Tel: 7676775624 | Mail: info@yellowandred.in

Language: EN KAN

    Follow us :


ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

Posted date: 13 Feb, 2024

Powered by:     Yellow and Red

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊಂಡ ಘಟನೆ ತಾಲ್ಲೂಕಿನ ಭೈರಾಪಟ್ಟಣ ಗ್ರಾಮದಲ್ಲಿ ನಡೆದಿದೆ.


ಐದು ವರ್ಷದೊಳಗಿನ ಮಕ್ಕಳಿಗೆ ಜಿಲ್ಲಾಡಳಿತವು ಲಸಿಕೆ ಹಾಕುತ್ತಿದ್ದು, ಇಂದು 11:00 ಗಂಟೆಯ ಸಂದರ್ಭದಲ್ಲಿ ಭೈರಾಪಟ್ಟಣ ಗ್ರಾಮದ ಮೊಹನ್ ಮತ್ತು ಸ್ಫೂರ್ತಿ ಎಂಬ ದಂಪತಿಗಳು ತಮ್ಮ ಮಗುವನ್ನು ದೊಡ್ಡಮಳೂರು ಗ್ರಾಮದಲ್ಲಿರುವ ಅಂಗನವಾಡಿಗೆ ಲಸಿಕೆ ಹಾಕಿಸಲು ಕರೆತಂದಿದ್ದಾರೆ. ಈ ಸಂದರ್ಭದಲ್ಲಿ ಗೀತಾ ಎಂಬ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯು ಮಗುವಿಗೆ ಲಸಿಕೆ ಹಾಕಿದ್ದಾರೆ.


ನಂತರ ಮಗುವನ್ನು ಕರೆದುಕೊಂಡು ಮನೆಗೆ ತೆರಳಿದ ತಕ್ಷಣವೇ ಮಗು ಒದ್ದಾಡುತ್ತಿರುವುದು ಕಂಡು ಬಂದಿದೆ. ಎಚ್ಚೆತ್ತ ಪೋಷಕರು ನಗರದಲ್ಲಿನ ಪುಣ್ಯ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಷ್ಟರಲ್ಲಿ ಮಗು ಸಾವನ್ನಪ್ಪಿದೆ.


*ಸುದ್ದಿ ಮತ್ತು ಜಾಹಿರಾತಿಗಾಗಿ  ಸಂಪರ್ಕಿಸಿ:ಮೊ. ನಂ: 9742424949*


ಲಸಿಕೆ ಹಾಕಿಸುವ ಮುನ್ನ ಪೋಷಕರು ಮಗು ನಿನ್ನೆ ರಾತ್ರಿ ಹೆಚ್ಚಾಗಿ ಅಳುತ್ತಿತ್ತು ಎಂದು ಹೇಳಿದಾಗ ಸಣ್ಣ ಮಗು ಅಳುತ್ತದೆ. ಲಸಿಕೆಗು ಅದಕ್ಕೂ ಸಂಬಂಧವಿಲ್ಲ ಎಂದು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ತಿಳಿಸಿದ್ದಾರೆ. ಒಮ್ಮೆ ಪರೀಕ್ಷಿಸಿ ನಂತರ ಲಸಿಕೆ ಹಾಕಿ ಎಂದಾಗಲು ಅದೇ ಉತ್ತರ ನೀಡಿದ್ದಾರೆ. ಲಸಿಕೆ ಹಾಕಿದ 15 ರಿಂದ 20 ನಿಮಿಷದೊಳಗೆ ಮಗು ಪ್ರಾಣ ಬಿಟ್ಟಿದೆ. ಇದಕ್ಕೆ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರಾದ ಜಯಕೃಷ್ಣ ದೂರಿದ್ದಾರೆ.


ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ರಾಜು ರವರು  ಮಾತನಾಡಿ ಪೋಷಕರು ಲಸಿಕೆ ಹಾಕಿದ್ದರಿಂದಲೇ ಮಗು ಮೃತ ಪಟ್ಟಿದೆ ಎನ್ನುತ್ತಿದ್ದಾರೆ. ಆದರೆ, ಒಟ್ಟು 18 ಮಕ್ಕಳಿಗೆ ಲಸಿಕೆ ಹಾಕಿದ್ದು, 17 ಮಕ್ಕಳು ಆರೋಗ್ಯವಾಗಿದ್ದಾರೆ. ಈ ಲಸಿಕೆಯನ್ನು ನಾವು ಲ್ಯಾಬ್‍ಗೆ ಕಳುಹಿಸಿ ಪರೀಕ್ಷಿಸುತ್ತೇವೆ. ಪೋಷಕರು ಇಚ್ಛೆ ಪಟ್ಟರೆ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿ ವರದಿಯನ್ನು ತರಿಸಿಕೊಳ್ಳುತ್ತೇವೆ ಎಂದಿದ್ದಾರೆ. ಮುಂದುವರೆದು, ಮಗುವು ಲಸಿಕೆ ಹಾಕಿದ್ದರಿಂದಲೇ ಸಾವನ್ನಪ್ಪಿದೆ ಎಂಬ ತೀರ್ಮಾನವನ್ನು ಸರ್ಕಾರದ ಹಿರಿಯ ಅಧಿಕಾರಿಗಳು ತೆಗೆದುಕೊಳ್ಳಬೇಕಾಗುತ್ತದೆ. ಅವರ ಗಮನಕ್ಕೆ ಈಗಾಗಲೇ ವರದಿ ನೀಡಲಾಗಿದೆ ಎಂದರು. ಮಗು ಮರಣಿಸಿದ ಮನೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. 


ಗೊ. ರಾ. ಶ್ರೀನಿವಾಸ...

ಮೊ. ನಂ.-9845856139

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑