Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣದ ಜನತೆ ಅದೃಷ್ಟವಂತರು ಎಂದು ಹೇಳಿ ಪ್ರಚಾರ ಆರಂಭಿಸಿದ ಮೈತ್ರಿ ಅಭ್ಯರ್ಥಿ

Posted date: 06 Apr, 2019

Powered by:     Yellow and Red

ಚನ್ನಪಟ್ಟಣದ ಜನತೆ ಅದೃಷ್ಟವಂತರು ಎಂದು ಹೇಳಿ ಪ್ರಚಾರ ಆರಂಭಿಸಿದ ಮೈತ್ರಿ ಅಭ್ಯರ್ಥಿ

ಚನ್ನಪಟ್ಟಣದ ಜನತೆ ಬಹಳ ಅದೃಷ್ಟವಂತರು ನೀವು ಕೇವಲ ಒಬ್ಬ ಶಾಸಕನನ್ನು ಮಾತ್ರ ಹೊಂದಿಲ್ಲ ನಾಡಿನ ಮುಖ್ಯಮಂತ್ರಿ ಯನ್ನೇ ಪಡೆದಿದ್ದೀರಿ, ಅದಕ್ಕಾಗಿಯೇ ಸಾವಿರಾರು ಕೋಟಿ ಅನುದಾನವನ್ನು ಸಹ ಚನ್ನಪಟ್ಟಣ ತಾಲ್ಲೂಕಿನ ಅಭಿವೃದ್ಧಿಗಾಗಿ ಪಡೆದುಕೊಂಡಿದ್ದೀರಿ ಎಂದು ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ತಮ್ಮ ಪ್ರಚಾರ ಭಾಷಣದಲ್ಲಿ ಹೇಳಿದರು.

ಅವರು ಲೋಕಸಭಾ ಚುನಾವಣಾ ಬೆಂಗಳೂರು ಗ್ರಾಮಾಂತರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಿ ಕೆ ಸುರೇಶ್ ರವರ ಪರ ಹೊಂಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತಯಾಚನೆ ಮಾಡುವ ಸಂದರ್ಭದಲ್ಲಿ ನೆರೆದಿದ್ದ ಮತದಾರರನ್ನು ಕುರಿತು ಮಾತನಾಡಿದರು.


ಇಪ್ಪತ್ತು ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಮಾಡಲಾಗುತ್ತಿದೆ, ರಸ್ತೆ, ಚರಂಡಿ, ಕುಡಿಯುವ ನೀರು ಹೀಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ, ಈ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದಬೇಕೆಂದರೆ ನಮ್ಮ ಮೈತ್ರಿ ಅಭ್ಯರ್ಥಿ ಡಿ ಕೆ ಸುರೇಶ್ ರವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.


ಅನಿತಾ ಕುಮಾರಸ್ವಾಮಿ ಯವರ ಮಾತನ್ನೇ ಪುಷ್ಟೀಕರಿಸಿದ ಮೈತ್ರಿ ಅಭ್ಯರ್ಥಿ ಡಿ ಕೆ ಸುರೇಶ್ ಚನ್ನಪಟ್ಟಣದ ಜನತೆ ನಿಜಕ್ಕೂ ಅದೃಷ್ಟವಂತರೇ ! ನಾಡಿನ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಯವರನ್ನು ಆರಿಸಿ ಕಳುಹಿಸಿದ್ದೀರಿ, ನೀವುಗಳು ಯೋಗವಂತರು ಎಂದರು.


ಚನ್ನಪಟ್ಟಣವೂ ಸೇರಿದಂತೆ ರಾಮನಗರ ಜಿಲ್ಲೆಗೆ ೧,೮೦೦ ಕೋಟಿ ಹಣ ಬಿಡುಗಡೆ ಮಾಡಲಾಗಿದೆ, ೧,೦೦೦ ಕೋಟಿ ಹಣವನ್ನು ಮೂಲಭೂತ ಸೌಕರ್ಯಗಳಿಗಾಗಿ ನೀಡಲಾಗಿದೆ, ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಚಾಲನೆಯಲ್ಲಿವೆ, ನಿರ್ಗತಿಕರಿಗೆ ಮನೆ ಮಂಜೂರು ಮಾಡಲಾಗಿದೆ, ಡಿ ಕೆ ಶಿವಕುಮಾರ್ ರವರು ಎಲ್ಲಾ ರೈತರಿಗೆ ಉಚಿತ ಟ್ರಾನ್ಸ್ ಫಾರ್ಮರ್ ನೀಡಿದ್ದಾರೆ, ಸತ್ತೇಗಾಲದಿಂದ ಚನ್ನಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಈಗಾಗಲೇ ಚಾಲನೆ ಪಡೆದುಕೊಂಡಿದೆ ಎಂದರು.


ಬಿಜೆಪಿ ಕೇವಲ ಓಟಿಗಾಗಿ ಮಾತ್ರ ಬರುತ್ತಾರೆ, ಅವರಿಂದ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ, ರೈತರ ಸಾಲಮನ್ನಾ ಮಾಡಿಲ್ಲಾ, ಅದೇ ಕುಮಾರಸ್ವಾಮಿ ಯವರು ನಾಲ್ಕೂವರೆ ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ.


ಇಲ್ಯಾರೋ ಸರ್ಕಾರ ಬಿದ್ದೋಗುತ್ತೆ, ನಾನು ಮಂತ್ರಿ ಆಗ್ತಿನಿ ಅಂತ ಬೊಬ್ಬೆ ಹಾಕ್ತಿದ್ದಾರೆ ಅವರೇನು ಆಗಲ್ಲ, ಅವರ ಮಾತಿಗೆ ಮರುಳಾಗಬೇಡಿ ಎಂದು ಯೋಗೇಶ್ವರ್ ಹೆಸರು ಹೇಳದೆ ಟಾಂಗ್ ನೀಡಿದರು.


ವಂದಾರಗುಪ್ಪೆ ಗ್ರಾಮ ಪಂಚಾಯತಿ ಯಿಂದ ಪ್ರಾರಂಭವಾದ ಪ್ರಚಾರವು ಹೊಂಗನೂರು, ಕೋಡಂಬಳ್ಳಿ, ಸಿಂಗರಾಜಪುರ, ಇಗ್ಗಲೂರು ಪಂಚಾಯತಿ ಮುಂತಾದ ಕಡೆ ಪ್ರಚಾರ ಮಾಡುವುದಾಗಿ ತಿಳಿದುಬಂದಿದೆ.


ಪ್ರಚಾರದಲ್ಲಿ ಚಲನಚಿತ್ರ ನಟಿ ಅಭಿನಯ, ಮಾಜಿ ಶಾಸಕ ಅಶ್ವಥ್, ರಾಮನಗರ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಸಿಂ ಲಿಂ ನಾಗರಾಜು, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ವೀಣಾಕುಮಾರಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಬಮೂಲ್ ನಿರ್ದೇಶಕ ಲಿಂಗೇಶಕುಮಾರ್, ಹಾಪ್ ಕಾಮ್ಸ್ ನಿರ್ದೇಶಕ ರಂಗನಾಥ, ವಕೀಲ ಹನುಮಂತು ಹಾಗೂ ಸ್ಥಳೀಯ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಪ್ರಚಾರದಲ್ಲಿ ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑