Tel: 7676775624 | Mail: info@yellowandred.in

Language: EN KAN

    Follow us :


ಪ್ರತಿ ವಿದ್ಯಾರ್ಥಿಗಳು ಕೌಶಲ್ಯ ರೂಢಿಸಿಕೊಳ್ಳಬೇಕು: ಶಿಕ್ಷಣಾಧಿಕಾರಿ ಮರಿಗೌಡ

Posted date: 26 Jan, 2024

Powered by:     Yellow and Red

ಪ್ರತಿ ವಿದ್ಯಾರ್ಥಿಗಳು ಕೌಶಲ್ಯ ರೂಢಿಸಿಕೊಳ್ಳಬೇಕು: ಶಿಕ್ಷಣಾಧಿಕಾರಿ ಮರಿಗೌಡ

ಚನ್ನಪಟ್ಟಣ: ಶಾಲಾ ವಿದ್ಯಾರ್ಥಿಗಳು ಕೇವಲ ಪಾಠ ಮತ್ತು ಆಟಕ್ಕೆ ಸೀಮಿತವಾಗದೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಕೌಶಲ್ಯ ಕಲಿತ ಮಕ್ಕಳ ಪ್ರತಿಭೆಯನ್ನು ಹೊರಸೂಸುವ ಆ ಒಂದು ದಿನವೇ ಸಡಗರ, ಸಂಭ್ರಮ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮರಿಗೌಡ ತಿಳಿಸಿದರು.

ಅವರು ನಗರದ ಬಾಲು ಶಾಲೆಯ ಆಟದ ಮೈದಾನ (ಹಳೇ ಕೊರ್ಟ್ ಹತ್ತಿರ) ಕೋಟೆಯಲ್ಲಿ ಆಯೋಜಿಸಿದ್ದ ಬಾಲು ಶಾಲೆಯ ೨೨ ನೇವರ್ಷ ದ ವಾರ್ಷಿಕೋತ್ಸವ ಸಮಾರಂಭ- ೨೦೨೪ ರ ಸಡಗರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಮಕ್ಕಳಲ್ಲಿ ಸುಪ್ತ ಪ್ರತಿಭೆ ಇರುತ್ತದೆ, ಆ ಪ್ರತಿಭೆಯನ್ನು ಗುರುತಿಸಲು ಶಿಕ್ಷಕರು ಹಾಗೂ ಪೋಷಕರು ಸಶಕ್ತರಾಗಬೇಕು. ಈ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಪ್ರತಿವರ್ಷದಂತೆ ಈ ವರ್ಷವು ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಿದ್ದು ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇಂದು ಅವರ ಪ್ರತಿಭೆಯನ್ನು ಗುರುತಿಸುವ ದಿನವಾಗಿದೆ ಎಂದರು.


ಪ್ರತಿಯೊಂದು ಮನೆಯಲ್ಲಿಯು ಪೋಷಕರು ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಬೇಕು ಹಾಗೂ ಮಕ್ಕಳು ಯಾವುದರ ಬಗ್ಗೆ ಆಸಕ್ತಿ ಹೊಂದಿದ್ದಾರೆಂದು ತಿಳಿದುಕೊಂಡು ಮಕ್ಕಳಿಗೆ ಯಾವುದರ ಬಗ್ಗೆ ಅಸಕ್ತಿ ಇದೆ ಅದನ್ನು ಪ್ರೊತ್ಸಾಹಿಸಿದರೆ ಮಕ್ಕಳು ರಾಷ್ಟ್ರದ ಆಸ್ತಿಯಾಗುತ್ತಾರೆ, ಸಮಾಜಘಾತುಕ ವ್ಯಕ್ತಿ ಯಾಗುವುದಿಲ್ಲ. ಇದು ಅವರ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.

ಮಕ್ಕಳ ಪರೀಕ್ಷೆ ಸಮಯದಲ್ಲಿ ಎರಡು ತಿಂಗಳು ಟಿವಿ ಬಂದ್ ಮಾಡಿದರೆ ಮಕ್ಕಳು ಹೆಚ್ಚು  ಶಿಕ್ಷಣ ಪಡೆಯಲು ಸಾದ್ಯವಾಗುತ್ತದೆ. ಹಾಗೂ ಅವರ ಗಮನ ಓದುವುದನ್ನು ಬಿಟ್ಟು ಬೇರೆ ಕಡೆ ಹೋಗುವುದಿಲ್ಲ ಎಂದರು.


ಕರ್ನಾಟಕದ ಮಕ್ಕಳು ತುಂಬಾ ಬುದ್ದಿವಂತರು. ಅಮೆರಿಕಾ ದೇಶದ ಶಿಕ್ಷಣಕ್ಕೆ ಪೈಪೋಟಿಕೊಡುವ ದೇಶ ಯಾವುದೇಂದರೆ ಅದು ಭಾರತ ಅದರಲ್ಲೂ ಕರ್ನಾಟಕ ಮುಂದು ಎಂದು ಸ್ವತಃ ಅಮೇರಿಕಾ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ತಿಳಿಸಿದ್ದಾರೆ ಎಂದು ನೆನಪಿಸಿದರು. ಶೈಕ್ಷಣಿಕ ಸಂಸ್ಥೆಗಳು ಮತ್ತು ಪೋಷಕರು ಮಕ್ಕಳ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದರೆ ದೇಶದ ಸತ್ಪ್ರಜೆಗಳಾಗಿ ಬೆಳೆಯುತ್ತಾರೆ ಎಂದ ಅವರು, ಈ ನಿಟ್ಟಿನಲ್ಲಿ ಬಾಲು ಶಿಕ್ಣಣ ಸಂಸ್ಥೆ ಯು  ಮಕ್ಕಳಿಗೆ ಕಡಿಮೆ ಶುಲ್ಕ ಪಡೆದು ಉತ್ತಮ ಶಿಕ್ಷಣ ನೀಡುತ್ತಿದೆ ಎಂದು ತಿಳಿಸಿ ಶಾಲೆಯು ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಇದೇ ಸಮಯದಲ್ಲಿ ಆಶಿಸಿದರು.


ಸಂದರ್ಭದಲ್ಲಿ ಕಳೆದ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಗಣ್ಯರನ್ನು ಬಾಲು ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ವೆಂಕಟಸುಬ್ಬಯ ಚೆಟ್ಟಿ, ಬಾಲು ಸಂಸ್ಥೆಯ ಜಂಟಿ ನಿರ್ದೇಶಕ ಬಾಲಸುಬ್ರಹ್ಮಣ್ಯಂ, ಡಾ.ಮನೋಜ್ ಅವರು ಸನ್ಮಾನಿಸಿ ಅಭಿನಂದಿಸಿದರು. 

ಕಾರ್ಯಕ್ರಮದಲ್ಲಿ ಮಂಜುಳಾ, ಅಣ್ಣಮ್ಮ ಎಂಬ ಇಬ್ಬರು ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

 ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವೇದಿಕೆಯಲ್ಲಿ ಒಕ್ಕಲಿಗರ ಸಂಘದ ಸಹಕಾರ್ಯದರ್ಶಿ ವೆಂಕಟರಾಮೇಗೌಡ, ರಾಮನಗರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀವತ್ಸ, ತಿಪ್ರೇಗೌಡ, ರಾಜು, ವರದರಾಜು, ಕುಸುಮಲತಾ, ಶಿವಕುಮಾರ್, ಗಂಗಾಧರ್, ಯೋಗೇಶ್ ಚಕ್ಕೆರೆ, ವೆಂಕಟೇಶ್ ಮೂರ್ತಿ, ಅಜಾದ್ ಬ್ರೀಗೇಡ್ ಅಧ್ಯಕ್ಷ ಗಜೇಂದ್ರ ಸಿಂಗ್, ರೇಣುಕಾ ಜಗದೀಶ್,  ಡಾ. ಶೈಲಜಾ ಕೆಪಿ, ವಿ. ಕವಿತಾ,  ಡಾ.ಕೆ.ಪಿ ನೀರಜಾ, ಡಾ.ಜಯಶ್ರೀ, ಕವಿತಾ ಎಸ್, ಹಾಗೂ ಸಮಾರಂಭದಲ್ಲಿ ವಿದ್ಯಾರ್ಥಿಗಳು ಪೋಷಕರು ಸೇರಿದಂತೆ ಹಲವರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑