Tel: 7676775624 | Mail: info@yellowandred.in

Language: EN KAN

    Follow us :


ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಮಹಿಳೆ ಶವವಾಗಿ ಪತ್ತೆ

Posted date: 06 Sep, 2023

Powered by:     Yellow and Red

ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಮಹಿಳೆ ಶವವಾಗಿ ಪತ್ತೆ

ಚನ್ನಪಟ್ಟಣ: ತಮ್ಮ ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಮಹಿಳೆಯೊಬ್ಬರು ಅವರದೇ ಹೊಲದ ಪೈಪು ಹೂಳಲು ತೆಗೆದಿದ್ದ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿರುವ ಧಾರುಣ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದೆ. ದ್ಯಾವಪಟ್ಟಣ ಗ್ರಾಮದ ಪುರುಷೋತ್ತಮ್ ನವರ ಪತ್ನಿ ಶ್ವೇತಾ ಸಿ‌.ಕೆ (32) ಎಂಬುವರೇ ಕೊಲೆಯಾಗಿರುವ ಮಹಿಳೆ.


ಪತಿ ಪುರುಷೋತ್ತಮ ರವರು ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು ಅವರು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು. ತನ್ನ ಏಳು ವರ್ಷದ ಪುತ್ರಿ ಹಾಗೂ ಅತ್ತೆಯ ಜೊತೆಗೆ ಶ್ವೇತಾ ವಾಸವಿದ್ದರು. ಸೋಮವಾರ ಸಂಜೆ ಜಮೀನಿನಲ್ಲಿ ಬೆಳೆದ ಬೆಳೆಗೆ ನೀರು ಹಾಯಿಸಲು ಹೋಗಿದ್ದು, ಅವರು ರಾತ್ರಿಯಾದರೂ ಮನೆಗೆ ಮರಳಿ ಬಂದಿರಲಿಲ್ಲ. ತವರು ಮನೆಯಿಂದ ಅವರ ಸಹೋದರ ಕರೆ ಮಾಡಿದ್ದು ಸ್ವಿಚ್ಡ್ ಆಫ್ ಆಗಿದ್ದು, ನಂತರ ಅವದ ಭಾವ ಪುರುಷೋತ್ತಮ ರವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ, ಪುರುಷೋತ್ತಮ ಹಾಗೂ ತವರು ಮನೆಯವರು ಒಟ್ಟಾಗಿ ಹುಡುಕಾಡಿ ಎಲ್ಲೂ ಸಿಗದ ಕಾರಣ ಕಾಣೆಯಾಗಿರುವ ಬಗ್ಗೆ ಅಕ್ಕೂರು ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದರು.


ಬೆಳಗ್ಗೆ ಜಮೀನಿನ ಬಳಿ ಹೋದಾಗ ಪೈಪು ಹಾಕಲು ತೆಗೆದಿದ್ದ ಕಾಲುವೆಯಲ್ಲಿ ಹೊಸದಾಗಿ ಮಣ್ಣು ಹಾಕಿದ್ದು, ಒಂದು ಮುಂಗೈ ಕಾಣುತ್ತಿದೆ ಎಂದು ಸ್ಥಳೀಯರು ಹೇಳಿದ ಮಾಹಿತಿಗೆ ಎರಡು ಕುಟುಂಬದವರು ಮತ್ತು ಗ್ರಾಮಸ್ಥರು ಹೋಗಿ ಪರಿಶೀಲಸಲಿಸಿ, ಅಕ್ಕೂರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಅಕ್ಕೂರು ಪೋಲಿಸ್ ಠಾಣೆಯ ಪಿಎಸ್ಐ ಬಸವರಾಜು ಸಿಬ್ಬಂದಿ ಸಮೇತ ಬಂದರಾದರೂ ಸಂಬಂಧಿಕರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬರುವವರೆಗೂ ಶವವನ್ನು ಹೊರತೆಗೆಯಲು ಬಿಡುವುದಿಲ್ಲಾ ಎಂದು ಪಟ್ಟು ಹಿಡಿದಿದ್ದಾರೆ. ಶವವಾಗಿ  ಪತ್ತೆಯಾಗಿದ್ದಾರೆ.


ಮೃತರಿಗೆ 7 ವರ್ಷದ ವರ್ಷಿಣಿ ಎಂಬ ಹೆಣ್ಣು ಮಗುವಿದ್ದು, ಏನೂ ಅರಿಯದೇ ಮೂಕವೇದನೆ ಅನುಭವಿಸುತ್ತಿರುವುದು ಕಂಡು ಬಂದಿತು. ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು ಈ ನಡುವೆ ಸೋಮವಾರ ರಾತ್ರಿ ಮೃತ ಶ್ವೇತಾಳ ಸಹೋದರ ಚಕ್ಕೆರೆ ಅಭಿಷೇಕ್ ಎಂಬುವರು ಅಕ್ಕ ಶ್ವೇತಾ ಕಾಣೆಯಾಗಿದ್ದಾರೆ ಎಂದು ಅಕ್ಕೂರು ಪೊಲೀಸ್ ಠಾಣೆಗೆ ದೂರನ್ನು ನಿನ್ನೆಯೇ ನೀಡಿದ್ದು ಇಂದು ಯಾರೋ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿ ಹೂತು ಹಾಕಿದ್ದಾರೆ ಎಂದು ದೂರು ಸಲ್ಲಿಸಿದ್ದು ಅಕ್ಕೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಇಂದು ಬೆಳಿಗ್ಗೆ ಗ್ರಾಮದ ತಮ್ಮ ಜಮೀನಿಗೆ ಹೋಗಿ ಹುಡುಕಾಡಿದಾಗ, ಜಮೀನಿಗೆ ನೀರು ಹಾಯಿಸಲು ತೆಗೆಸಿರುವ ಪೈಪ್ ಲೈನ್ ಗುಂಡಿಯಲ್ಲಿ ಹೊಸದಾಗಿ ಮಣ್ಣನ್ನು ಮುಚ್ಚಿರುವುದನ್ನು ನೋಡಿ ಅನುಮಾನಗೊಂಡು ಹತ್ತಿರದಿಂದ ಹೋಗಿ ನೋಡಿದಾಗ ಯಾವುದೋ ವ್ಯಕ್ತಿಯ ಮುಂಗೈ ಕಾಣಿಸಿದ್ದು  ಇದು ನಮ್ಮ ಅಕ್ಕನ ಮೃತದೇಹ ಇರಬಹುದೆಂದು ಅನುಮಾನಗೊಂಡು, ಮಣ್ಣನ್ನು ತೆಗೆಸಿ ಮೃತದೇಹವನ್ನು ಹೊರತೆಗೆಸಿ,  ಪರಿಶೀಲಿಸಿ ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಮೃತಳ ಸಹೋದರ ಅಭಿಷೇಕ್ ಅಕ್ಕೂರು ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರುಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಡಿವೈ.ಎಸ್.ಪಿ. ಓಂಪ್ರಕಾಶ್, ತಹಶೀಲ್ದಾರ್ ಮಹೇಂದ್ರ,  ಗ್ರಾಮಾಂತರ ಸಿಪಿಐ ಟಿಟಿ ಕೃಷ್ಣ, ಅಕ್ಕೂರು ಪಿಎಸ್ಐ ಬಸವರಾಜು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿ, ಮೃತದೇವವನ್ನು ಹೊರತೆಗೆದು ನೋಡಿದಾಗ ಅದು ಶ್ವೇತಾಳ ಶವ ಎಂಬುದು ಖಚಿತವಾಯಿತು. ಮೃತಳ ಕುಟುಂಬಸ್ಥರು, ಶವ ಪರೀಕ್ಷೆಗೆ ದೇಹವನ್ನು ಹೊರ ತೆಗೆದುಕೊಂಡು ಹೋಗುವುದು ಬೇಡ. ಇಲ್ಲೇ ಶವಪರೀಕ್ಷೆ ಮಾಡಿಸಬೇಕೆಂದು ಪಟ್ಟು ಹಿಡಿದರು. ಆಗ ಪೊಲೀಸ್ ಅಧಿಕಾರಿಗಳು ರಾಜರಾಜೇಶ್ವರಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಆಗಮಿಸಿ, ಶವವನ್ನು ಪರಿಶೀಲಿಸಿದಾಗ, ತಲೆಯ ಹಿಂಭಾಗದಲ್ಲಿ ತೀವ್ರತರ ರಕ್ತಮಯ ಪೆಟ್ಟು ಬಿದ್ದಿದ್ದು, ಇಲ್ಲಿ ಶವ ಪರೀಕ್ಷೆ ಮಾಡಲಾಗದು. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡಿ ವರದಿ ಸಲ್ಲಿಸಲಾಗುವುದು ಎಂದು ಹೇಳಿದಾಗ, ಮೃತಳ ಕುಟುಂಬಸ್ಥರು ಒಪ್ಪಿದರು. ನಂತರ ಮೃತಳ ಶವವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಸಾಗಿಸಲಾಯಿತು. ಮೃತಳ ಕೊಲೆಗೆ ಕಾರಣವೇನು? ಯಾರು ಕೊಲೆ ಮಾಡಿದ್ದಾರೆ ಎಂಬುದು ನಿಗೂಡವಾಗಿದೆ. ಈ ಸಾವಿನ ಪ್ರಕರಣ ಸದ್ಯಕ್ಕೆ ಜಟಿಲವಾಗಿದೆ. ಪೊಲೀಸರ ತನಿಖೆಯಿಂದ ಕೊಲೆಯ ರಹಸ್ಯ ಬಹಿರಂಗವಾಗಬೇಕಾಗಿದೆ. ಅಕ್ಕೂರು ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑