Tel: 7676775624 | Mail: info@yellowandred.in

Language: EN KAN

    Follow us :


ಮಾರ್ಚನಹಳ್ಳಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಮಾರಾಟ. ಪ್ರಶ್ನಿಸಿದ ಗ್ರಾಪಂ ಸದಸ್ಯನ ಮೇಲೆ ಹಲ್ಲೆ

Posted date: 13 Jun, 2022

Powered by:     Yellow and Red

ಮಾರ್ಚನಹಳ್ಳಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಮಾರಾಟ. ಪ್ರಶ್ನಿಸಿದ ಗ್ರಾಪಂ ಸದಸ್ಯನ ಮೇಲೆ ಹಲ್ಲೆ

ಚನ್ನಪಟ್ಟಣ: ತಾಲ್ಲೂಕಿನ ಮುದಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರ್ಚನಹಳ್ಳಿ ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಮಾರುತ್ತಿದ್ದಾರೆ ಎಂಬ ಮಾಹಿತಿಯನ್ನು ತಹಶಿಲ್ದಾರ್ ರವರಿಗೆ ಗ್ರಾಮ ಪಂಚಾಯತಿ ಸದಸ್ಯರಾದ ಎಂ ಜೆ ಪರಮೇಶ್ ಎಂಬುವವರು ಮಾಹಿತಿ ನೀಡಿದ್ದಾರೆ ಎಂಬ ಕಾರಣಕ್ಕೆ ಬೈಕ್ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ದಲ್ಲದೆ, ರಕ್ತ ಗಾಯಗಳನ್ನು ಮಾಡಿ ಬುಲೆಟ್ ಬೈಕ್ ಸುಟ್ಟಿರುವ ಘಟನೆ ನಡೆದಿದೆ.


ಮಾರ್ಚನಹಳ್ಳಿ ಗ್ರಾಮದ ಸಹೋದರರಾದ ಲೋಹಿತ್ ಮತ್ತು ಶ್ರೀಕಾಂತ್ ಎಂಬುವರು ತಮ್ಮ ಮಾಲೀಕತ್ವದ ಜೆಸಿಬಿ ಮತ್ತು ಟ್ರ್ಯಾಕ್ಟರ್ ಮೂಲಕ ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ಆಡಳಿತದಿಂದ ಯಾವುದೇ ಪರವಾನಗಿ ಪಡೆಯದೇ ಕೆರೆಯ ಮಣ್ಣನ್ನು ತುಂಬಿ, ಒಂದು ಟ್ರ್ಯಾಕ್ಟರ್ ಮಣ್ಣಿಗೆ 250₹ ಮತ್ತು ಟಿಪ್ಪರ್ ಲಾರಿಗೆ 500₹ ನಂತೆ ಮಾರಾಟ ಮಾಡುತ್ತಿದ್ದಾರೆ. ಗ್ರಾಮದ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ತಮ್ಮ ಜಮೀನಿಗೆ ಮಣ್ಣು ತುಂಬಿಕೊಳ್ಳಲು ಬಿಡದೆ, ತಮ್ಮ ಮೂಲಕವೇ ಮಣ್ಣು ಕೊಂಡೊಯ್ಯುವಂತೆ ತಾಕೀತು ಮಾಡುವ ಮೂಲಕ ದೌರ್ಜನ್ಯ ಎಸಗುತ್ತಿದ್ದಾರೆ.


ಈ ವಿಷಯವು ತಹಶಿಲ್ದಾರ್ ಹರ್ಷವರ್ಧನ್ ರವರ ಗಮನಕ್ಕೆ ತಂದಿದ್ದು, ಕಂದಾಯ ನಿರೀಕ್ಷಕ ರಮೇಶ್ ರವರನ್ನು ಸ್ಥಳಕ್ಕೆ ಕಳುಹಿಸಿರುವ ಕಾರಣಕ್ಕೆ ನನ್ನನ್ನು ಪ್ರಶ್ನಿಸಿ, ನಾನೇ ಮಾಹಿತಿ ನೀಡಿದ್ದೇನೆ ಎಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ನ್ನು ಮೇಲೆ ಹತ್ತಿಸಲು ಪ್ರಯತ್ನಿಸಿದರು. ನಂತರ ಬೈಕ್ ನ್ನು ಸುಟ್ಟು ಹಾಕಿದ್ದಾರೆ. ನನಗೆ ಹೃದಯದ ಭಾಗ, ಕತ್ತಿನ ಭಾಗ, ವೃಣದ ಭಾಗದಲ್ಲಿ ಒಳ ಹಾಗೂ ಹೊರ ನೋವು ಹೆಚ್ಚಾದ ಕಾರಣದಿಂದ ಬೆಂಗಳೂರಿನ ಲೈನ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಗ್ರಾಮದಲ್ಲಿ ಇವರ ದೌರ್ಜನ್ಯ ಮಿತಿಮೀರಿದ್ದು ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ತಹಶಿಲ್ದಾರ್ ಹರ್ಷವರ್ಧನ್ ಮತ್ತು ಪೋಲೀಸರಿಗೆ ಮನವಿ ಮಾಡಿದ್ದಾರೆ.


ಗ್ರಾಮಾಂತರ ಪೋಲೀಸ್ ಠಾಣೆಯ ಅಧಿಕಾರಿ ಲಿಯಾಖತ್ ರವರು ಮೊಕದ್ದಮೆ ದಾಖಲಿಸಿಕೊಂಡು, ಲೋಹಿತ್ ಎಂಬ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗದ ಬಂಧನಕ್ಕೆ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑