Tel: 7676775624 | Mail: info@yellowandred.in

Language: EN KAN

    Follow us :


ದಾಖಲೆ ಇಲ್ಲದ ಹಣ ವಶಪಡಿಸಿಕೊಂಡ ಗ್ರಾಮಾಂತರ ಪೋಲಿಸರು

Posted date: 30 Mar, 2023

Powered by:     Yellow and Red

ದಾಖಲೆ ಇಲ್ಲದ ಹಣ ವಶಪಡಿಸಿಕೊಂಡ ಗ್ರಾಮಾಂತರ ಪೋಲಿಸರು


ಚನ್ನಪಟ್ಟಣ.ಮಾ.೩೦:

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ನಿನ್ನೆಯಿಂದಲೇ ನೀತಿಸಂಹಿತೆ ಜಾರಿಯಾಗಿದೆ. ರಾಜಕೀಯ ಪಕ್ಷಗಳ ಮುಖಂಡರು ಮತದಾರರನ್ನು ಸೆಳೆಯಲು ಸಾಕಷ್ಟು ತಯಾರಿ ನಡೆಸುತ್ತಿದ್ದು, ಮತದಾರರಿಗೆ ಹಣ, ಮದ್ಯ, ಸೀರೆ, ಇತರೆ ವಸ್ತುಗಳನ್ನು  ಹಂಚಲು ಪ್ರಯತ್ನ ಪಡುತ್ತಿದ್ದು ತೆರೆ ಮರೆಯಲ್ಲಿ ಹರಿದಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಚುನಾವಣಾ ಆಯೋಗವೂ ಸಹ ಸಕಲ ಸಿದ್ದತೆಯನ್ನು ನಡೆಸಿದೆ.


ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತಿ ಜಾರಿಯಾಗಿದ್ದು,  ಜಿಲ್ಲೆಯಲ್ಲಿ ವಿವಿಧ ಕಡೆ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ, ವಾಹನಗಳ ತಪಾಸಣೆ ನಡೆಸುತ್ತಿದ್ದು ದಾಖಲೆಯಿಲ್ಲದೆ ಅಕ್ರಮವಾಗಿ ಸಾಗಿಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಬುಧವಾರ ಮುಸ್ಸಂಜೆ ವೇಳೆ ಚನ್ನಪಟ್ಟಣ ತಾಲ್ಲೂಕಿನ ಕೋಲೂರು ಗೇಟ್ ಬಳಿ ಚೆಕ್‌ಪೋಸ್ಟ್ ನಿರ್ಮಿಸಿದ್ದು, ವಾಹನಗಳ ತಪಾಸಣೆ ವೇಳೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು ೧ಲಕ್ಷ ೨೯ ಸಾವಿರ ರೂಗಳನ್ನು ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನೆನ್ನೆ ಚೆಕ್‌ಪೋಸ್ಟ್ ಬಳಿ ಮೈಸೂರಿನಿಂದ ಬೆಂಗಳೂರಿನ ಕಡೆಗೆ ಹೋಗುತ್ತಿದ್ದ ಬೊಲೆರೋ (ಕೆಎ೦೨-ಎಹೆಚ್೧೫೦೬) ಪಿಕಪ್ ಗೂಡ್ಸ್ ವಾಹನವನ್ನು ತಪಾಸಣೆಗೆ ಒಳಪಡಿಸಿದಾಗ ವಾಹನದ ಡ್ಯಾಷ್ ಬೋರ್ಡ್ ನಲ್ಲಿ ೧ ಲಕ್ಷದ ೨೯ ಸಾವಿರದ ಐನೂರು ನೂರು ಹಣವಿದ್ದು, ಈ ಸಂಬಂಧ ವಾಹನದ ಚಾಲಕ ವಿನೋದ್‌ನನ್ನು ವಿಚಾರಿಸಿದಾಗ ಸೂಕ್ತ ದಾಖಲೆಗಳನ್ನು ಒದಗಿಸಿದ ಕಾರಣ ಗ್ರಾಮಾಂತರ ಪೊಲೀಸರು ಹಣವನ್ನು ವಶಪಡಿಸಿಕೊಂಡು ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑