Tel: 7676775624 | Mail: info@yellowandred.in

Language: EN KAN

    Follow us :


ಗ್ರಾಮೀಣ ಸಮಸ್ಯೆಗಳಿಗೆ ಸ್ಪಂದಿಸದ ಪಕ್ಷಗಳನ್ನು ತಿರಸ್ಕರಿಸಲು ರಾಮನಗರ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಕರೆ

Posted date: 08 Apr, 2019

Powered by:     Yellow and Red

ಗ್ರಾಮೀಣ ಸಮಸ್ಯೆಗಳಿಗೆ ಸ್ಪಂದಿಸದ ಪಕ್ಷಗಳನ್ನು ತಿರಸ್ಕರಿಸಲು ರಾಮನಗರ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಕರೆ

ಚನ್ನಪಟ್ಟಣ.ಏ೦೮: ಇಂದು ಇಲ್ಲಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಮನಗರ ಜಿಲ್ಲಾ ಚನ್ನಪಟ್ಟಣ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಕರೆದಿದ್ದ ರಾಜ್ಯ ಉಪಾಧ್ಯಕ್ಷ ಎಂ.ರಾಮು, ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ಹಾಗೂ ಕಾರ್ಯಾಧ್ಯಕ್ಷರಾದ ಡಾ. ಚೀಲೂರು ಮುನಿರಾಜು ಅವರು ತಮ್ಮ ಅನಿಸಿಕೆಗಳನ್ನು ತೆರೆದಿಟ್ಟರು.


ಚುನಾವಣೆಗಳು ನಡೆಯ ಬೇಕಾದದ್ದು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಪರಸ್ಪರ ವ್ಯಕ್ತಿಗತ ಆರೋಪಗಳು, ಭಾವನಾತ್ಮಕ ವಿಚಾರಗಳು ಹಾಗೂ ಇತರ ಅನಗತ್ಯ ಚರ್ಚೆಗಳನ್ನು ನಿಲ್ಲಿಸಿ ನಾಡಿನ ರೈತರ ಮತ್ತು ಗ್ರಾಮೀಣ ಭಾಗದ ಸಂಕಷ್ಟದ ಪರಿಹಾರದ ಕುರಿತು ಚರ್ಚೆ ಆಗಲಿ ಎಂದು ಅವರು ಒತ್ತಾಯಿಸಿದರು.


ಗ್ರಾಮೀಣ ಅಜೆಂಡಾಗಳಿಗೆ ಸ್ಪಂದಿಸದ ಪಕ್ಷಗಳನ್ನು ದೇಶದ ಜನರು ತಿರಸ್ಕರಿಸ ಬೇಕು. ಸಂಸತಿನಲ್ಲಿ ಮಂಡನೆ ಆಗಿರುವ ಸಾಲ ಮುಕ್ತಿ ಕಾಯ್ದೆಯನ್ನು ಸಂಪೂರ್ಣವಾಗಿ ಒಪ್ಪಿ ಕೊಂಡು, ಜಾರಿಗೆ ತರುತ್ತೀರೋ ಇಲ್ಲವೋ ಎಂಬುದನ್ನು ಎಲ್ಲಾ ರಾಜಕೀಯ ಪಕ್ಷಗಳು ಸ್ಪಷ್ಟಪಡಿಸಬೇಕು.

ಒಂದು ವೇಳೆ ಅದರಲ್ಲಿ ತಿದ್ದು ಪಡಿಗಳನ್ನು ತರುವುದಾದರೆ ಯಾವ ಭಾಗಗಳಿಗೆ ಏಕೆ ತಿದ್ದು ಪಡಿಯನ್ನು ತರುತ್ತೇವೆ ಎಂಬುದನ್ನು ಖಚಿತ ವಿವರಣೆ ಸಮೇತ ಘೋಷಿಸಬೇಕು ಎಂದು ಆಗ್ರಹಿಸಿದರು.


ರಾಷ್ಟ್ರೀಯ ರೈತ ಆಯೋಗದ ಶಿಫಾರಸಿನಂತೆ ದೇಶದ ಕೃಷಿ ಉತ್ಪನ್ನಗಳಿಗೆ ಸಿ.೨ ಪ್ಲಸ್ ೫೦% ಉತ್ಪಾದನ ವೆಚ್ಚದ ಮೇಲೆ ಶೇ೫೦ರ ಲಾಭ ಬೆಲೆಯನ್ನು ಖಾತರಿ ಮಾಡಲು ಸಂಸತ್ತಿನಲ್ಲಿ ಮಂಡನೆ ಆಗಿರುವ ಖಾಸಗಿ ಮಸೂದೆಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು,

ಪ್ರತಿಯೊಂದು ಕುಟುಂಬಕ್ಕೂ ಘನತೆಯುತವಾಗಿ ಬದುಕಲು ಬೇಕಾದ ಕನಿಷ್ಠ ಆದಾಯ ಖಾತರಿ ಮಾಡಲು ಬೇಕಾದ ಯೋಜನೆಯನ್ನು ರೂಪಿಸ ಬೇಕು. ಗ್ರಾಮೀಣ ಉದ್ಯೋಗ ಸೃಷ್ಟಿ ಯನ್ನು ಪ್ರೋತ್ಸಾಹಿಸಬೇಕು. ಸಹಕಾರಿ ಮತ್ತು ನೈಸರ್ಗಿಕ ಕೃಷಿಗೆ ಬೆಂಬಲವಾಗಿ ವಿಶೇಷ ಪ್ಯಾಕೇಜ್‌ನ್ನು ಘೋಷಿಸಬೇಕು,

ದೇಶದ ಕೃಷಿ ಮತ್ತು ಗ್ರಾಮೀಣ ಭಾಗವನ್ನು ಮತ್ತಷ್ಟು ದುಸ್ಥಿತಿಗೆ ತಳ್ಳುವ ಎಲ್ಲಾ ಅಂತರ್‌ರಾಷ್ಟ್ರೀಯ ಒಪ್ಪಂದ ಗಳನ್ನು ರದ್ದು ಮಾಡಬೇಕು, ಪ್ರಜಾ ಪ್ರಭುತ್ವ ಉಳಿಯಬೇಕು, ವ್ಯಕ್ತಿ ಸ್ವಾತಂತ್ರ್ಯ ಉಳಿಯಬೇಕು, ರಾಹುಲ್ ಅವರ ಪ್ರಣಾಳಿಕೆ ಹಾಗೂ ಮೋದಿ ಮುಂದೆ ಮಾಡುವ ಪ್ರಣಾಳಿಕೆ ಅಭಿವೃದ್ಧಿ ಪರ, ರೈತರ ಪರ, ಬಡವರಪರ,ನಿರುದ್ಯೋಗಿ ಪರ,ವಿದ್ಯಾರ್ಥಿ ಗಳ ಪರ ಇದ್ದರೆ ಅಂತಹವುಗಳಿಗೆ ಬೆಂಬಲ ಇದೆ.


*ಸ್ವತಂತ್ರ ಅಭ್ಯರ್ಥಿಗಳಿಗೆ ಬೆಂಬಲ*


ಮಂಡ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ವ್ಯಕ್ತಪಡಿಸಿದೆ, ಅದೇ ರೀತಿ ರಾಜ್ಯ ಸಮಿತಿಯು ಬೆಂಗಳೂರು ನಗರಕ್ಕೆ ಪ್ರಕಾಶ್‌ರೈ, ಬೆಂಗಳೂರು ಗ್ರಾಮಾಂತರಕ್ಕೆ ಜಾಣಗೆರೆ ರಘು ಅವರಿಗೆ ಬೆಂಬಲ ವ್ಯಕ್ತ ಪಡಿಸಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ರಾಮನಗರ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷರಾದ ತಿಮ್ಮೇಗೌಡ, ಚನ್ನಪಟ್ಟಣದ ಅಧ್ಯಕ್ಷರಾದ ರಾಮೇಗೌಡ, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಉಪಾಧ್ಯಕ್ಷರಾದ ಸಿದ್ದೇಗೌಡ, ಜಿಲ್ಲಾ ಕಾರ್ಯದರ್ಶಿಯಾದ ಪುಟ್ಟಸ್ವಾಮಿ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑