Tel: 7676775624 | Mail: info@yellowandred.in

Language: EN KAN

    Follow us :


ಕನ್ನಮಂಗಲ ಗ್ರಾಮದ ದೇವಾಲಯಗಳ ಕೊಡುಗೆ ಜಮೀನು ಮಾರಾಟ ಮಾಡಿದವರ ಖಾತೆ ರದ್ದು ಮಾಡುವಂತೆ ಡಿ ಸಿ ಗೆ ಮನವಿ ಸಲ್ಲಿಸಿದ ರೈತ ಮುಖಂಡರು

Posted date: 11 Feb, 2022

Powered by:     Yellow and Red

ಕನ್ನಮಂಗಲ ಗ್ರಾಮದ ದೇವಾಲಯಗಳ ಕೊಡುಗೆ ಜಮೀನು ಮಾರಾಟ ಮಾಡಿದವರ ಖಾತೆ ರದ್ದು ಮಾಡುವಂತೆ ಡಿ ಸಿ ಗೆ ಮನವಿ ಸಲ್ಲಿಸಿದ ರೈತ ಮುಖಂಡರು

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಗ್ರಾಮದ ದೇವರುಗಳಾದ ಶ್ರೀ ಮಾಧವರಾಯ ಸ್ವಾಮಿ, ಬಸವೇಶ್ವರ ಸ್ವಾಮಿ ಮತ್ತು ಗುರುಮಠ ದ ಅಭಿವೃದ್ಧಿಗಾಗಿ ಗ್ರಾಮಸ್ಥರು ಎರಡು ಸರ್ವೇ ನಂಬರ್ ಗಳಲ್ಲಿ ನ ಒಟ್ಟು 6 ಎಕರೆ 28 ಗುಂಟೆ ಜಮೀನು ಕೊಟ್ಟಿದ್ದು, ಅದನ್ನೇ ದುರುಪಯೋಗ ಪಡಿಸಿಕೊಂಡ ಅರ್ಚಕರು ತಾವು ವ್ಯವಸಾಯಗಾರರೆಂದು ತಪ್ಪು ಮಾಹಿತಿ ನೀಡಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಜಮೀನಿನ ವಿಷಯವಾಗಿ ಉಚ್ಚ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದ್ದರೂ ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಈ ಖಾತೆಯನ್ನು ರದ್ದುಗೊಳಿಸಬೇಕೆಂದು ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಕನ್ನಮಂಗಲ ಗ್ರಾಮಸ್ಥರು ಮತ್ತು ಸಮಾನ ಮನಸ್ಕರ ಸಹಭಾಗಿತ್ವದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಸಿ ಪುಟ್ಟಸ್ವಾಮಿ ಯವರು ಕನ್ನಮಂಗಲ ಗ್ರಾಮದ ಸರ್ವೇ ನಂಬರ್ 131 ರಲ್ಲಿನ 3 ಎಕರೆ 14 ಗುಂಟೆ ಮತ್ತು 132/2 ರಲ್ಲಿನ 3 ಎಕರೆ 14 ಗುಂಟೆ ಸೇರಿ ಒಟ್ಟು 6 ಎಕರೆ 28 ಗುಂಟೆ ಜಮೀನನ್ನು ಮೂರು ದೇವಾಲಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದು, ಈ ಜಮೀನನ್ನು ಗ್ರಾಮದ ಕೆಲವು ರೈತರು ಸಾಗುವಳಿ ಮಾಡುತ್ತಿದ್ದರು. ಬಂದ ಲಾಭವನ್ನು ದಕ್ಷಿಣೆ ರೂಪದಲ್ಲಿ ಅರ್ಚಕರಿಗೆ ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸಲು ನೀಡಲಾಗುತ್ತಿತ್ತು. ಗೇಣಿ ಕಾನೂನು ಜಾರಿಗೆ ಬಂದ ಸಮಯದಲ್ಲಿ ಅರ್ಚಕರಾದ ಸಂಜೀವಯ್ಯ ಮತ್ತು ಕೆ ಟಿ ಶ್ರೀನಿವಾಸ ಉ ಬಿ ಶ್ರೀನಿವಾಸ ಮೂರ್ತಿ ರವರು ಸದರಿ ಜಮೀನುಗಳ ಅನುಭೋಗದಾರರೆಂದು ಭೂ ನ್ಯಾಯಮಂಡಳಿಗೆ ಗೇಣಿ ಅರ್ಜಿ ಸಲ್ಲಿಸಿ, ಅರ್ಚಕರು ಎಂಬುದನ್ನು ಮರೆಮಾಚಿ, ವ್ಯವಸಾಯಗಾರರೆಂದು ತಪ್ಪು ಮಾಹಿತಿ ನೀಡಿ, 16-03-1982 ರಂದು ಆದೇಶ ಪಡೆದು ವಂಚಿಸಿದ್ದಾರೆ.


ಆದೇಶವನ್ನು ಪ್ರಶ್ನಿಸಿ ದೇವಾಲಯಗಳ ಪರವಾಗಿ ಗ್ರಾಮಸ್ಥರು ರಿಟ್ ಪಿಟಿಷನ್ 2222/1984 ರ ಅಡಿಯಲ್ಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು 06-03-1991 ರಂದು ಭೂ-ನ್ಯಾಯಮಂಡಳಿ ಆದೇಶವನ್ನು ರದ್ದುಪಡಿಸಿ ಪುನರ್ ವಿಚಾರಣೆಗಾಗಿ ಪ್ರಕರಣವನ್ನು ಇತ್ಯರ್ಥ ಮಾಡಲು ಭೂ-ನ್ಯಾಯಮಂಡಳಿಗೆ ಹಿಂದುರಿಗಿಸಿ, ಸರ್ಕಾರದ ಆದೇಶದ 30-08-1987 ರಂದು ಜಿಲ್ಲಾಧಿಕಾರಿಗಳಿಗೆ ಸದರಿ ಪ್ರಕರಣವನ್ನು ಇತ್ಯರ್ಥ ಪಡಿಸಲು ಎಲ್ ಆರ್ ಎಫ್/ಐ ಎನ್ ಎಂ ಸಂಖ್ಯೆ 12/98-99 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಸದರಿ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡದೆ,  12-01-2004 ರಲ್ಲಿ ಅರ್ಚಕರ ಪರವಾಗಿ ಆದೇಶ ಮಾಡಿದ್ದು, ಅರ್ಜಿದಾರರು ಕರ್ನಾಟಕ ಮೇಲ್ಮನವಿ ಪ್ರಾಧಿಕಾರಕ್ಕೆ ಅಪೀಲು ಸಂಖ್ಯೆ 170/2005 ರ ಅಡಿಯಲ್ಲಿ ಪ್ರಶ್ನಿಸಿದ್ದು, ಪ್ರಾಧಿಕಾರವು 13-10-2017 ರಂದು ಅರ್ಚಕರ ಪರವಾಗಿ ಆದೇಶ ನೀಡಿದೆ. ಈ ಆದೇಶವನ್ನು ಪ್ರಶ್ನಿಸಿ ಗ್ರಾಮಸ್ಥರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಂಖ್ಯೆ 9062/2020-21 ರ ಅಡಿಯಲ್ಲಿ ಮೇಲ್ಮನವಿ ಸಲ್ಲಿಸಿ ವಿಚಾರಣೆ ಹಂತದಲ್ಲಿದೆ.


ಪ್ರಕರಣ ನ್ಯಾಯಾಲಯದಲ್ಲಿದ್ದಾಗ್ಯೂ ಎರಡು ಸರ್ವೇ ನಂಬರಿನ ಜಮೀನನ್ನು ಮೇಲ್ಕಂಡ ಅರ್ಚಕರು 06-07-2021 ರಂದು ಕೆ ಹೆಚ್ ಬೋರೇಗೌಡ ಮತ್ತು ರಾಜು ಎಂಬುವವರಿಗೆ ಕ್ರಯಪತ್ರದ ಆಧಾರದ ಮೇಲೆ ಖಾತೆ ಮಾಡಿಸಿಕೊಟ್ಟಿದ್ದಾರೆ. ಹಾಗಾಗಿ ಈ ಖಾತೆಗಳನ್ನು ರದ್ದು ಪಡಿಸಿ ದೇವಾಲಯಗಳ ಹೆಸರಿಗೆ ಖಾತೆ ಮಾಡಿಸಿಕೊಡಬೇಕೆಂದು ಗ್ರಾಮಸ್ಥರ ಪರವಾಗಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ರೈತ ಮುಖಂಡರಾದ ಹೊಂಬಾಳೇಗೌಡ, ನಂಜಪ್ಪ, ಗ್ರಾಮಸ್ಥರಾದ ಚಲುವೇಗೌಡ, ಸಿದ್ದೇಗೌಡ, ಶೇಖರ್, ನಾಗರಾಜು, ಯೋಗಲಿಂಗ, ಚಲುವರಾಜು, ಚಂದ್ರೇಗೌಡ, ಸುರೇಶ್ ಕುಮಾರ್, ಕುಮಾರ್, ಗಿರೀಶ್, ನಾರಾಯಣ, ನಾಗರಾಜು, ಚಂದ್ರಶೇಖರ್ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑