Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ನಗರಸಭೆ ಮತ್ತು ಹೆದ್ದಾರಿ ಚರಂಡಿಗಳ ಕಳಪೆ ಕಾಮಗಾರಿ

Posted date: 27 Apr, 2019

Powered by:     Yellow and Red

ಚನ್ನಪಟ್ಟಣ ನಗರಸಭೆ ಮತ್ತು ಹೆದ್ದಾರಿ ಚರಂಡಿಗಳ ಕಳಪೆ ಕಾಮಗಾರಿ

ಚನ್ನಪಟ್ಟಣ ನಗರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಜೊತೆಗೆ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಿ ಪಾದಚಾರಿಗಳು ಓಡಾಡಲು ಅನುಕೂಲ ಮಾಡಿಕೊಟ್ಟಿರುವುದು ಸರಿಯಷ್ಟೇ, ನಗರಸಭೆಯ ವತಿಯಿಂದ ನಡೆದ ಒಳ ಚರಂಡಿ ಕಾಮಗಾರಿಗಳಲ್ಲಿ ರಸ್ತೆ ಮತ್ತು ಚರಂಡಿ (ಬಾಕ್ಸ್) ನಿರ್ಮಾಣವಾದ ನಂತರ ಮೇಲೆ ಸಿಮೆಂಟ್ ಸ್ಲ್ಯಾಬ್ ಗಳನ್ನು ಅಳವಡಿಸಿದ್ದಾರೆ, ಇದು ಕ್ರಮಬದ್ಧವಾಗಿ ಇಲ್ಲ, ಹಾಗೂ ಅಳವಡಿಸಿದ ನಂತರ ಸಿಮೆಂಟ್ ಹಾಕಿ ಮುಚ್ಚದೆ ಇರುವುದರಿಂದ ಪಾದಚಾರಿಗಳು, ಅಂಗಡಿ ಮತ್ತು ನಿವಾಸಿಗಳು ಓಡಾಡಲು ಆಗುತ್ತಿಲ್ಲ ಎಂದು ದೂರಿದ್ದಾರೆ.


ಇನ್ನೂ ಬೆಂಗಳೂರು ಮೈಸೂರು ಹೆದ್ದಾರಿಯ ಎರಡೂ ಬದಿಯಲ್ಲಿ ಸಿಮೆಂಟ್ ಸ್ಲ್ಯಾಬ್ ಅಳವಡಿಸಿ ನಂತರ ರಫ್ ಟೈಲ್ಸ್ ಹಾಕಿದ್ದಾರೆ, ಕೆಲವು ಕಡೆ ಸಣ್ಣ ಮಕ್ಕಳು ಹೋದರೆ ನೇರ ಚರಂಡಿಯೊಳಗೆ ಬೀಳುವುದು ಪಕ್ಕಾ ! ಅಷ್ಟು ದೊಡ್ಡ ದೊಡ್ಡ ಕಂದಕಗಳಿವೆ, ದೊಡ್ಡವರೂ ಸಹ ಓಡಾಡುವ ಸಂದರ್ಭದಲ್ಲಿ ತಪ್ಪಿ ಕಾಲಿಟ್ಟರೇ ಕಾಲು ಮುರಿದು ಆಸ್ಪತ್ರೆ ಸೇರುವುದು ಖಚಿತ.

ಇನ್ನು ಅಳವಡಿಸಿಸಿರುವ ಟೈಲ್ಸ್ ಗಳಿಗೆ ಕಡಿಮೆ ಪ್ರಮಾಣದ ಸಿಮೆಂಟ್ ಬಳಸಿ ಹಾಕಿರುವುದರಿಂದ ಈಗಾಗಲೇ ಎದ್ದು ಹೋಗಿವೆ.


ಚನ್ನಪಟ್ಟಣ ನಗರಸಭೆಯ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆಯು ಜಾರಿಯಲ್ಲಿ ಇಲ್ಲ. ನಗರದ ಯಾವ ಭಾಗಕ್ಕೆ ಹೋದರೂ ಸಹ ಚರಂಡಿಗಳು ಗಬ್ಬೆದ್ದು ನಾರುತ್ತಿವೆ.


ಈ ನಗರಗಳನ್ನು ಒಳಚರಂಡಿ ಯೋಜನೆಗೆ ಒಳಪಡಿಸುವ ಹಿನ್ನೆಲೆಯಲ್ಲಿ ಪ್ರತಿ ಬೀದಿಯಲ್ಲಿಯೂ ಒಳಚರಂಡಿ ಬಾವಿಗಳನ್ನು ತೋಡಿ ಅವುಗಳಿಗೆ ಪೈಪ್‌ಗಳನ್ನು ನಾಲ್ಕಾರು ವರ್ಷಗಳ ಹಿಂದೆಯೇ ಅಳವಡಿಸಲಾಗಿತ್ತು.

ಆದರೆ ಅವುಗಳ ಕಾರ್ಯಗತವು ಮರಿಚೀಕೆಯಾಗಿ ಉಳಿದಿದೆ. ಈಗ ಬಹುಪಾಲು ಎಲ್ಲಕಡೆಯೂ ಕಕ್ಕಸ್ ನೀರನ್ನು ಚರಂಡಿಗೆ ಹರಿಸಲಾಗುತ್ತಿದೆ.

ಈ ರೀತಿಯಲ್ಲಿ ಹರಿಯುವ ಕಕ್ಕಸ್ ನೀರು ಅದರ ಮೇಲೆ ಕಕ್ಕಸ್ ಲೀಲಾಜಾಲವಾಗಿ ತೇಲಾಡುತ್ತಿರುತ್ತದೆ.


ಹೊರಊರಿನಿಂದ ಬಂದವರು ಇದು ಏನು ಇಷ್ಟು ಗಬ್ಬು ವಾಸನೆ ಇಲ್ಲಿನ ನಾಗರೀಕರು ಯಾರಿಗೂ ಮೂಗು ಕೆಲಸ ಮಾಡುತ್ತಿಲ್ಲವೆ ಎಂದು ಪ್ರಶ್ನಿಸುತ್ತಾರೆ.

ಆಗ ಇವರಿಗೆ ಮೂಗಷ್ಟೇ ಕೆಲಸ ಮಾಡುತ್ತಿಲ್ಲ ಎಂದೇನಿಲ್ಲ ಇಲ್ಲಿನಜನರಿಗೆ ಬಾಯಿಯೂ ಇಲ್ಲ, ಕಿವಿಯೂಇಲ್ಲ, ಕಣ್ಣು ಇಲ್ಲವೇ ಇಲ್ಲ ಎಂದು ಹೇಳಿ ತೃಪ್ತಿಪಟ್ಟುಕೊಳ್ಳಬೇಕು.


ಇತ್ತಿಚೆಗೆ ಪೇಟೆ ಬೀದಿ ಎಂ.ಜಿ.ರಸ್ತೆಯ ಪಕ್ಕದ ಚರಂಡಿಗಳಿಗೂ ಸಹ ಸೀಮೆಂಟ್‌ ಸ್ಲಾಬ್‌ನ್ನು ಹಾಕಲಾಗಿದೆ.ಅವುಗಳನ್ನು ಕ್ರಮಬದ್ಧವಾಗಿ ಕೂರಿಸಿ ಸಿಮೇಂಟ್ ಹಾಕುವ ಕೆಲಸ ನಡೆದಿಲ್ಲ. ಒಂದು ರೀತಿಯಲ್ಲಿ ಈ ಸ್ಲಾಬ್‌ಗಳು ಸಂಗೀತ ಸ್ಲಾಬ್‌ಗಳಾಗಿ ಕೆಲಸ ಮಾಡುತ್ತಿವೆ.

ಈ ಸ್ಲಾಬ್‌ಗಳಲ್ಲಿ ಅಲ್ಲಲ್ಲೆ ತೂತುಗಳನ್ನು ಮಾಡಿರುವುದರಿಂದ ಚರಂಡಿಯಲ್ಲಿ ಹರಿಯುವ ಕಕ್ಕಸಿನ ವಾಸನೆ ಗೌವ್ವನೆ ಮೂಗಿಗೆ ಮುತ್ತುತ್ತದೆ.


ಬೇರೆ ಬೇರೆ ಜಾಗದಲ್ಲಿಯೂ ಇದೇಕಥೆ: 

ನಗರದ ಸಣ್ಣಪುಟ್ಟ ಜನವಸತಿ ಪ್ರದೇಶದಲ್ಲಿಯೂ ಸಹ ಚನ್ನಾಗಿ ಇದ್ದ ಚರಂಡಿಗಳನ್ನು ಕಿತ್ತು ಹಾಕಿ ಬಾಕ್ಸ್ ಚರಂಡಿಗಳನ್ನು ಮಾಡಲಾಗಿದೆ. 

ಈ ಚರಂಡಿಗಳಿಗೆ ಮೇಲ್ಗಡೆ ಸ್ಲಾಬ್‌ಗಳನ್ನು ಅಳವಡಿಸಿಲ್ಲ, ಮತ್ತೆ ಕೆಲವು ಕಡೆ ಅಳವಡಿಸಲಾಗಿದೆ. ಅವು ಸುಸಜ್ಜಿತ ವಾಗಿ ಸದ್ದು ಮಾಡದರೀತಿಯಲ್ಲಿ ಮಾಡಿಲ್ಲ. ಏನೋ ಕಾಟಾಚಾರಕ್ಕೆ ಮಾಡಲಾಗಿದೆ. ಅದರಮೇಲ್ಗಡೆ ವಾಹನ ಹರಿದು ಎಲ್ಲಿ ಕಳಚಿಕೊಳ್ಳಬಹುದು ಎಂದು ಕೆಲವುಕಡೆ ಮನೆಯವರೇ ಕಲ್ಲುಗಳು ಹಾಗೂ ಸಿಮೆಂಟ್ ಇಟ್ಟಿಗೆಗಳನ್ನು ಇಟ್ಟು ಆ ಭಾಗದಲ್ಲಿ ವಾಹನಗಳು ಓಡಾಡದ ರೀತಿಯಲ್ಲಿ ಮಾಡಿಕೊಂಡಿದ್ದಾರೆ. ಮೊದಲೇ ಕಿರಿದಾಗಿರುವ ರಸ್ತೆಗಳಲ್ಲಿ ಇದೊಂದು ರೀತಿಯ ಸಮಸ್ಯೆಯು ಹೆಗಲೇರಿದೆ.


ನಗರಸಭೆ ಏನಾದರು ಕಾಮಗಾರಿಯನ್ನು ಮಾಡಿದರೆ ಅದು ಜನಪಯೋಗಿಯಾಗುವ ರೀತಿಯಲ್ಲಿ ಮಾಡಬೇಕು.ಅದು ಬಿಟ್ಟುಜನರಿಗೆ ಹಿಂಸದಾಯಾಗುವ ಹಾಗುವ ರೀತಿಯಲ್ಲಿ ಮಾಡಿದರೆ ಅದು ತೆರಿಗೆದಾರರಿಗೆ ಮಾಡಿದ ಮೋಸ, ಹೀಗೆ ಮಾಡಿ ಖುಷಿ ಪಡುವಂತದ್ದು ಒಂದು ರೀತಿಯಲ್ಲಿ ನಾಚಿಕೆಗೇಡಿನ ಸಂಗತಿ.


ಈ ಕಾಮಗಾರಿಯನ್ನುಗುತ್ತಿಗೆ ಪಡೆದಿರುವ ಗುತ್ತಿಗೆದಾರರು ನಾವು ಚರಂಡಿ ಮಾಡಿ ಸ್ಲಾಬ್‌ಗಳನ್ನು ಇಡುವುದು ಅಷ್ಟೆ, ಅವುಗಳನ್ನು ಸುಸಜ್ಜಿತವಾಗಿ ಇಡಲು ಯೋಜನೆಯಲ್ಲಿ ಅವಕಾಶ ಮಾಡಿಲ್ಲ, ಎಂದು ಜಾರಿಕೊಳ್ಳುವ ಕೆಲಸವನ್ನು ಬಹಳ ಕ್ರಮಬದ್ಧವಾಗಿ ಮಾಡುತ್ತಿದ್ದಾರೆ.

ಕೇವಲ ಚರಂಡಿ ಮಾಡಿ ಮೇಲ್ಗಡೆ ಸ್ಲಾಬ್‌ಗಳನ್ನು ಹೇಗೆಂದರೆ ಹಾಗೆ ಎಸೆದು ಹೋಗುವ ಕೆಲಸವನ್ನು ಮಾಡಲಾಗಿದೆ.


ಅದಾವರೀತಿಯಗುಣಮಟ್ಟದಕಾಮಗಾರಿಯಾದಿತು? ಅದಾವ ರೀತಿಯ ಸುಧಾರಿತ ಕಾಮಗಾರಿಯಾದಿತು.

ಯಾವುದೇ ಒಂದು ಕಾಮಗಾರಿ ಮಾಡಿದರು ಜನಪಯೋಗಿ ಆದ ಹಾಗೂ ಸುಧಾರಿತವಾದ ಕಾಮಗಾರಿಯಾಗಬೇಕು ಅದು ಬಿಟ್ಟು ಹಿಂಸೆದಾಯಕವಾದ ಕಾಮಗಾರಿಯಾಗುವುದು ನಿಜಕ್ಕೂಅನ್ಯಾಯ.

ನಗರಸಭೆಗೆ ಯಾವ ಕಾಮಗಾರಿ ಹೇಗಿರಬೇಕು, ಅದು ಎಷ್ಟರ ಮಟ್ಟಿಗ ಜನೋಪಯೋಗಿಯಾದ ಕಾಮಗಾರಿ ಎಂಬ ಪ್ರಜ್ಞೆ ಇರಬೇಕು.ಅದು ಬಿಟ್ಟು ಹೀಗೆ ಅಡ್ಡಾದಿಡ್ಡಿ ಆದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕು ?


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑