Tel: 7676775624 | Mail: info@yellowandred.in

Language: EN KAN

    Follow us :


ಯುವ ಪೀಳಿಗೆ ಹಕ್ಕು ಮತ್ತು ಕರ್ತವ್ಯ ಮರೆಯುತ್ತಿದೆ. ಮಂಜುನಾಥ್

Posted date: 26 Jan, 2024

Powered by:     Yellow and Red

ಯುವ ಪೀಳಿಗೆ ಹಕ್ಕು ಮತ್ತು ಕರ್ತವ್ಯ ಮರೆಯುತ್ತಿದೆ. ಮಂಜುನಾಥ್

ಚನ್ನಪಟ್ಟಣ: ಇಂದಿನ ವಿದ್ಯಾರ್ಥಿ ಸಮೂಹ ಹಾಗೂ ಯುವ ಪೀಳಿಗೆಯು ಹಕ್ಕು ಮತ್ತು ಕರ್ತವ್ಯಗಳನ್ನು ಮರೆಯುತ್ತಿದ್ದಾರೆ. ಸಂವಿಧಾನದ ಆಶಯಗಳಿಗೆ ಬದ್ದರಾಗುತ್ತಿಲ್ಲಾ

ಡಾ.ಬಿ.ಆರ್.ಅಂಬೇಡ್ಕರ್‌ ರವರು ಶ್ರೇಷ್ಠ ಸಂವಿಧಾನ ಕೊಡುಗೆ ನೀಡಿದರಿಂದಲೇ             ದೇಶ ಸುಭದ್ರ ಮತ್ತು ಪ್ರಗತಿಯತ್ತ ಸಾಗುತ್ತಿದೆ - ಅದನ್ನು ಯುವಪೀಳಿಗೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಬೇವೂರು ಗ್ರಾಮದ ಶ್ರೀ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ  ಮಂಜುನಾಥ್ ಆರ್ ಪಿ ಅಭಿಪ್ರಾಯಪಟ್ಟರು. ಅವರು ನಗರದಲ್ಲಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ  ಸಮಿತಿ ಹಮ್ಮಿಕೊಂಡಿದ್ದ ೭೫ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.


ವಿವಿಧತೆಯಲ್ಲಿ ಏಕತೆಯನ್ನು ಹೊಂದಿ ಪ್ರಗತಿಯನ್ನು ಸಾಧಿಸುತ್ತಾ ಇಡೀ ವಿಶ್ವವೇ ಭಾರತ ದೇಶದತ್ತ  ನೋಡುತ್ತಿರುವುದಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಶ್ರೇಷ್ಠ ಮತ್ತು ಸುಭದ್ರ ಸಂವಿಧಾನವೇ ಕಾರಣವಾಗಿದೆ. ಭಾರತ ದೇಶದ ಗಣರಾಜ್ಯೋತ್ಸವ ಹಾಗೂ  ಸಂವಿಧಾನದ ಮಹತ್ವವನ್ನು ವಿವರಿಸಿದ ಅವರು, ಜನವರಿ ೨೬, ಭಾರತ ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ದಿನ. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ರಚನಾ ತಂಡದ ಸದಸ್ಯರು ಭಾರತ ದೇಶಕ್ಕೆ ಸದೃಢ ಸಂವಿಧಾನವನ್ನು ಕೊಡಲು ೨ ವರ್ಷ ೧೧ ತಿಂಗಳು ೧೮ ದಿನವನ್ನು ತೆಗೆದುಕೊಂಡಿದ್ದರು. ಅವರು ಭಾರತ ದೇಶಕ್ಕೆ ಗಟ್ಟಿಯಾದ ಸಂವಿಧಾನವನ್ನು ಕೊಡುಗೆಯಾಗಿ ನೀಡಿರುವುದರಿಂದಲೇ ಇಂದು ನಮ್ಮ ದೇಶ ಸುಭದ್ರ ಮತ್ತು ಪ್ರಗತಿಯತ್ತ ಸಾಗುತ್ತಿರುವುದು ಎಂದು ತಿಳಿಸಿದರು.


ದೇಶ ಪ್ರಗತಿಯತ್ತ ಸಾಗುತ್ತಿದ್ದರೂ ನಾವು ಹಲವು ಮಹಾನ್ ಚೇತನಗಳ ತ್ಯಾಗ, ಬಲಿದಾನ, ಹೋರಾಟದಿಂದ ಬಂದ ಸ್ವಾತಂತ್ರ್ಯ, ಸಂವಿಧಾನವನ್ನು ಮರೆಯುತ್ತಿದ್ದೇವೆ. ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚಾಗುತ್ತಿವೆ. ವಿದ್ಯಾರ್ಥಿಗಳು ಮತ್ತು ಯುವ ಸಮೂಹ ಜಾಗೃತರಾಗಿ, ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನಕ್ಕಾಗಿ ದುಡಿದ ಡಾ.ಬಿ.ಆರ್. ಅಂಬೇಡ್ಕರ್ ರಂತಹ ಹಲವು ಮಹನೀಯರನ್ನು ಸ್ಮರಿಸಿಕೊಂಡು ಅವರ ತತ್ವ, ಆದರ್ಶ,ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಸಂವಿಧಾನದ ಆಶಯಗಳ ಈಡೇರಿಕೆಗೆ ಮತ್ತು ದೇಶದ ಏಕತೆ ಮತ್ತು ಸಧೃಢ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.


ತಾಲ್ಲೂಕು ತಹಶೀಲ್ದಾರ್ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಆದ ಮಹೇಂದ್ರ ಎ.ಹೆಚ್. ಅವರು ಧ್ವಜಾರೋಹಣ ವನ್ನು ನೆರವೇರಿಸಿ, ವಿವಿಧ ಶಾಲಾ ವಿದ್ಯಾರ್ಥಿಗಳ ತಂಡದಿಂದ ಧ್ವಜ ವಂದನೆಯನ್ನು ಸ್ವೀಕರಿಸಿ,  ಜನತೆಗೆ ೭೫ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.


ವೇದಿಕೆಯಲ್ಲಿ ನಗರಸಭಾ ಉಪಾಧ್ಯಕ್ಷೆ ನಿಗಾರ್ ಬೇಗಂ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬಿ.ಟಿ.ನಾಗೇಶ್,  ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ್, ಡಿವೈಎಸ್.ಪಿ. ಕೆ.ಸಿ.ಗಿರಿ, ಪುರ ವೃತ್ತ ಆರಕ್ಷಕ ನಿರೀಕ್ಷಕಿ ಶೋಭಾ, ನಗರಸಭಾ ಪೌರಾಯುಕ್ತ ಪುಟ್ಟಸ್ವಾಮಿ, ಬಿ.ಇ.ಓ.ಮರೀಗೌಡ, ಸಮಾಜ ಕಲ್ಯಾಣ ಅಧಿಕಾರಿ ಸರೋಜಮ್ಮ, ಎಪಿಎಂಸಿ ಅಧಿಕಾರಿ ಸುನೀಲ್ ಕುಮಾರ್, ಅಕ್ಷರ ದಾಸೋಹ ಅಧಿಕಾರಿ ಸಿದ್ದರಾಜು, ದೈಹಿಕ ಶಿಕ್ಷಣ ಅಧಿಕಾರಿ ಶಿವಣ್ಣ, ಉಪ ತಹಶೀಲ್ದಾರ್ ಸೋಮಶೇಖರ್, ತಾ.ಸ.ನೌ.ಸಂಘದ ಅಧ್ಯಕ್ಷ ಚಂದ್ರಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಚನ್ನೇಗೌಡ ಸುರೇಶ್, ಆರ್.ಐ.ಶ್ರೀಧರ್, ಕಂದಾಯ ಇಲಾಖೆಯ ಜಯರಾಮ್, ಎಸ್.ಐ ಹರೀಶ್, ನಗರಸಭಾ ಸದಸ್ಯರಾದ ವಾಸಿಲ್ ಆಲಿ ಖಾನ್, ಮಥೀನ್, ಅವರು ಸೇರಿದಂತೆ ಮತ್ತು ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.


ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಸಾಧಕರಾದ ಆರ್.ಮಂಜುನಾಥ್ (ಪತ್ರಕರ್ತ), ಸಮಾಜ ಸೇವಕರಾದ ಮುಕುಂದ, ಕೋಟೆ ಸಿದ್ದರಾಮಯ್ಯ, ಸತೀಶ್ (ಕ್ರೀಡಾ ಶಿಕ್ಷಕ), ರಶ್ಮಿ (ಆಶಾ ಕಾರ್ಯಕರ್ತೆ), ನಿರ್ಮಲ(ಬಿಸಿಯೂಟ ಕಾರ್ಯಕರ್ತೆ), ಎಎಸ್‌ಐ ರಾಮಕೃಷ್ಣ, ಅಭಿಷೇಕ್ (ಕ್ರೀಡಾಪಟು), ಶಂಕರಮ್ಮ (ಪೌರಕಾರ್ಮಿಕೆ), ಮೇಘನ ಡಿ. ಹೇಮಾವತಿ (ಕಲಾವಿದರು) ಸುಕನ್ಯ, ಸೌಭಾಗ್ಯ, ಮರಿಸ್ವಾಮಿ (ಪರಿಸರ) ಸೇರಿದಂತೆ ಹಲವು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.


ಸಾರ್ವಜನಿಕ ಶಾಲೆಯ ಉಪ ಪ್ರಾಂಶುಪಾಲ ಸಿ.ಬಿ.ಕುಮಾರ್ ಸ್ವಾಗತಿಸಿದರು. ಶಿಕ್ಷಕ ಸುರೇಶ್ ನಿರೂಪಣೆ ಮಾಡಿದರು. ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.


ಗೋ ರಾ ಶ್ರೀನಿವಾಸ..

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑