ಷಗಳಿಂದ ನಾಡಿನ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸರ್ಕಾರಗಳ ಗಮನ ಸೆಳೆಯುವ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಿ ಮುಂದಿನ ವರ್ಷ ಬೆಳ್ಳಿ ಹಬ್ಬದ ಆಚರಿಸಲು ರಾಜ್ಯದಾದ್ಯಂತ ಜಾಗೃತಿ ಸಮಾವೇಶಗಳನ್ನು ನಡೆಸಲಾಗುತ್ತದೆ. ಕರವೇ ಬೆಳ್ಳಿಹಬ್ಬದ ಆಚರಣೆ, ಯುವಕರು, ರೈತರು, ಕಾರ್ಮಿಕರು,‌ಸೇರಿದಂತೆ  ಕನ್ನಡಿಗರಲ್ಲಿ ಹೊಸತನವನ್ನು ತರುವ ಕಾರ್ಯಕ್ರಮವನ್ನಾಗಿಸಲು ರಾಮನಗರ ಜಿಲ್ಲೆಯಲ್ಲಿಸಂಘಟನೆಗೆ ಹೊಸಕಾರ್ಯಕರ್ತರು ಪದಾಧಿಕಾರಿಗಳನ್ನು ನೇಮಿಸಬೇಕು, ಜಿಲ್ಲಾಧ್ಯಕ್ಷರಾದ ಕಬ್ಬಾಳೇಗೌಡರಿಗೆ ಎಲ್ಲಾ ಕಾರ್ಯಕರ್ತರು ಸಹಕಾರ ನೀಡಿ ಸಂಘಟನೆಯನ್ನು ಶಿಸ್ತು ಬದ್ಧವಾಗಿ ಸಂಘಟಿಸಲು ನಿಸ್ವಾರ್ಥವಾಗಿ ಕಾರ್ಯ ನಿರ್ವಹಿಸಬೇಕೆಂದು ಕರೆನೀಡಿದರು.


ಕಾರ್ಯ ಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ, ಉಪಾಧ್ಯಕ್ಷರಾದ, ಬಿ ಹೆಚ್ ಸತೀಶ್ ಗೌಡ, ಸಾಮಾಜಿಕ ಜಾಲತಾಣದ ಸಂಚಾಲಕರಾದ, ದಿನೇಶ್ ಕುಮಾರ್, ಸಂಘಟನಾಕಾರ್ಯದರ್ಶಿ ಅರುಣ್ ಜಾವಗಲ್,   ಜಿಲ್ಲಾಧ್ಯಕ್ಷ ಕಬ್ಬಾಳೇಗೌಡ, ಉಪಾಧ್ಯಕ್ಷ ಪುಟ್ಟಸ್ವಾಮಿ, ಶಂಕರ್, ಚನ್ನಪಟ್ಟಣ "ತಾ"ಅಧ್ಯಕ್ಷ ಸಾಗರ್, ಕನಕಪುರ ತಾಲೂಕು ಅಧ್ಯಕ್ಷ ಜೈರಾಮೇಗೌಡ, ರೈತಘಟಕದ ಶಂಭುಗೌಡ, ಜೈ ಕೃಷ್ಣಪ್ಪ, ಚನ್ನಪಟ್ಟಣದ ರಘುರಾಮ್ ಮಾತನಾಡಿದರು. ಸಭೆಯಲ್ಲಿ ಕರವೇ ಪದಾಧಿಕಾರಿಗಳಾದ ಚನ್ನಪಟ್ಟಣದ ಬೈರೇಗೌಡ, ಪ್ರಕಾಶ್, ಕನಕಪುರದ, ಜಗದೀಶ್, ಗುರುಗೌಡ, ಕೆ, ಎಂ ನಾಗರಾಜ್, ಅಂದಾನಿಗೌಡ, ರವಿ, ಮಾರೇಗೌಡ, ನಿತ್ಯಾನಂದ್, ತಿಮ್ಮರಾಜು, ರಾಮನಗರದ ಚನ್ನಕೇಶವ, ಬಸವರಾಜ್, ರಾ,ಶಿ ಉಮೇಶ್, ಮಾಗಡಿಯ, ಜಗದೀಶ್, ಹಾರೋಹಳ್ಳಿಯ, ಬಿ, ಎಲ್  ಗೌಡ, ಶ್ರೀನಿವಾಸ್, ಪ್ರಭು, ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑