Tel: 7676775624 | Mail: info@yellowandred.in

Language: EN KAN

    Follow us :


ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ

Posted date: 08 Jun, 2023

Powered by:     Yellow and Red
ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಕಾಡಾನೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಕೈಗೊಂಡ ಪ್ಲಾನ್ ಸಕ್ಸಸ್ ಆಗಿದೆ. ತೆಂಗಿನ ಕಲ್ಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆ ದಾಂಧಲೆಯನ್ನು ನಡೆಸುತ್ತಾ ಎರಡು ಜೀವಗಳನ್ನು ಸಹ ಬಲಿಯನ್ನ ಪಡೆದಿತ್ತು. ಕೊನೆಗೂ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಅಭಿಮನ್ಯು ಟೀಮ್ ಯಶಸನ್ನು ಕಂಡಿದೆ.


ಕಳೆದ ನಾಲ್ಕೈದು ದಿನಗಳ ಹಿಂದೆ ಕಾಡಾನೆ ತೆರೆಗೆ ಅಭಿಮನ್ಯು ನೇತೃತ್ವದ 5 ಸಾಕಾನೆಗಳ ತಂಡ ಚನ್ನಪಟ್ಟಣ ತಾಲೂಕಿನ ವಿರೂಪಾಕ್ಷಿಪುರ ಪಂಚಾಯತಿ ವ್ಯಾಪ್ತಿಗೆ ಆಗಮಿಸಿತ್ತು. ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಕಾಡಾನೆಗಳನ್ನು ಬರಮಾಡಿಕೊಳ್ಳಲಾಗಿತ್ತು.

ಎರಡು ದಿನಗಳಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಇಂದು ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅಭಿಮನ್ಯು ತಂಡ ಸಫಲವಾಗಿದೆ.


ತಾಲೂಕಿನ ಅರಳಾಳುಸಂದ್ರ, ಕಾಡನಕುಪ್ಪೆ ಗ್ರಾಮದ ಮಧ್ಯ ಭಾಗದಲ್ಲಿ ಒಂಟಿ ಸಲಗವನ್ನು ಸೆರೆ ಹಿಡಿಯಲಾಗಿದೆ. ಕಾಡಾನೆಯನ್ನ ತಾತ್ಕಾಲಿಕ ಕ್ಯಾಂಪ್‌ಗೆ ಕರೆತರಲಾಗಿದ್ದು ಸ್ಥಳಾಂತರ ಕಾರ್ಯವನ್ನು ಕೈಗೊಳ್ಳಲಾಗಿದೆ. ವೈದ್ಯರಾದ ಮುಜೀಬ್ - ರಮೇಶ್ ನೇತೃತ್ವದಲ್ಲಿ ಕಾಡಾನೆ ಸೆರೆ ಹಿಡಿಯಲಾಗಿದೆ. ಅರಿವಳಿಕೆ ಮದ್ದನ್ನು ನೀಡಿದ ನಂತರ ಪಳಗಿದ ಸಾಕಾನೆಗಳ ಸಹಾಯದಿಂದ ಕಾಡಾನೆ ಸೆರೆ ಹಿಡಿಯಲಾಗಿದ್ದು, ಆನೆ ಸದ್ಯಕ್ಕೆ ಆರೋಗ್ಯವಾಗಿದೆ, ಯಾವುದೇ ಸಮಸ್ಯೆ ಇಲ್ಲ ಎಂದು‌ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 


ಕಾರ್ಯಾಚರಣೆ ನಂತರ ಮಾತನಾಡಿದ ವೈದ್ಯರಾದ ಮುಜೀಬ್ - ರಮೇಶ್  ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಕಾಡಾನೆಗಳನ್ನ ಸುರಕ್ಷಿತ ಅರಣ್ಯಕ್ಕೆ ಬಿಡಲಾಗುತ್ತದೆ.

ಅಭಿಮನ್ಯುವಿನ ಸಹಕಾರದೊಂದಿಗೆ ಈ ಕಾಡಾನೆ ಕಾರ್ಯಾಚರಣೆ ಮಾಡಲಾಗಿದೆ. ಇನ್ನೆರಡು ದಿನಗಳ ಕಾಲ 5 ಸಾಕಾನೆಗಳಿಗೆ ವಿಶ್ರಾಂತಿ ನೀಡಲಾಗುತ್ತೆ ನಂತರ 2 ದಿನ ಬಿಟ್ಟು ಮತ್ತೆ ಕಾಡಾನೆ ಕಾರ್ಯಾಚರಣೆ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.


ಒಟ್ಟು 5 ಆನೆಗಳ ಕಾರ್ಯಾಚರಣೆಗೆ ಅನುಮತಿ ಕೇಳಿದ್ದೇವೆ ಆದರೆ ಅನುಮತಿ ಸಿಕ್ಕಿಲ್ಲ, ಇನ್ನೊಂದು ಆನೆ ಹಿಡಿಯಲಾಗುತ್ತೆ ಎಂದು ಅರಣ್ಯಾಧಿಕಾರಿ (ಎಸಿಎಫ್) ನಿಜಾಮುದ್ದೀನ್ ಮಾಹಿತಿಯನ್ನು ನೀಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑