Tel: 7676775624 | Mail: info@yellowandred.in

Language: EN KAN

    Follow us :


ಮೃತ ರಾಮಚಂದ್ರ ರವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ

Posted date: 24 Feb, 2022

Powered by:     Yellow and Red

ಮೃತ ರಾಮಚಂದ್ರ ರವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ

ಚನ್ನಪಟ್ಟಣ: ತಾಲ್ಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕೆ. ರಾಮಚಂದ್ರ ರವರು ವಯೋಸಹಜ ಖಾಯಿಲೆಯಿಂದ ಮಂಗಳವಾರ ರಾತ್ರಿ ಚನ್ನಪಟ್ಟಣದ ಸ್ವಗೃಹ ದಲ್ಲಿ ನಿಧನರಾಗಿದ್ದು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದರು.


ಮೃತರು ಮೂಲತಃ ರಾಮನಗರ ಜಿಲ್ಲೆಯ ಕನಕಪುರ ನಿವಾಸಿಯಾಗಿದ್ದು ಕಳೆದ ನಾಲ್ಕು ವರ್ಷಗಳಿಂದ ತಮ್ಮ ಧರ್ಮಪತ್ನಿಯ ತವರೂರಾದ  ಪಕ್ಕದ ತಾಲ್ಲೂಕು ಚನ್ನಪಟ್ಟಣದಲ್ಲಿ ಕುಟುಂಬ ಸಮೇತ ಬಾಡಿಗೆ ಮನೆಯಲ್ಲಿ ವಾಸವಿದ್ದ ಇವರು ಒಂದು ತಿಂಗಳಿನಿಂದ ವಯೋಸಹಜ ಖಾಯಿಲೆಯಿಂದ ನರಳುತ್ತಿದ್ದು ಮಂಗಳವಾರ ರಾತ್ರಿ ಸುಮಾರು 9.30 ರ ಸಮಯದಲ್ಲಿ ಅಸು ನೀಗಿದ್ದರು.

     

10.08.1927 ರಲ್ಲಿ ತಂದೆ ತಿರುಮಲಗಿರಿ ಶೆಟ್ಟಿ ಹಾಗೂ ತಾಯಿ ಲಕ್ಷ್ಮಿದೇವಮ್ಮ ದಂಪತಿಗಳ ಎರಡನೇ ಸುಪುತ್ರ ರಾಗಿ ಜನಿಸಿದ್ದು, ತಿಮ್ಮಪ್ಪರೆಡ್ಡಿ ಹಾಗೂ ಸೈಕಲ್ ಷಾಪ್ ಮುದ್ದಪ್ಪ ನವರ ಮುಖಂಡತ್ವ ದಲ್ಲಿ 1942 ರಲ್ಲಿ ಬ್ರಿಟಿಷ್ ರ ವಿರುದ್ಧ ನಡೆದ  ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ತಮ್ಮ ಹದಿನೈದನೇ ವಯಸ್ಸಿನಲ್ಲೇ ಭಾಗವಹಿಸಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು.


ಕನಕಪುರ ವಿಧಾನಸಭಾ ಕ್ಷೇತ್ರದ ಮೊದಲ ಶಾಸಕರಾಗಿದ್ದ ಕಾಂಗ್ರೆಸ್ ಪಕ್ಷದ ಮಾಳಗಾಳು ಲಿಂಗೇಗೌಡ ರವರ ಅಪ್ಪಟ ಶಿಷ್ಯರಾಗಿದ್ದ ಇವರು ತಾಲ್ಲೂಕಿನ ಸರ್ಕಾರಿ ಕಛೇರಿಗಳ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಹಾತ್ಮ ಗಾಂಧಿಯವರ ಅಪ್ಪಟ ಹಿಂಬಾಲಾಕರಾಗಿದ್ದ

ಇವರು ಕಾರಾಗೃಹ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರದ ಎಚ್.ಎಸ್.ದೊರೆಸ್ವಾಮಿ, ಕೆ. ಟಿ. ಬಾಷ್ಯಂ, ಕೆಂಗಲ್ ಹನುಮಂತಯ್ಯ, ಬಿ. ಡಿ ಜತ್ತಿ, ಶಾಂತವೇರಿ ಗೋಪಾಲಗೌಡರು, ಅಂದಾನಪ್ಪ ದೊಡ್ಡ ಮೇಟಿ ಸೇರಿದಂತೆ 1950, 60, 70, 80 ರ ದಶಕದ ಹಲವು ರಾಜಕೀಯ ನಾಯಕರುಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು.


ಮೃತರ ಅಂತ್ಯಕ್ರಿಯೆಯನ್ನು ಚನ್ನಪಟ್ಟಣ-ಬೆಂಗಳೂರು ಹೈವೇ ರಸ್ತೆಯಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಮೃತರ ದೇಹಕ್ಕೆ ರಾಷ್ಟ್ರ ಧ್ವಜವನ್ನು ಹೊದಿಸಿ ಮೂರು ಸುತ್ತು ಕುಶಾಲ ತೋಪು ಸಿಡಿಸುವ ಮೂಲಕ ಸಕಲ ಸರ್ಕಾರಿ ಗೌರವವನ್ನು ಅರ್ಪಿಸಲಾಯಿತು. ನಂತರ ರಾಷ್ಟ್ರಧ್ವಜ ವನ್ನು ಮೃತದೇಹ ದಿಂದ ಹೊರ ತೆಗೆದು ಮೃತರ ಮಗನ ಕೈಗೆ ಹಸ್ತಾಂತರಿಸಲಾಯಿತು.

ಚನ್ನಪಟ್ಟಣ ತಹಶೀಲ್ದಾರ್ ನಾಗೇಶ್, ಉಪ ಆರಕ್ಷಕ ನಿರೀಕ್ಷಕಿ ಮಮತಾ ಸೇರಿದಂತೆ ಕಂದಾಯ ಹಾಗೂ ಪೋಲೀಸ್ ಸಿಬ್ಬಂದಿಗಳು ಹಾಗೂ ಅಪಾರ ಬಂಧುಗಳು ಈ ಸಂದರ್ಭದಲ್ಲಿ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑