Tel: 7676775624 | Mail: info@yellowandred.in

Language: EN KAN

    Follow us :


ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್, ಡಿಪೋ ತಡೆಗೋಡೆಗೆ ಢಿಕ್ಕಿ

Posted date: 23 Nov, 2023

Powered by:     Yellow and Red

ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್, ಡಿಪೋ ತಡೆಗೋಡೆಗೆ ಢಿಕ್ಕಿ

ಚನ್ನಪಟ್ಟಣ: ಇತ್ತೀಚೆಗೆ ತಾಲ್ಲೂಕಿನಾದ್ಯಂತ ಸಾರಿಗೆ ಬಸ್ಸುಗಳ ಅಪಘಾತ ಹೆಚ್ಚಾಗುತ್ತಿದ್ದು, ಅಮಾಯಕರ ಪ್ರಾಣವನ್ನು ಬಲಿ ಪಡೆಯುತ್ತಿವೆ. ರಸ್ತೆಯ ಮೇಲೆ ಸಂಚರಿಸುವ ಸಾರಿಗೆ ಬಸ್ಸುಗಳ ಅಪಘಾತವಷ್ಟೇ ಅಲ್ಲದೆ ಡಿಪೋ ಗೆ ಸರ್ಮಿಸ್‍ಗೆ ಬಂದಿದ್ದ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್‍ಗೆ ಡಿಕ್ಕಿ ಹೊಡೆದು ಗೋಡೆಯನ್ನು ಬೀಳಿಸಿರುವ ಘಟನೆ ನಗರದ ಸಾರಿಗೆ ಡಿಪೋದಲ್ಲಿ ನಡೆದಿದೆ.


ಸರ್ವಿಸ್‍ಗೆಂದು ಬಿಟ್ಟಿದ್ದ ಬಸ್ ಅನ್ನು ಮೆಕಾನಿಕ್ ಚಾಲನೆ ಮಾಡುವಾಗ ನಿಯಂತ್ರಣ ತಪ್ಪಿ ಅದು ಕೆಎಸ್‍ಆರ್‍ಟಿಸಿ ಡಿಪೋದ ಗೋಡೆಗೆ ಡಿಕ್ಕಿಯಾಗಿದ್ದು, ಗೋಡೆಯನ್ನು ಸೀಳಿಕೊಂಡು ಬಸ್ ರಸ್ತೆ ಬದಿಗೆ ಬಂದು ನಿಂತಿದೆ. ಸ್ವಲ್ಪ ಮುಂದೆ ಬಂದಿದ್ದರೆ ಅಥವಾ ಕಾಂಪೌಂಡ್ ಇಲ್ಲದಿದ್ದರೆ ರಸ್ತೆಯಲ್ಲಿ ಹಾದು ಹೋಗುವ ವಾಹನಗಳಿಗೆ ಢಿಕ್ಕಿ ಹೊಡೆಯುವ ಸಾಧ್ಯತೆ ದಟ್ಟವಾಗಿತ್ತು.


ಕೆಎಸ್‍ಆರ್‍ಟಿಸಿ ಡಿಪೋ ಒಳಗೆ ಮತ್ತು ಕಾಂಪೌಂಡ್ ಹೊರಗೆ ಮೂರು ಚರಂಡಿ ಇದ್ದ ಹಿನ್ನೆಲೆಯಲ್ಲಿ ಚರಂಡಿಗೆ ಟೈರುಗಳು ಸಿಲುಕಿದ ಪರಿಣಾಮ ಬಸ್ ಕಾಂಪೌಂಡ್ ಒಳಗೆ  ನಿಂತಿದ್ದರಿಂದ ಅನಾಹುತ ತಪ್ಪಿದೆ. ಬಸ್ ನಿಲ್ಲದೇ ಇದಲ್ಲಿ ರಸ್ತೆಗಿಳಿದು ಹೆಚ್ಚಿನ ಅನಾಹುತವಾಗುವ ಸಂಭವವಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಎದುರು ವಾಸದ ಮನೆಗಳ ಜೊತೆಗೆ ಪಕ್ಕದಲ್ಲೆ ವಸತಿ ಶಾಲೆಯು ಸಹ ಇದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.


ಚನ್ನಪಟ್ಟಣ ಡಿಪೋಗೆ ಸಾರಿಗೆ ನಿಗಮ ನೀಡುತ್ತಿರುವ ಬಸ್ಸುಗಳು ತುಂಬಾ ಹಳೆಯ ಬಸ್ಸುಗಳಾಗಿವೆ. ಬೆಂಗಳೂರು ನಗರ ಸೇರಿದಂತೆ ವಿವಿಧ ಕಡೆ ಸಂಚಾರ ಮುಗಿಸಿ ಗುಜರಿಗೆ ಹೋಗುವಂತಹ ಬಸ್ಸುಗಳನ್ನು ಇಲ್ಲಿಗೆ ಕಳುಹಿಸಲಾಗುತ್ತಿದೆ. ಸರ್ಕಾರದ ನಿಯಮಾನುಸಾರ ಯಾವುದೇ ಬಸ್ಸುಗಳು ಇಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ಹಾಗಾಗಿ ಬಸ್ಸುಗಳು ನಿಯಂತ್ರಣ ತಪ್ಪುತ್ತಿವೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.


ವ್ಯವಸ್ಥಾಪಕ ನಿರ್ದೇಶಕರಾದ ರಾಘವೇಂದ್ರ ರವರು ಅಪಘಾತಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತ್ಯುತ್ತರ ನೀಡಲು ಅಸಹಾಯಕರಂತೆ ಕಂಡು ಬರುತ್ತಿದ್ದಾರೆ. ಇತ್ತೀಚೆಗೆ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಸ್ಟೇರಿಂಗ್ ಕಟ್ ಆಗಿ ಇಬ್ಬರು ಅಮಾಯಕರನ್ನು ಬಲಿ ಪಡೆದಾಗಲು ನುಣುಚಿಕೊಂಡ ಇವರು ಡಿಪೋದಲ್ಲಿ ಆಗಿರುವ ಅಪಘಾತಕ್ಕೆ ಸಂಬಂಧಿಸಿದಂತೆ ಮಾಹಿತಿ ಕೇಳಲು ಅವರ ಮೊಬೈಲ್ ಗೆ ಕರೆ ಮಾಡಿದರೂ ಸಹ ಅವರು ಪೋನ್ ರಿಸೀವ್ ಮಾಡದಿರುವುದು ಸಾರಿಗೆ ಯಲ್ಲಿ ಎಲ್ಲವೂ ಸರಿಯಿಲ್ಲಾ ಎಂಬುದನ್ನು ತೋರಿಸುತ್ತಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑