ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.
ಸಿದ್ದಯ್ಯ ಕಾಡಾನೆ ದಾಳಿ ವೇಳೆ ಕೊದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ.
ಪ್ರತಿದಿನದಂತೆ ಸೋಮವಾರ ಸಹ ಕೆರೆ ಬಳಿಯ ಜಮೀನಿಗೆ ಮೇವು ತರಲು ಸಿದ್ದಯ್ಯ ತೆರಳಿದ್ದ ವೇಳೆ ಕಾಡಾನೆ ಸೊಂಡಲಿನಿಂದ ದಾಳಿ ಮಾಡಿದ್ದು, ತಕ್ಷಣ ನೀರಿಗೆ ಬಿದ್ದ ಈತ ಈಜಿ ದಡ ಸೇರಿ ಆನೆ ದಾಳಿಯಿಂದ ಪಾರಾಗಿದ್ದಾನೆ. ಆನೆ ತನ್ನ ಸೊಂಡಲಿನಿಂದ ಬಾರಿಸಿದ ಪರಿಣಾಮ ಎದೆಯ ಭಾಗಕ್ಕೆ ಪೆಟ್ಟಾಗಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಆಗಮಿಸಿ ಸಿದ್ದಯ್ಯನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
*ಗ್ರಾಮಸ್ಥರ ಆಕ್ರೋಶ :*
ಸಿದ್ದಯ್ಯನ ಮೇಲೆ ದಾಳಿ ನಡೆಸಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸಿ ನಮ್ಮ ಜೀವಕ್ಕೆ ಬೆಲೆ ಇಲ್ಲದಂತಾಗಿದ್ದು, ದಿನನಿತ್ಯ ಆನೆ ಭಯದಲ್ಲಿ ನಾವ್ಯಾರು ಬೇಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಎಲ್ಲಿ ಆನೆಗಳು ನಮ್ಮನ್ನು ಬಲಿ ತೆಗೆದುಕೊಳ್ಳುತ್ತಾವೋ ಎಂಬ ಆತಂಕ ಮನೆ ಮಾಡಿದ್ದು, ಒಂದು ಕಡೆ ಬೆಳೆದ ಫಸಲು ಸಹ ಆನೆಗಳ ದಾಳಿಯಿಂದ ನಾಶವಾಗುತ್ತಿದ್ದು, ಮತ್ತೊಂದು ಕಡೆ ಜೀವ ಭಯ ಕಾಡುತ್ತಿದ್ದು, ಇದೆಲ್ಲದರಿಂದ ಸರಕಾರ ನಮಗೆ ಮುಕ್ತಿ ಕೊಡಬೇಕಾದರೆ ನಮ್ಮ ಜಮೀನುಗಳನ್ನು ವಶಕ್ಕೆ ಪಡೆದು ನಮಗೂ ಇಂತಿಷ್ಟು ಪರಿಹಾರ ನೀಡಿಬಿಡಲೆಂದು ಆಕ್ರೋಶ ವ್ಯಕ್ತ ಪಡಿಸಿದರು.
*ಸತ್ತ ಮೇಲೆ ಪರಿಹಾರ ಬೇಡ :*
ಆನೆಗಳ ದಾಳಿಯಿಂದ ಸತ್ತರೆ ಪರಿಹಾರ ಸಿಗುತ್ತದೆ ಎಂಬುದು ನಿಜಕ್ಕೂ ನಾಚಿಕೆ ಸಂಗತಿಯಾಗಿದ್ದು, ದುಡಿದು ತಿನ್ನುವ ನಾವುಗಳು ಯಾವತ್ತು ಬಿಟ್ಟಿ ಹಣಕ್ಕೆ ಕೈ ಚಾಚುವುದಿಲ್ಲ, ಸತ್ತ ಮೇಲೆ ಪುಟಗೊಸಿ ಪರಿಹಾರ ನಿಡುವ ಬದಲು ನೆಮ್ಮದಿಯಿಂದ ಬೇಸಾಯ ಮಾಡಲು ಅವಕಾಶ ಕಲ್ಪಿಸಿ. ಇಲ್ಲವೇ ಆನೆಗಳನ್ನು ಓಡಿಸಲು ನಿಮ್ಮ ಕೈಲಾಗದಿದ್ದರೆ ನಮಗೆ ಅವಕಾಶ ನೀಡಿ ನೋಡಿ ಎಂದು ಅರಣ್ಯ ಇಲಾಖೆ ವಿರುದ್ದ ರೈತರು ಆವೇಶ ಭರಿತ ರಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
*ಗ್ರಾಮದ ಹಲವೆಡೆ ದಾಳಿ :*
ದಿನ ಬೆಳಗಾದರೆ ಕಾಡಾನೆಯೊಂದು ಗ್ರಾಮದ ಹಲವು ರೈತರ ತೋಟಗಳಿಗೆ ನುಗ್ಗಿ ಬಾಳೆ, ಮಾವು, ತೆಂಗು, ರೇಷ್ಮೆ, ಸೇರಿದಂತೆ ಇನ್ನಿತರ ಬೆಳೆಗಳನ್ನು ನಾಶ ಮಾಡುತ್ತಿದ್ದು, ಒಂದು ದಿನ ಬಿ.ವಿ.ಹಳ್ಳಿ, ಮತ್ತೊಂದು ದಿನ ಪಕ್ಕದ ಊರು, ಮಗದೊಂದು ದಿನ ಅದರ ಪಕ್ಕದ ಊರು ಹೀಗೆ ಸುತ್ತಮುತ್ತಲ ಗ್ರಾಮಗಳ ಜನರಿಗೆ ಇನ್ನಿಲದ ರೀತಿಯ ಉಪಟಳ ನೀಡುತ್ತಾ ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು