Tel: 7676775624 | Mail: info@yellowandred.in

Language: EN KAN

    Follow us :


ಗಾಂಧಿ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ತಾರತಮ್ಯ: ಸು.ತ.ರಾಮೇಗೌಡ ವಿಷಾದ

Posted date: 04 Oct, 2023

Powered by:     Yellow and Red

ಗಾಂಧಿ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ತಾರತಮ್ಯ: ಸು.ತ.ರಾಮೇಗೌಡ ವಿಷಾದ

ಚನ್ನಪಟ್ಟಣ: ಬೊಂಬೆನಾಡಿಗೆ ಮುಕುಟುವಾಗಿರುವ ಗಾಂಧಿಭವಕ್ಕೆ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡುವಲ್ಲಿ ಜಿಲ್ಲಾಡಳಿತವು ತಾರತಮ್ಯ ಮಾಡುತ್ತಿದೆ ಎಂದು ಹಿರಿಯ ಪತ್ರಕರ್ತ ಸು.ತ.ರಾಮೆಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಅ.೨ ರ ಗಾಂಧಿ ಜಯಂತಿ ಪ್ರಯುಕ್ತ  ಗಾಂಧಿ ಭವನದ ಆವರಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋವರ್‍ಸ್ ವಿಭಾಗದ ವಿದ್ಯಾರ್ಥಿಗಳು ಮತ್ತು ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಆಸಕ್ತರು ಶ್ರಮಾಧಾನದ ಮೂಲಕ ಸ್ವಚ್ಚತಾ ಆಂದೋಲನ ಮಾಡಿ ಗಾಂಧೀಜಿಯವರ ಭಾವ ಚಿತ್ರಕ್ಕೆ ಸೇರಿದ್ದ ಎಲ್ಲರೂ ಪುಷ್ಪ ನಮನ ಸಲ್ಲಿಸಿ ತಮ್ಮ ಗೌರವ ಸೂಚಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧಿಯವರು ಚನ್ನಪಟ್ಟಣ ನಗರಕ್ಕೆ ಬಂದು ಈ ಗಾಂಧಿಭವನದ ಜಾಗದಲ್ಲಿ ಒಂದು ರಾತ್ರಿ  ಉಳಿದು ಹೋಗಿದ್ದರ ಬಗ್ಗೆ ಇಲ್ಲಿನ ಹಿರಿಯರು ಮಾತನಾಡುತ್ತಾರೆ. ಈ ಗಾಂಧಿ ಭವನಕ್ಕೆ ಹಲವು ವರ್ಷಗಳ ಇತಿಹಾಸಿದ್ದು, ಶಿಥಿಲಾವಸ್ಥೆಯಲ್ಲಿರುವ ಗಾಂಧಿಭನಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡುತ್ತಿರುವುದು ಖಂಡನೀಯವಾಗಿದೆ. ಜೊತೆಗೆ ಪಟ್ಟಣದ ಜನತೆ ಸಹ  ಈ ಗಾಂಧಿ ಭವನದ ಪುರೋಭಿವೃದ್ಧಿ ಪ್ರಶ್ನೆ ಬಂದಾಗ ಯಾರೂ ಸಹ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಹೇಗೋ ಹಾಗೆ ಸುಮ್ಮನಿದ್ದುಬಿಡುವುದು ಬೇಸರ ತಂದಿದೆ ಎಂದು ಹೇಳಿದರು.
ಮುಂದಿನ ಅಕ್ಟೋಬರ್ ೨ರ ಹೊತ್ತಿಗೆ ಇಲ್ಲಿ ಸುಸಜ್ಜಿತವಾದ ಗಾಂಧಿಭವನ ನಿರ್ಮಾಣವಾಗಬೇಕು ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ಈಗ ಭವನ ನಿರ್ಮಾಣದ ಒಂದು ಆಶಾಭಾವನೆ ಕಂಡುಬರುತ್ತಿದೆ. ಅದಕ್ಕಾಗಿ ತಾಲ್ಲೂಕಿನ ಎಲ್ಲಾ ಜನರು ಒಟ್ಟುಗೂಡಿ ಬೇಗ ಕಾರ್ಯಗತವಾಗುವಂತೆ ಒತ್ತಾಯಿಸಬೇಕಾಗಿದೆ ಎಂದು, ಇಲ್ಲಿ ಗಾಂಧಿ ಭವನ ಆಗಲು ಏನೇನು ಕಾರಣಗಳಿವೆ ಎಂಬುದನ್ನು ಬಿಡಿಸಿ ಹೇಳಿದರು.

ರಾಜ್ಯ ರೈತ ಸಂಘದ ವಿಭಾಗೀಯ ಅಧ್ಯಕ್ಷರಾದ ಕೆ.ಮಲ್ಲಯ್ಯನವರು ಮಾತನಾಡಿ ಹೋರಾಟದ ಪ್ರಶ್ನೆ ಬಂದಾಗ ನಾವು ಗಾಂಧಿಯವರನ್ನು ಸ್ಮರಿಸುತ್ತೇವೆ. ಈ ದಿಕ್ಕಿನಲ್ಲಿ ನಮ್ಮ ಸಂಘಟನೆಯು ಗಾಂಧಿಯವರ ಬಗ್ಗೆ ಅಪೂರ್ವವಾದ ಗೌರವವನ್ನು ಹೊಂದಿದೆ ಅದರಂತೆ ನಾವು ನಡೆಯುತ್ತಿದ್ದೇವೆ ಎಂದರು.
ನಿವೃತ್ತ ಅಧಿಕಾರಿ ಸಿ.ಎನ್.ರುದ್ರಪ್ಪ ಅವರು ಮಾತನಾಡಿ ಈಗ ಅಸ್ಥಿ ಪಂಜರದ ರೀತಿಯಲ್ಲಿ ಉಳಿದಿರುವ ಗಾಂಧಿ ಭವನಕ್ಕೆ ಬೇಗ ಕಾಯಕಲ್ಪ ಆಗಲಿ, ಅದಕ್ಕಾಗಿ ನಾವೆಲ್ಲರೂ ಶ್ರಮಿಸೋಣ ಎಂದು ಗಾಂಧೀಜಿಯವರ ಬದುಕು ಇದೇ ದಿನ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವು ಆಗಿದೆ. ಈ ಇಬ್ಬರು ಮಹನೀಯರು ಭಾರತದ ಪಾಲಿಗೆ ಅಪೂರ್ವವಾದ ರತ್ನಗಳು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಲಯನ್ ಸಂಸ್ಥೆಯ ಅಧ್ಯಕ್ಷರಾದ ತಿಪ್ರೇಗೌಡ, ಹಿರಿಯರಾದ ಸಿ.ಎನ್.ನಾರಾಯಣಸ್ವಾಮಿ, ಭಾರತ್ ವಿಕಾಸ್ ಪರಿಷತ್‌ನ ಅಧ್ಯಕ್ಷ ಗೋವಿಂದಯ್ಯ ಸ್ಕೌಟ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಈರಾನಾಯಕ್, ಚಂದ್ರು ಡಯೋಗ್ನೋಸ್ಟಿಕ್‌ನ ವಿ.ಬಿ.ಚಂದ್ರೇಗೌಡ, ಕರವೇ ಯ ಎಂ.ಎನ್.ಸತ್ಯನಾರಾಯಣ, ಬಿ.ಎನ್.ಕಾಡಯ್ಯ ಸೇರಿದಂತೆ ಹಲವು ಪ್ರಮುಖರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಗಾಂಧಿನಭವನವನ್ನು ನಿರಂತರವಾಗಿ ಸ್ವಚ್ಛವಾಗಿ ಇಟ್ಟುಕೊಳ್ಳುವ ಕೆಲಸ ಆಗಬೇಕು. ಹಾಗಾಗಿ ಸಂಘ ಸಂಸ್ಥೆಗಳವರು ಹಾಗೂ  ಇಲ್ಲಿನ ನಗರ ಸಭೆ ಸ್ವಚ್ಛತೆಯ ಬಗ್ಗೆ ನಿಗಾವಹಿಸಲು ಕೋರಲಾಯಿತು.
ಕಾರ್ಯಕ್ರಮವನ್ನು ಪತ್ರಕರ್ತ ಗೋ.ರಾ.ಶ್ರೀನಿವಾಸ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಈ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋವರ್‍ಸ್ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡು ಶ್ರಮದಾನವನ್ನು ಮಾಡಿದರು. ಗಾಂಧೀಜಿಯವರಿಗೆ ಪ್ರಿಯವಾದ ನೆಲೆಗಡಲೆಕಾಯಿ ಹಾಗೂ ಬೆಲ್ಲವನ್ನು ವಿತರಿಸಲಾಯಿತು.

ಗೋ ರಾ ಶ್ರೀನಿವಾಸ....
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑