Tel: 7676775624 | Mail: info@yellowandred.in

Language: EN KAN

    Follow us :


ಮಧುಕರ್ ಶೆಟ್ಟಿ ಸಾವು ತನಿಖೆಗೆ ಒತ್ತಾಯ

Posted date: 03 Jan, 2019

Powered by:     Yellow and Red

ಮಧುಕರ್ ಶೆಟ್ಟಿ ಸಾವು ತನಿಖೆಗೆ ಒತ್ತಾಯ

ದಕ್ಷ ಪ್ರಾಮಾಣಿಕ ಐಪಿಎಸ್ ಅಧಿಕಾರಿ ಡಾ ಮಧುಕರ್ ಶೆಟ್ಟಿಯವರ ಸಾವು ದೇಶಕ್ಕೆ ತುಂಬಲಾರದ ನಷ್ಟವಾಗಿದೆ, ಅವರ ದೇಹ ಇಂತಹ ಖಾಯಿಲೆಗೆ ಸಾಯುವಂತದ್ದಲ್ಲ, ಸಮಾಜದ ಒಳಿತಿಗಾಗಿ ಸದಾ ಮಿಡಿಯುವ ಹೃದಯವಂತ ಹೆಚ್೧ಎನ್೧ ಖಾಯಿಲೆಗೆ ಮರಣಹೊಂದುತ್ತಾರೆಂದರೆ ಅವರನ್ನು ಕಂಡ ಸಾರ್ವಜನಿಕರು ನಂಬಲು ಸಾಧ್ಯವಿಲ್ಲ, ಅವರ ಸಾವು ಖಾಯಿಲೆಯ ಸೋಂಕಿನಿಂದಾದ ಸಾವೋ ? ಅಥವಾ ಸಂಚು ಮಾಡಿ ಯಾರಾದರೂ ಕೊಲೆಗೈದಿದ್ದಾರೋ ? ಎಂದು ಸಾರ್ವಜನಿಕರಿಗೆ ತಿಳಿಯಬೇಕೆಂದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಹಿರಿಯ ರೈತಮುಖಂಡ ಸಿ ಪುಟ್ಟಸ್ವಾಮಿ ಒತ್ತಾಯಿಸಿದರು.


ಅವರು ರಾಮನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.


ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಸಹ ಅವರ ಸಾವಿನ ಬಗ್ಗೆ ಅನುಮಾನವಿದೆ ಎಂದು ಹೇಳಿಕೆ ನೀಡಿದ್ದಾರೆ, ಎಂ ಬಿ ಪಾಟೀಲ್ ರವರು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದರೆ ತನಿಖೆ ಮಾಡಿಸಲು ಸಿದ್ಧ ಎಂದು ಹೇಳಿದ್ದಾರೆ, ಆದರೆ ಗೃಹ ಸಚಿವರು ಉದಾಸೀನದ ಹೇಳಿಕೆ ನೀಡಿರುವುದು ಸರಿಯಲ್ಲ, ಇವರ ಸಾವಿನ ಬಗ್ಗೆ ನಮಗೂ ಅನುಮಾನ ಇರುವುದರಿಂದ ಸಾಕ್ಷ್ಯ ನಾಶವಾಗುವ ಮೊದಲು ತನಿಖೆಗೆ ಒಳಪಡಿಸಬೇಕು ಎಂದರು.


ಮಧುಕರ್ ಶೆಟ್ಟಿಯವರು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿದ್ದವರು, ಅವರಿಗೆ ಹೆಚ್೧ಎನ್೧ ಬಂದಿದೆ ಎನ್ನುವುದೇ ಅನುಮಾನ, ಸಾವಿನ ನಂತರ ಅವರ ಬಾಯಿಯ ಬಲಭಾಗದಲ್ಲಿ ಮತ್ತು ಮೂಗಿನಲ್ಲಿ ರಕ್ತದ ಕಲೆಗಳು ಕಂಡಿವೆ, ವೈದ್ಯರು ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ ನೀಡುವ ಬದಲು ಹೆಚ್೧ಎನ್೧ ಎಂದು ತಪ್ಪು ಗ್ರಹಿಕೆ ಮಾಡಿ ಚಿಕಿತ್ಸೆ ನೀಡಿದ್ದಾರೆ ಎಂದು ಕೇಳಿ ಬರುತ್ತಿದೆ ಎಂದರು.


ರಾಷ್ಟ್ರ ಕಂಡ ದಾರ್ಶನಿಕ ಡಾ ರಾಮ ಮನೋಹರ ಲೋಹಿಯಾ ರ ಸಾವಿಗೂ ಮಧುಕರ್ ಶೆಟ್ಟಿಯವರ ಸಾವಿಗೂ ಸಾಮ್ಯತೆ ಕಂಡುಬರುತ್ತಿದೆ, ಲೋಹಿಯಾ ರವರಿಗೂ ತಪ್ಪು ಗ್ರಹಿಕೆ ಯ ಚಿಕಿತ್ಸೆಯಿಂದಾಗಿಯೇ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಲಾಗಿದೆ, ಆದ್ದರಿಂದ ತಜ್ಞ ವೈದ್ಯರು ಮತ್ತು ಹಿರಿಯ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.


ಸಮಾಜಮುಖಿ ಚಿಂತಕ ಗೋ ರಾ ಶ್ರೀನಿವಾಸ ಮಾತನಾಡಿ ರಾಷ್ಟ್ರದಾದ್ಯಂತ ಅನೇಕ ರಾಜ್ಯಗಳಲ್ಲಿ ದಕ್ಷ ಪ್ರಾಮಾಣಿಕ ಅಧಿಕಾರಿಗಳು ಎನಿಸಿಕೊಂಡಿರುವವರು ಅಸುನೀಗುತ್ತಿದ್ದಾರೆ.


ಇತ್ತೀಚೆಗೆ ಅಗಲಿದ ಐಪಿಎಸ್ ಡಾ ಮಧುಕರ್ ಶೆಟ್ಟಿ. ದಕ್ಷ, ಪ್ರಾಮಾಣಿಕ, ಸರಳ ಅಧಿಕಾರಿ ಎಂದೇ ಪ್ರಖ್ಯಾತರಾದ ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿ ಜನರಿಗಾಗಿ ತನ್ನ ಬದುಕನ್ನೇ ಮೀಸಲಿಟ್ಟಿದ್ದ ಮಧುಕರ್ ಶೆಟ್ಟಿಯವರು ಖಾಯಿಲೆಗೆ ಬಲಿಯಾದರು ಎಂದರೆ ನಂಬಬಹುದೇ ?


ಹೆಚ್೧ ಎನ್೧ ಖಾಯಿಲೆ ಮಾರಣಾಂತಿಕ ಖಾಆಸ್ಪತ್ರೆ ಸೇರಿದ್ದ ಅವರಿಗೆ ಮುಂದುವರಿದ ದೇಶಗಳ ಸೂಪರ್ ಸ್ಪೆಸಾಲಿಟಿ ಆಸ್ಪತ್ರೆಗೆ ಏಕೆ ಕರೆದೊಯ್ಯಲಿಲ್ಲ, ರಾಜಕಾರಣಿ, ಸಿನೆಮಾ ನಟನಿಗಿಂತ ಪ್ರಾಮಾಣಿಕ ಅಧಿಕಾರಿ ಸರ್ಕಾರಕ್ಕೆ ನಿಕೃಷ್ಟನೇ ?


ನೆರೆಯ ತೆಲಂಗಾಣ ರಾಜ್ಯದ ಆಸ್ಪತ್ರೆಯಲ್ಲಿದ್ದ ಅವರನ್ನು ರಾಜ್ಯ ಸರ್ಕಾರ ಸೂಕ್ತ ಶೀಘ್ರ ತೀರ್ಮಾನ ತೆಗೆದುಕೊಳ್ಳದೆ 

ಕಾಲಹರಣ ಮಾಡಿತು.


ಕೇಂದ್ರ ಸರ್ಕಾರವು ಯಾಕೆ ಮಧ್ಯ ಪ್ರವೇಶಿಸದೆ ಉನ್ನತ ಆಸ್ಪತ್ರೆ ಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಮುಂದಾಗಲಿಲ್ಲ, ಮಧುಕರ್ ಶೆಟ್ಟಿಯವರ ಬತ್ತಳಿಕೆಯಲ್ಲಿ ಅವರ ಪಾಲು ಇತ್ತೆ ?


ಎಂಬ ಅನುಮಾನ ಸಾರ್ವಜನಿಕರಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.


ಸಾಕ್ಷಿ ಮತ್ತು ಆಧಾರಗಳನ್ನು ವ್ಯಾಘ್ರರು ನಾಶಪಡಿಸುವ ಮುನ್ನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಸಿಬಿಐ ಗೆ ವಹಿಸಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ನಂಜಪ್ಪ ಹಾಜರಿದ್ದರು.




ಗೋ ರಾ ಶ್ರೀನಿವಾಸ...


ಮೊ:9845856139..

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑