Tel: 7676775624 | Mail: info@yellowandred.in

Language: EN KAN

    Follow us :


ದೀಪಾವಳಿ ನೆಪದಲ್ಲಿ ಅನಾಥವಾದ ನೆಹರು/ಮಕ್ಕಳ ಜಯಂತಿ

Posted date: 14 Nov, 2023

Powered by:     Yellow and Red

ದೀಪಾವಳಿ ನೆಪದಲ್ಲಿ ಅನಾಥವಾದ ನೆಹರು/ಮಕ್ಕಳ ಜಯಂತಿ

ರಾಮನಗರ: ಇಂದು ನವೆಂಬರ್ ೧೪ ಮಕ್ಕಳ ದಿನಾಚರಣೆ, ಚಾಚಾಜಿ ಅಡ್ಡ ಹೆಸರಿನ ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ರವರ ಹೆಸರಿನಲ್ಲಿ ರಾಷ್ಟ್ರದಾದ್ಯಂತ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದ ಅದರಲ್ಲೂ ಬಲಿಪಾಡ್ಯಮಿ ಯಂದೇ ಮಕ್ಕಳ ದಿನಾಚರಣೆ ಬಂದಿದ್ದು ಒಂದು ವರ್ಷ ಕಾಲ ಮರೆಯುವಂತೆ ಮಾಡಿದೆ.


ಇಂದು ಪ್ರಧಾನಿ ಜವಾಹರಲಾಲ್ ನೆಹರು ಅವರ ೧೩೪ನೇ ಜನ್ಮ ದಿನಾಚರಣೆ. ಮಕ್ಕಳನ್ನು ಜೀವದಂತೆ ಪ್ರೀತಿಸಿದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ ೧೪ ರಂದು ಭಾರತದಲ್ಲಿ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಪಂಡಿತ್ ಜವಾಹರಲಾಲ್ ನೆಹರು ಅವರು ೧೮೮೯ ರಲ್ಲಿ ಅಲಹಾಬಾದ್ ನಲ್ಲಿ ಜನಿಸಿದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಬರಹಗಾರರಾಗಿದ್ದ ಅವರು, ವಾಗ್ಮಿ ಮತ್ತು ರಾಜಕಾರಣಿಯಾಗಿ ವಿವಿಧ ಸಾಮರ್ಥ್ಯಗಳಲ್ಲಿ ಪ್ರಸಿದ್ಧರಾಗಿದ್ದರು. ಚಾಚಾ ನೆಹರೂ ಅವರು ಆಧುನಿಕ ಭಾರತವನ್ನು ನಿರ್ಮಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ ಎಂದು ಪರಿಗಣಿಸಲಾಗಿದೆ.


೧೯೬೪ ರಲ್ಲಿ ಜವಾಹರಲಾಲ್ ನೆಹರು ಅವರು ಮರಣ ಹೊಂದಿದರು. ನಂತರ ಸಂಸತ್ತು ಅವರ ಜನ್ಮದಿನವಾದ ನವೆಂಬರ್ ೧೪ನೇ ದಿನಾಂಕವನ್ನು ಮಕ್ಕಳ ದಿನವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು. ಜವಾಹರಲಾಲ್ ನೆಹರೂ ಅವರ ಮರಣದ ಮೊದಲು, ಭಾರತವು ನವೆಂಬರ್ ೨೦ ರಂದು ಮಕ್ಕಳ ದಿನವನ್ನು ಆಚರಿಸಿತು. ವಿಶ್ವಸಂಸ್ಥೆಯು ವಿಶ್ವ ಮಕ್ಕಳ ದಿನವನ್ನಾಗಿ ಆಚರಿಸಿದ ದಿನವು ಅದಾಗಿತ್ತು. ಆದರೆ ಅವರ ಮರಣದ ನಂತರ ಅವರ ಜನ್ಮದಿನವನ್ನು ಮಕ್ಕಳ ದಿನಾವರಣೆಯನ್ನಾಗಿ ಆಚರಿಸಲಾಯಿತು.


೨೦೨೩ ನೇ ಸಾಲಿನಲ್ಲಿ ದೀಪಾವಳಿ ಹಬ್ಬದಂದೇ ಮಕ್ಕಳ ದಿನಾಚರಣೆ ಬಂದಿದೆ. ಹಬ್ಬಕ್ಕೆಂದು ರಜೆ ನೀಡಿದ್ದರಿಂದ ಶಾಲಾ-ಕಾಲೇಜುಗಳು ರಜೆ ಇರುವುದರಿಂದ ಮಕ್ಕಳಿಗೆ ಅರ್ಥಪೂರ್ಣವಾದ ಮಕ್ಕಳ ಅರ್ಥಾತ್ ನೆಹರು ಜಯಂತಿ ನೆನಪಿಲ್ಲದಂತಾಗಿದೆ. ಹಲವಾರು ಸರ್ಕಾರಿ ರಜಾ ದಿನಗಳಂದು ಹಲವು ಮಹನೀಯರ ಜಯಂತಿಯನ್ನು ಸ್ಥಳೀಯ ಆಡಳಿತ ಸರಳವಾಗಿಯಾದರೂ ಆಚರಿಸುತ್ತಾರೆ, ಅದರಲ್ಲೂ ಸಮುದಾಯದ ನಾಯಕರಾಗಿ ಗುರುತಿಸಿಕೊಂಡವರ ದಿನಾಚರಣೆಯನ್ನು ಚಾಚು ತಪ್ಪದೆ ನೆರವೇರಿಸುತ್ತಾರೆ. ಬಹುಶಃ ಸಮುದಾಯದ ನಾಯಕರ ಕೆಂಗಣ್ಣಿಗೆ ಗುರಿಯಾಗುತ್ತೇವೆ ಎಂಬ ಭಯ ಕಾಡಿರಬಹುದು. ಆದರೆ ಮಕ್ಕಳ ದಿನಾಚರಣೆಯನ್ನು ಶಾಲೆಗಳು ಹಾಗೂ ಸ್ಥಳೀಯ ಆಡಳಿತ ಸಾಂಕೇತಿಕವಾಗಿಯಾದರೂ ಆಚರಿಸಿ, ಮಕ್ಕಳಿಗೆ ಹಾಗೂ ಮಾಜಿ ಪ್ರಧಾನಮಂತ್ರಿ ಗಳಿಗೆ ಗೌರವ ಸೂಚಿಸಬಹುದಾಗಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


ನವೆಂಬರ್ ೧೫ನೇ ದಿನಾಂಕದಂದಾದರು ಪ್ರತಿ ಶಾಲಾ-ಕಾಲೇಜುಗಳಲ್ಲಿ ವಿಜೃಂಭಣೆಯಿಂದ ಮಕ್ಕಳ ದಿನಾಚರಣೆಯನ್ನಾಚರಿಸಿ, ಚಾಚಾ ನೆಹರುರವರ ದೂರದರ್ಶಿತ್ವದ ಮನವರಿಕೆ ಮಾಡಿಕೊಡಲಿ ಎಂಬುದು ಪತ್ರಿಕೆಯ ಆಶಯವಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑