Tel: 7676775624 | Mail: info@yellowandred.in

Language: EN KAN

    Follow us :


ಎಲಿಯೂರು ಈ ಧನಂಜಯ ರವರಿಗೆ ಹೆಚ್ ಎನ್ ಪ್ರಶಸ್ತಿ ಪ್ರದಾನ

Posted date: 02 Jan, 2024

Powered by:     Yellow and Red

ಎಲಿಯೂರು ಈ ಧನಂಜಯ ರವರಿಗೆ ಹೆಚ್ ಎನ್ ಪ್ರಶಸ್ತಿ ಪ್ರದಾನ

ಚನ್ನಪಟ್ಟಣ: ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ನಡೆದ ರಾಜ್ಯಮಟ್ಟದ ಸಮ್ಮೇಳನದಲ್ಲಿ ಚನ್ನಪಟ್ಟಣ ತಾಲ್ಲೂಕಿನ ಎಲಿಯೂರು ಗ್ರಾಮದ ಈ.ಧನಂಜಯ ಎಲಿಯೂರು ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ( ರಿ.) ವತಿಯಿಂದ  ನೀಡುವ ರಾಜ್ಯ ಮಟ್ಟದ ಹೆಚ್.ಎನ್. ಪ್ರಶಸ್ತಿ (ಹೆಚ್.ನರಸಿಂಹಯ್ಯ ಪ್ರಶಸ್ತಿ) ಪ್ರದಾನ ಮಾಡಲಾಯಿತು.


ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಹುಲಿಕಲ್ ನಟರಾಜು ಮಾತನಾಡಿ, ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮೌಡ್ಯದ ವಿರುಧ್ಧ ಧನಿಯೆತ್ತುತ್ತಾ ವೈಚಾರಿಕ ದಾರಿಯಲ್ಲಿ ಸಾಗುತ್ತಿರುವ  ಇಂಥವರಿಗೆ ಖ್ಯಾತ ವಿಚಾರವಾದಿ ಎಚ್ .ಎನ್.ಪ್ರಶಸ್ತಿ ದೊರೆತಿರುವುದು ಅರ್ಥಪೂರ್ಣ  ಮತ್ತು ಪ್ರಶಸ್ತಿಗೂ ಒಂದು ಮೌಲ್ಯ ಹೆಚ್ಚಿದಂತೆ  ಎಂದು  ತಿಳಿಸಿದರು.


 ಶಿಕ್ಷಣ ತಜ್ಞ, ಗಾಂಧಿವಾದಿ, ವಿಚಾರವಾದಿ ಹೆಚ್.ನರಸಿಂಹಯ್ಯ ಅವರ ವೈಚಾರಿಕ ಭಾಷಣಗಳಿಂದ ಈ  ಧನಂಜಯ  ಪ್ರಭಾವಿತರಾದವರು.


ರಾಷ್ಟ್ರಕವಿ ಕುವೆಂಪು ಅವರನ್ನು ಭೇಟಿಯಾಗಿ ಬಾಲ್ಯದಿಂದಲೇ ವೈಚಾರಿಕ ಪ್ರಜ್ಞೆ ಮೂಡಿಸಿಕೊಂಡು ಸಾಮಾಜಿಕ ಕಾಳಜಿಯಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬದುಕು ಸ್ವಯಂ ಸೇವಾ ಸಂಸ್ಥೆಯ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು  ಹಮ್ಮಿಕೊಂಡು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮತ್ತು ಕುವೆಂಪು ಮಂತ್ರ ಮಾಂಗಲ್ಯದ ಮೂಲಕ  ಸಾವಿರಾರು ಸರಳ ಮದುವೆಗಳಿಗೆ ಸಾಕ್ಷಿಯಾಗಿ ಮಾನವ ಮಂಟಪದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮೌಡ್ಯಾಚರಣೆಯ ಬಗ್ಗೆ ಲೇಖನಗಳನ್ನು ಬರೆದು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇವರು  ರಾಜ್ಯಮಟ್ಟದ ಹೆಚ್.ಎನ್ ಪ್ರಶಸ್ತಿ ಭಾಜನರಾಗಿರುವುದು  ಅಭಿನಂದನೀಯ ಎಂದು ಪರಿಷತ್ತಿನ ಮೈಸೂರು ಜಿಲ್ಲಾಧ್ಯಕ್ಷರಾದ ಡಾ.ಎಸ್.ಮಂಗಳಮೂರ್ತಿ ತಿಳಿಸಿದರು.


ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಈ ವೈಚಾರಿಕ, ವೈಜ್ಞಾನಿಕ ಸಮ್ಮೇಳದಲ್ಲಿ ವಿಚಾರ ಗೋಷ್ಠಿ ಗಳು, ಪವಾಡ ರಹಸ್ಯ ಬಯಲು, ಸಾಂಸ್ಕತಿಕ ಕಾರ್ಯಕ್ರಮ, ವಿಜ್ಞಾನ ವಸ್ತು ಪ್ರದರ್ಶನ ಮತ್ತು ಗೀತ ಗಾಯನ ಕಾರ್ಯಕ್ರಮ ಜರುಗಿತು.


ಕರ್ನಾಟಕ ಸರಕಾರ  ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಲಿಂಗಸಗೂರು ಶಾಸಕರಾದ ಮಾನಪ್ಪ ಡಿ.ವಜ್ಜಲ್ ಪ್ರಶಸ್ತಿ ಪ್ರದಾನ ಮಾಡಿದರು. ರಾಯಚೂರು ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ , ಹಟ್ಟಿ ಚಿನ್ನದ ಗಣಿಯ ವ್ಯವಸ್ಥಾಪಕ ನಿರ್ದೇಶಕರಾದ ಸಂಜಯ ಬಿ.ಶೆಣ್ಣೆನ್ನವರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑