Tel: 7676775624 | Mail: info@yellowandred.in

Language: EN KAN

    Follow us :


ಮೊದಲು ನನ್ನ ಮನೆಯ ದೀಪ ಬೆಳಗಬೇಕು, ಆ ದೀಪದಿಂದ ಬೇರೆಯವರ ಮನೆ ಬೆಳಗಬೇಕು ಚಕ್ಕೆರೆ ಶಿವಶಂಕರ್

Posted date: 28 Dec, 2018

Powered by:     Yellow and Red

ಮೊದಲು ನನ್ನ ಮನೆಯ ದೀಪ ಬೆಳಗಬೇಕು, ಆ ದೀಪದಿಂದ ಬೇರೆಯವರ ಮನೆ ಬೆಳಗಬೇಕು ಚಕ್ಕೆರೆ ಶಿವಶಂಕರ್

ಮೊದಲು ನಮ್ಮ ಮನೆಯ ದೀಪ ಉರಿದು ಬೆಳಗಬೇಕು, ಆ ದೀಪದಿಂದ ಬೇರೆಯವರ ಮನೆಯ ದೀಪ ಬೆಳಗಬೇಕೆ ವಿನಹ ನಮ್ಮ ಮನೆಯನ್ನೇ ಉರಿಸಿಕೊಂಡು ಬೇರೆಯವರ ಮನೆಯ ದೀಪ ಬೆಳಗಲು ಬಿಡಬಾರದು ಎಂದು ಮಾರ್ಮಿಕವಾಗಿ ನುಡಿದರು, ಅದಕ್ಕೆ ವಿವರಣೆ ನೀಡಿದ ಶಿವಶಂಕರ್ ರವರು ಮೊದಲು ನನ್ನೂರಿನ  ಸಾಧಕರನ್ನು ಮೊದಲು ನೆನೆದು ರಾಜ್ಯ, ರಾಷ್ಟ್ರದ ಸಾಧಕರನ್ನು ನೆನೆಯಬೇಕು ಎಂದರು.


ಅವರು ತಾಲ್ಲೂಕಿನ ಚಕ್ಕೆರೆ ಗ್ರಾಮದ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕ ಏರ್ಪಡಿಸಿದ್ದ ಕುವೆಂಪು ಜ್ಞಾನ ಪೀಠ ಪಡೆದ ಸುವರ್ಣ ವರ್ಷ ಮತ್ತು ದೇಜಗೌ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕುವೆಂಪು ಮತ್ತು ದೇಜಗೌ ಅವರ ಅವಿನಾಭಾವ ಸಂಬಂಧ ಕುರಿತು ಉಪನ್ಯಾಸ ನೀಡಿದರು.


ಕುವೆಂಪು ಮತ್ತು ದೇಜಗೌ ರವರ ಸಂಬಂದ ಗುರುಶಿಷ್ಯರ ಸಂಬಂಧವನ್ನು ಮೀರಿಸಿದ್ದಾಗಿತ್ತು, ಕುವೆಂಪುರವರಿಗೆ ಹಲವಾರು ಶಿಷ್ಯರಿದ್ದರೂ ಸಹ ದೇಜಗೌ ರವರು ನಿಕಟ ಸಂಬಂಧವನ್ನು ಹೊಂದಿದ್ದರು, ಕನ್ನಡದ ಬಗ್ಗೆ ಇಬ್ಬರಿಗೂ ಅಪಾರ ಕಾಳಜಿ ಇದ್ದು ಕುವೆಂಪು ರವರು ತಮ್ಮ ಕವನಗಳ ಮೂಲಕ ಕನ್ನಡ ಕಟ್ಟಿದರೆ ದೇಜಗೌ ರವರು ಧರಣಿ, ಸತ್ಯಾಗ್ರಹ ಚಳವಳಿಗಳ ಮೂಲಕ ಕನ್ನಡ ಕಟ್ಡಿದರು ಎಂದು ತಿಳಿಸಿದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಸೀತಾರಾಮುರವರು 

ಇಂದಿನ ಪೋಷಕರು ತಮ್ಮ ಮಕ್ಕಳನ್ನು ಉದ್ಯೋಗದ ದೃಷ್ಟಿಯಿಂದ ಓದಿಸುವುದನ್ನು ಬಿಟ್ಟು ಅವರೊಬ್ಬ ಸತ್ಪ್ರಜೆಯನ್ನಾಗಿ ಮಾಡಲು ದೇಶಾಭಿಮಾನಿಯಾಗಿ ಬೆಳೆಸಲು ಪ್ರೇರೇಪಿಸಬೇಕು, ಕೇವಲ ಡಾಕ್ಟರ್, ಇಂಜಿನಿಯರ್ ರಷ್ಟೇ ಬದುಕುವುದಿಲ್ಲ, ವ್ಯವಸಾಯ ಮಾಡುವವನು ಬದುಕುತ್ತಾನೆ, ಅನಕ್ಷರಸ್ಥ ಕಲಾವಿದರೂ ಸಾಹಿತಿಗಳು ಸಹ ರಾಷ್ಟ್ರದಾದ್ಯಂತ ಹೆಸರು ಹಣಗಳಿಸಲು ಸಾಧ್ಯ ಮಕ್ಕಳು ಸಹ ಈ ನಿಟ್ಟಿನಲ್ಲಿ ಮಕ್ಕಳು ಸಾಗಬೇಕು ಎಂದರು.


ಜಾನಪದ ಲೋಕದ ಆಡಳಿತಾಧಿಕಾರಿ ಕುರುವ ಬಸವರಾಜ್ ರವರು ಜಾನಪದ ಲೋಕ ಸಾಗಿಬಂದ ದಾರಿ ಬಗ್ಗೆ ತಿಳಿಸಿ ಕೊಡುತ್ತಾ ಹೆಚ್ ಎಲ್ ನಾಗೇಗೌಡರು ಜಿಲ್ಲಾಧಿಕಾರಿಯಾಗಿದ್ದರು ಸಹ ಜನಪದದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು, ಅವರು ೧೯೭೯ ರಲ್ಲಿ ಜಾನಪದ ಪರಿಷತ್ತು ಕಟ್ಟಲು ಆರಂಭಗೊಂಡರೂ ಸಹ ಹಲವಾರು ಅಡೆತಡೆಗಳ ನಡುವೆ ೧೯೮೯ ರಲ್ಲಿ ಜಾಗ ದೊರೆತು ೧೯೯೪ ರಲ್ಲಿ ಉದ್ಘಾಟನೆಗೊಂಡಿತು, ನಾಗೇಗೌಡರ ಜೊತೆಗೆ ಬೆನ್ನೆಲುಬಾಗಿ ನಿಂತವರು ನಾಡೋಜ ಜಿ ನಾರಾಯಣರವರು, ಇಂದು ಜಾನಪದ ಲೋಕದಲ್ಲಿ ಹಲವು ಕಲಾವಿದರ ಪ್ರತಿರೂಪಗಳು, ಜನರಿಂದ ಸಂಗ್ರಹ ಮಾಡಿದ ಪುರಾತನ ಸಾಮಾಗ್ರಿಗಳು, ಪುಸ್ತಕಗಳು, ಧ್ವನಿಮುದ್ರಣಗಳು ಸೇರ್ಪಡೆಯಾಗಿವೆ, ಮುಂದಿನ ತಲೆಮಾರಿಗೆ ಈ ಎಲ್ಲಾ ಉಪಕರಣಗಳನ್ನು ಹೆಚ್ ಎಲ್ ನಾಗೇಗೌಡರು ಉಳಿಸಿಹೋಗಿದ್ದಾರೆ ಎಂದು ಸ್ಮರಿಸಿದರು.


ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷರಾದ ಸು ತ ರಾಮೇಗೌಡರು ಅಧ್ಯಕ್ಷೀಯ ಭಾಷಣ ಮಾಡಿದರೆ ಕಾರ್ಯದರ್ಶಿ ವಸಂತಕುಮಾರ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜು ಪ್ರಾಂಶುಪಾಲರಾದ ರಶ್ಮಿ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣೇಗೌಡರು ತಮ್ಮ ಶಾಲೆಯ ಬಗ್ಗೆ ಮಾತನಾಡಿದರು. ಮುಖ್ಯ ಶಿಕ್ಷಕ ಪಾರ್ಥ ರವರು ರಂಗಗೀತೆ ಹಾಡಿ ರಂಜಿಸಿದರು. ಇದೇ ವೇಳೆ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಜಾನಪದ ನೃತ್ಯಗಳ ಪ್ರದರ್ಶನ ನೀಡಿದರು, ಸ್ಥಳೀಯ ಜಾನಪದ ಕಲಾವಿದರಾದ ಐದು ಮಂದಿ ಮಹಿಳೆಯರಿಗೆ ವನಿತಾ ಸ್ಯಾರಿ ಸೆಲೆಕ್ಷನ್ ನ ವಿಜಯಕುಮಾರ್ ಗುಲೇಚಾ ದಂಪತಿಗಳ ಸಹಕಾರದೊಂದಿಗೆ ಸೀರೆ ಕುಪ್ಪಸ ನೀಡಿ ಸನ್ಮಾನಿಸಲಾಯಿತು.


ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಅಧ್ಯಕ್ಷರಾದ ಗೋ ರಾ ಶ್ರೀನಿವಾಸ ಸ್ವಾಗತಿಸಿದರೆ ಶಿಕ್ಷಕ ಸಿ ಪಿ ಶ್ರೀನಿವಾಸ ವಂದನಾರ್ಪಣೆ ಮಾಡಿದರು, ಯೋಗೇಶ್ ಚಕ್ಕೆರೆ ನಿರೂಪಿಸಿದರು.

ವೇದಿಕೆಯಲ್ಲಿ ಮಾಜಿ ಪ್ರಧಾನರಾದ ರಾಜು ರವರು, ಎಸ್ ಡಿ ಎಂ ಸಿ ಸದಸ್ಯರು, ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ಅಧ್ಯಕ್ಷ ಮತ್ತು ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಗ್ರಾಮದ ಮುಖಂಡರು ಶಾಲಾ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಹಾಜರಿದ್ದರು, ಕನ್ನಡ ಸಂಸ್ಕ್ರತಿ ಇಲಾಖೆಯ ವತಿಯಿಂದ ಡೊಳ್ಳುಕುಣಿತ, ಪೂಜಾಕುಣಿತ ಏರ್ಪಡಿಸಲಾಗಿತ್ತು.



ಗೋ ರಾ ಶ್ರೀನಿವಾಸ...

ಮೊ:9845856139.



ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑