Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣದ ಚಚ್೯ಗಳಲ್ಲಿ ಕ್ರಿಸ್ತನ ಆರಾಧನೆ

Posted date: 25 Dec, 2018

Powered by:     Yellow and Red

ಚನ್ನಪಟ್ಟಣದ ಚಚ್೯ಗಳಲ್ಲಿ ಕ್ರಿಸ್ತನ ಆರಾಧನೆ

ಇಂದು ಡಿಸೆಂಬರ್ ೨೫ ಕ್ರೈಸ್ತ ಭಾಂಧವರಿಗೆ ಎಲ್ಲಿಲ್ಲದ ಸಡಗರ ಸಂಭ್ರಮ, ನಗರದಲ್ಲಿರುವ ಎಲ್ಲಾ ಚಚ್೯ಗಳಲ್ಲಿಯೂ ಕ್ರೈಸ್ತಮತದವರೆಲ್ಲರೂ ಒಗ್ಗೂಡಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಿಹಿಯನ್ನು ಹಂಚಿ ಸಂಭ್ರಮಿಸುವ ಸಮಯವಿದು.


ನಗರದಲ್ಲಿನ ಎಲ್ಲಾ ಚಚ್೯ಗಳು ಇಂದು ಜಗಮಗಿಸುವ ಅಲಂಕಾರದಿಂದ ಕೂಡಿದ್ದು ಬೆಳಿಗ್ಗೆಯಿಂದಲೇ ಪಾದ್ರಿಗಳ ಸಮ್ಮುಖದಲ್ಲಿ ದೇವರ ಆರಾಧನೆಯನ್ನು ಮಾಡಿ ತಮ್ಮ ಸ್ನೇಹಿತರು, ಹಿತೈಷಿಗಳು ಮತ್ತು ಬಂಧುಗಳ ಮನೆಗೆ ತೆರಳಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದರ ಮೂಲಕ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.


ಕ್ರಿಸ್ಮಸ್ ಹಬ್ಬದಲ್ಲಿ ಸ್ಟಾರ್ ನಕ್ಷತ್ರ ರೀತಿಯ ಹೂಗುಚ್ಚಗಳು, ಎಲೆಕ್ಟ್ರಾನಿಕ್ ವಸ್ತುಗಳ ಮೂಲಕ ಮನೆಯನ್ನು ಸಿಂಗರಿಸಿ, ವಿಶೇಷವಾದ ಕಲ್ ಕಲಾ, ರವೆ ಉಂಡೆ, ಕರ್ಜಿಕಾಯಿ ಇನ್ನಿತರ ಸಿಹಿ ಖಾದ್ಯಗಳನ್ನು ಬಂಧುಬಾಂಧವರ ಮನೆಗೆ ಕೊಟ್ಟು ಊಟಕ್ಕೆ ಆಹ್ವಾನಿಸುವ ಮೂಲಕ ವಿಜೃಂಭಣೆಯಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.


ನಿನ್ನೆ ರಾತ್ರಿಯೇ ಕೆಲವು ಚಚ್೯ಗಳಲ್ಲಿ ಹಬ್ಬದ ಸಡಗರವನ್ನಾಚರಿಸಲು ಕರೆ ಕೊಟ್ಟಿದ್ದು ಆ ಸಮಯದಿಂದಲ್ಲೇ ಆರಾಧನೆ ಮುಂದುವರೆದು ಇಂದು ರಾತ್ರಿ ಹನ್ನೊಂದುವರೆ ಗಂಟೆಗೂ ಸಹ  ರೆವರೆಂಡ್ ಜೂಲಿಯನ್ ಮತ್ತು ಫಾದರ್ ಬಾಲರಾಜ್ ರವರ ನೇತೃತ್ವದಲ್ಲಿ ವಿಶೇಷ ಆರಾಧನೆ ನಡೆಯಲಿದೆ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑