Tel: 7676775624 | Mail: info@yellowandred.in

Language: EN KAN

    Follow us :


ಜನಸಾಮಾನ್ಯರು ಪೋಲೀಸರ ಮೇಲೆ ವಿಶ್ವಾಸವಿಡುವಂತೆ ಕೆಲಸ ಮಾಡಬೇಕು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ

Posted date: 09 Dec, 2023

Powered by:     Yellow and Red

ಜನಸಾಮಾನ್ಯರು ಪೋಲೀಸರ ಮೇಲೆ ವಿಶ್ವಾಸವಿಡುವಂತೆ ಕೆಲಸ ಮಾಡಬೇಕು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ

ಚನ್ನಪಟ್ಟಣ: ಜನಸಾಮಾನ್ಯರು ಪೊಲೀಸರ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಯಾವುದೇ ಅಪರಾಧಿ ಆಗಲಿ, ಎಷ್ಟೇ ಪ್ರಭಾವಿಯಾಗಿರಲಿ ಆತನಿಗೆ ಕಠಿಣ ಶಿಕ್ಷೆ ಕೊಡಿಸಬೇಕು, ಜನಸಾಮಾನ್ಯರ ಜತೆ ಸೌಜ್ಯನದಿಂದ ವರ್ತಿಸಬೇಕು ಎಂಬುದಾಗಿದೆ.  ಆಟೋಟಗಳಲ್ಲಿ ಕ್ರೀಡಾಸ್ಫೂತಿಯಿಂದ ಭಾಗವಹಿಸುವಂತೆ ವೃತ್ತಿಯಲ್ಲೂ ಸಮತೋಲನ ಸಾಧಿಸಿ ಜನರ ಜತೆಗೆ ಸೌಮ್ಯವಾಗಿ ವರ್ತಿಸಿ ಎಂದು ಕೇಂದ್ರ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಸಲಹೆ ನೀಡಿದರು.


ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಕ್ರೀಡೆಗಳಲ್ಲಿ ತೋರಿದ ಕ್ರೀಡಾಸ್ಫೂರ್ತಿಯನ್ನೇ ಪೊಲೀಸರು ತಮ್ಮ ವೃತ್ತಿ ಜೀವನದಲ್ಲೂ ತೋರಬೇಕು.  ಪೋಲಿಸರಿಗಾಗಿ ಆಯೋಜಿಸುವ ವಾರ್ಷಿಕ ಕ್ರೀಡಾಕೂಟ ಸಂಪ್ರದಾಯ ಅಲ್ಲ ನಮ್ಮ ಪರಂಪರೆ ಎಂದರು. ಪೊಲೀಸರು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಡೆಗಣಿಸಿ ಕೆಲಸ ನಿರ್ವಸುತ್ತಾರೆ. ಪ್ರತಿ ವರ್ಷ ನಡೆಯುವ ಕ್ರೀಡಾಕೂಟ ಪೊಲೀಸರು ತಮ್ಮ ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಉತ್ತಮವಾಗಿಟ್ಟುಕೊಂಡಿದ್ದಾರಾ ಎಂದು ನೋಡಲು ಅಯೋಜಿಸುವ ಪರೀಕ್ಷೆ. ಪೊಲೀಸರು ಒಂದೇ ಕುಟುಂಬಕ್ಕೆ ಸೇರಿದವರು, ಪರೇಡ್ ಮೈದಾನದಲ್ಲಿ ನಮ್ಮ ಚಟುವಟಿಕೆ ಒಂದೇ ಆಗಿರುತ್ತದೆ. ಠಾಣೆಗಳಲ್ಲಿ ಸಹ ಕಾನೂನು ಸುವ್ಯವಸ್ಥೆ, ಜನರ ಸಂರಕ್ಷಣೆ ವಿಚಾರದಲ್ಲಿ ನಮ್ಮ ಬದ್ಧತೆ ಒಂದೇ ಆಗಿದೆ. ಕಾನ್ಸ್‌ಟೇಬಲ್ ಹುದ್ದೆಯಿಂದ ಉನ್ನತ ಹುದ್ದೆವರೆಗೂ ನಾವೆಲ್ಲರೂ ಒಂದೇ ಕುಟುಂಬ ಇದ್ದಂತೆ ಸಮಾಜದ ನಿರೀಕ್ಷೆಯಂತೆ ಎಲ್ಲರೂ ಒಂದಾಗಿ ನಮ್ಮ ದೈನಂದಿನ ಒತ್ತಡಗಳನ್ನು ಬದಿಗೊತ್ತಿ  ಸಮಾಜದ ಒಳಿತಿಗಾಗಿ ಶ್ರಮಿಸೋಣ ಎಂದರು.


ಈ ವಾರ್ಷಿಕ ಕ್ರೀಡಾ ಕೂಟದಲ್ಲಿ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಜೇತ ಸ್ಪರ್ಧಿಗಳಿಗೆ ಹಾಗೂ ತಂಡಕ್ಕೆ ಬಹುಮಾನಗಳನ್ನು ವಿತರಣೆ ಮಾಡಿದರು.


ಪುರುಷರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಡಿಎಆರ್, ಭಾಗದ ಮಧು ಎಪಿಸಿ  227 ರವರು, ಮಹಿಳಾ ವಿಭಾಗದಲ್ಲಿ ಹಾರೋಹಳ್ಳಿ  ಪೋಲೀಸ್ ಠಾಣೆಯ ಸಹನಾ ಬಾನು ರವರು ಪ್ರಶಸ್ತಿ ಪಡೆದಿರುತ್ತಾರೆ. ಅತ್ಯುತ್ತಮ ತಂಡ ಪ್ರಶಸ್ತಿಯನ್ನು ಡಿಎಆರ್‍ ತಂಡವು ತನ್ನದಾಗಿಸಿ ಕೊಂಡಿತು.


ಕ್ರೀಡಾಕೂಟದಲ್ಲಿ ವಿಶೇಷವಾಗಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಡಿಪಿಒ ತಂಡವು ಈ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರೆ, ಚನ್ನಪಟ್ಟಣ ತಂಡವು ಎರಡನೇ ಸ್ಥಾನವನ್ನು ಪಡೆದಿರುತ್ತದೆ. ಪುರುಷರ ಹಗ್ಗ ಜಗ್ಗಾಟ ಪಂದ್ಯದಲ್ಲಿ ತಂಡವು ಚನ್ನಪಟ್ಟಣ ಜಯಭೇರಿ ಬಾರಿಸಿದರೆ, ಮೊದಲ ಬಾರಿಗೆ ನಡೆದ ಮಹಿಳಾ ವಿಭಾಗದ ಹಗ್ಗ ಜಗ್ಗಾಟ ಪಂದ್ಯದಲ್ಲಿ ರಾಮನಗರ ತಂಡವು ಜಯಭೇರಿ ಬಾರಿಸಿದೆ..


ಮೂರು ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ಲಿಪಿಕ ಸಿಬ್ಬಂದಿ ವರ್ಗದವರು, ಪೋಲೀಸ್ ಕುಟುಂಬ ವರ್ಗದವರು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಮೆರುಗು ತಂದರು.


ಕಾರ್ಯಕ್ರಮದಲ್ಲಿ ಪೋಲೀಸ್ ಅಧೀಕ್ಷಕರಾದ ಕಾರ್ತಿಕ್ ರೆಡ್ಡಿ ಐಪಿಎಸ್  ಹೆಚ್ಚುವರಿ ಪೋಲೀಸ್ ಅಧಿಕ್ಷಕರಾದ ಟಿ.ವಿ ಸುರೇಶ್ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑