Tel: 7676775624 | Mail: info@yellowandred.in

Language: EN KAN

    Follow us :


ಮಹಾಪೌರ್ಣಿಮೆ ನಾಟಕ ಬಡಜನರ ದನಿಯಾಗಿದೆ, ಪ್ರೊ ಹೊನ್ನು ಸಿದ್ದಾರ್ಥ

Posted date: 03 Aug, 2023

Powered by:     Yellow and Red

ಮಹಾಪೌರ್ಣಿಮೆ ನಾಟಕ ಬಡಜನರ ದನಿಯಾಗಿದೆ, ಪ್ರೊ ಹೊನ್ನು ಸಿದ್ದಾರ್ಥ

ಬೆಂಗಳೂರು: ರಂಗ ನಿರ್ದೇಶಕ ಶಿವಲಿಂಗಯ್ಯ ನವರು ನಿರ್ದೇಶಿಸಿದ ಮಹಾಪೌರ್ಣಿಮೆ ನಾಟಕವು ಬಡಜನರ ದನಿಯಾಗಿದೆ, ಒಂದಲ್ಲಾ ಹತ್ತು ಬಾರಿ ನೋಡಿದರೂ ಮತ್ತೊಮ್ಮೆ ನೋಡಬೇಕಿನಿಸುತ್ತದೆ. ಅವರ ಮತ್ತೊಂದು ಅತ್ಯುತ್ತಮ ನಾಟಕವೆಂದರೆ ದೇವನಾಂಪ್ರಿಯ ಅಶೋಕ, ಆ ನಾಟಕವನ್ನು ನೋಡುವಾಗ ನಾವು ಗತಕಾಲದಲ್ಲಿದ್ದೇವೆ ಎಂಬ ಭಾಸವಾಗುತ್ತದೆ. ಇಂದಿನ ಮತ್ತು ಮುಂದಿನ ಪೀಳಿಗೆಗೆ ಇಂತಹ ಸಂದೇಶವಿರುವ ನಾಟಕಗಳ ಅವಶ್ಯಕತೆ ತುಂಬಾ ಇದ್ದು, ಅದನ್ನು ರಂಗಕರ್ಮಿ ಶಿವಲಿಂಗಯ್ಯ ನವರು ನೀಗಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಪ್ರಶಂಸಿದರು.

ಅವರು ಗೋತಮಿ ಫೌಂಡೇಶನ್ ಮಂಡ್ಯ ಆಯೋಜಿಸಿದ್ದ "ಮಹಾಪೌರ್ಣಿಮೆ" ನಾಟಕ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಅನೈತಿಕ ಸಂಬಂಧಿಂದ ಹುಟ್ಟಿದ ಅತಿ ಸುಂದರ ಹೆಣ್ಣು ನವಜಾತ ಶಿಶುವನ್ನು ಆಕೆಯ ಹೆತ್ತವ್ವ ಮಾವಿನ ಮರದ ಕೆಳಗೆ ಮಲಗಿಸಿ ಹೋಗಿದ್ದು, ಆಚಾರ್ಯ ದಂಪತಿಗಳು ಮಗುವಿನ ಆರೈಕೆ ಮಾಡಿ, ಸಂಗೀತ ನೃತ್ಯ ಕಲಿಸಿ, ಆಕೆಯನ್ನು ಸುಸಂಸ್ಕೃತ ಹೆಣ್ಣು ಮಗಳಾಗಿ ಬೆಳೆಸಿದರು. ಆಕೆಯ ವಿದ್ಯೆ ಮತ್ತು ಸೌಂದರ್ಯ ವರವಾಗುವ ಬದಲು ಶಾಪವಾಗಿ ಪರಿಣಮಿಸಿ, ಪ್ರೀತಿಸಿದವನ ಕೊಲೆಮಾಡಿದ ರಾಜಭಟರು, ನಾಲ್ಕು ಮಂದಿ ಶ್ರೀಮಂತರಿಂದ ಅತ್ಯಾಚಾರ, ಬಿಂದುಸಾರ ದೊರೆಯ ಜೊತೆಗೆ ಮದುವೆ, ಆಕೆಗೊಂದು ಮಗು, ನನ್ನ ತಂದೆ ವೇಶ್ಯೆಯನ್ನು ಮದುವೆಯಾಗಿ ನನ್ನನ್ನು ಹಡೆದಳೆಂಬ ಕಾರಣಕ್ಕೆ ತಂದೆಯನ್ನೇ ಕೊಂದು, ತಾಯಿಯನ್ನು ಪೀಡಿಸಿದ ಮಗನಿಂದ ನೊಂದ ಆಕೆ ಬುದ್ಧನ ಬಳಿ ಬಂದು ಶಿಷ್ಯೆಯಾಗಿ ಮುಕ್ತಿ ಹೊಂದಿದ ಆಮ್ರಪಾಲಿ ಎಂಬ ಮಹಿಳೆಯ ಕಥೆಯನ್ನು ಅಚ್ಚುಕಟ್ಟಾಗಿ ಬರೆದು ನಿರ್ದೇಶಿಸಿದ ಶಿವಲಿಂಗಯ್ಯ ನವರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದು, ಅವರ ಎಲ್ಲಾ ನಾಟಕಗಳನ್ನು ವೀಕ್ಷಿಸುವ ಮೂಲಕ ಅವರಿಗೆ ಮತ್ತಷ್ಟು ಬಲ ನೀಡಬೇಕು ಎಂದು ಜಿಂದಾಲ್ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಫ್ರೊ ವೀಣಾ ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.


 ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯ ದ ಬಾಬಾ ಸಾಹೇಬ್  ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ದ ಸಹಯೋಗದಲ್ಲಿ, ಹೆಚ್ ಎನ್ ಸಭಾಂಗಣ ಬೆಂಗಳೂರು ವಿಶ್ವವಿದ್ಯಾಲಯ ದಲ್ಲಿ ಯಶಸ್ವಿಯಾಗಿ ಜರುಗಿತು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಫ್ರೊ ಮಮತ, ಹೆಚ್ ಕೆ ಬುದ್ಧ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು, ಜಿಂದಾಲ್ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಮಹಾಪೌರ್ಣಿಮೆ ನಾಟಕವನ್ನು ಯಶಸ್ವಿಗೊಳಿಸಿದರು. ಈ ನಾಟಕವನ್ನು ಗೋತಮಿ ಫೌಂಡೇಶನ್ ಮಂಡ್ಯ ದ ಸಾರಥಿ, ರಂಗಕರ್ಮಿ ಶಿವಲಿಂಗಯ್ಯ ಎನ್ ರವರು ನಿರ್ದೇಶನ ಮಾಡಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑