Tel: 7676775624 | Mail: info@yellowandred.in

Language: EN KAN

    Follow us :


ಪುಟ್ಪಾತ್ ಇಲ್ಲದ ರಾಜ್ಯದ ಹೆದ್ದಾರಿ ? ಸಿಎಂ ಕ್ಷೇತ್ರದಲ್ಲಿ ರಸ್ತೆ ಅಗಲೀಕರಣ ಅಸಾಧ್ಯವೇ ?

Posted date: 26 Apr, 2019

Powered by:     Yellow and Red

ಪುಟ್ಪಾತ್ ಇಲ್ಲದ ರಾಜ್ಯದ ಹೆದ್ದಾರಿ ? ಸಿಎಂ ಕ್ಷೇತ್ರದಲ್ಲಿ ರಸ್ತೆ ಅಗಲೀಕರಣ ಅಸಾಧ್ಯವೇ ?

  • Sಮುಖ್ಯಮಂತ್ರಿಗಳ ಕ್ಷೇತ್ರ ಎಂದರೆ ಅಭಿವೃದ್ಧಿಗಳ ಆಗರ ಎಂದೇ ಎಲ್ಲರೂ ಭಾವಿಸುತ್ತಾರೆ, ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ವಲಸೆ ಕ್ಷೇತ್ರವಾದ ಚನ್ನಪಟ್ಟಣ ಯಾವ ಅಭಿವೃದ್ಧಿಯನ್ನು ಕಾಣದೆ ಸಾಮಾನ್ಯ ಶಾಸಕರ ಕ್ಷೇತ್ರಕ್ಕಿಂತಲೂ ಕುಂಠಿತವಾಗಿದೆ.


ಬದಲಾವಣೆಗಾಗಿ ನನ್ನನ್ನು ಚುನಾಯಿಸಿ ಎಂದು ಮನವಿ ಮಾಡಿ ಗೆದ್ದು ನಂತರ ಮುಖ್ಯಮಂತ್ರಿಯಾದರೂ ಸಹ ತಾಲ್ಲೂಕಿನಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ, ಕೆರೆ ತುಂಬಿಸುವುದಾಗಲಿ, ಅಂಬೇಡ್ಕರ್ ಭವನವಾಗಲಿ, ಹೊಸದಾಗಿ ರಸ್ತೆ ನಿರ್ಮಾಣವಾಗಲಿ, ಅಧಿಕಾರಿಗಳು ಚುರುಕಾಗಿ ಕೆಲಸ ಮಾಡುವುದಾಗಲಿ ಯಾವ ಕೆಲಸವೂ ಸಹ ಸಂಪೂರ್ಣವಾಗಲೇ ಇಲ್ಲ.


ಅದೇ ರೀತಿ ಭವಿಷ್ಯದ ರಾಷ್ಟ್ರೀಯ ಹೆದ್ದಾರಿ ಸದ್ಯದ ರಾಜ್ಯ ಹೆದ್ದಾರಿ ಆಗಿರುವ ಸಾತನೂರು ಮತ್ತು ಹಲಗೂರು ರಸ್ತೆಯ ಅಗಲೀಕರಣದ ಬಗ್ಗೆ ಸ್ಪಷ್ಟ ನಿಲುವು ಇಲ್ಲದಿರುವುದು ಹಾಗೂ ಮೊದಲು ಎಷ್ಟು ಅಗಲ ರಸ್ತೆ ಇತ್ತೋ ಅಷ್ಟಕ್ಕೇ ಡಾಂಬರು ಹಾಕಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.


ನಗರಕ್ಕೆ ಹೊಂದಿಕೊಂಡಂತೆ ಹಾಗೂ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಗೆ ಸೇರುವ ಸಾತನೂರು ರಸ್ತೆಯು ಸಾತನೂರು ಸರ್ಕಲ್ ನಿಂದ ಮಹದೇಶ್ವರ ದೇವಸ್ಥಾನ ದ ವರೆಗೆ ಸ್ವಲ್ಪ ಮಟ್ಟಿಗೆ ರಸ್ತೆ ಅಗಲೀಕರಣ ಮಾಡಿ ಇತ್ತೀಚೆಗೆ ರಸ್ತೆ ವಿಭಜಕಗಳನ್ನು ಕಟ್ಟಿದ್ದಾರೆ.

ಆದರೆ ಎರಡೂ ಬದಿಯಲ್ಲಿಯೂ ಸಹ ಪಾದಚಾರಿ ರಸ್ತೆಯನ್ನೇ ಅಗಲೀಕರಿಸಿ ರಸ್ತೆಯನ್ನು ಮಾಡಿ ಪುಟ್ಪಾತ್ ಇಲ್ಲದಂತೆ ಮಾಡಿರುವುದೇ ಇಲಾಖೆಯ ಸಾಧನೆ ?


ಸಾತನೂರು ಸರ್ಕಲ್ ನಿಂದ ಕಾವೇರಿ ನೀರು ಸರಬರಾಜು ಕಛೇರಿಯ ತನಕ ಎರಡೂ ಭಾಗದಲ್ಲಿಯೂ ಅಂಗಡಿ ಮಾಲೀಕರು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರೆ, ಅರಳಿ ಕಟ್ಟೆಯ ದೇವಾಲಯ ಮತ್ತು ಮುಸ್ಲಿಮರ ಸ್ಮಶಾನ ತೆರವುಗೊಳಿಸದೇ ಅಗಲೀಕರಣ ಎಂಬುದು ಕೇವಲ ಸಬೂಬು ಹಾಗೂ ಓಟಿನ ರಾಜಕಾರಣ ಎಂಬುದು ಮನದಟ್ಟಾಗುತ್ತಿದೆ.


ಮುಖ್ಯಮಂತ್ರಿಗಳ ಕ್ಷೇತ್ರವಾಗಿರುವ ಚನ್ನಪಟ್ಟಣ ತಾಲ್ಲೂಕಿನ ಹೆಚ್ಚು ಭಾರವುಳ್ಳ ಈ ರಸ್ತೆಯನ್ನು ದೃಢ ನಿರ್ಧಾರ ಮಾಡಿ ಶೀಘ್ರವಾಗಿ ರಸ್ತೆ ಅಗಲೀಕರಣದ ಜೊತೆಗೆ ಪಾದಚಾರಿ ರಸ್ತೆ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑