Tel: 7676775624 | Mail: info@yellowandred.in

Language: EN KAN

    Follow us :


ಗಬ್ಬು ನಾರುತ್ತಿರುವ ಕನ್ಸರ್ವೆನ್ಸಿ ಗಲ್ಲಿಗಳು

Posted date: 29 Apr, 2019

Powered by:     Yellow and Red

ಗಬ್ಬು ನಾರುತ್ತಿರುವ ಕನ್ಸರ್ವೆನ್ಸಿ ಗಲ್ಲಿಗಳು

ಕಸದ ರಾಶಿ ರಾಶಿಯೇ ತುಂಬಿರುವ ಕನ್ಸರ್ವೆನ್ಸಿ ಗಲ್ಲಿ

ನಗರದ ಹೃದಯ ಭಾಗವಾದ ಅತಿ ಹೆಚ್ಚು ವಿಸ್ತೀರ್ಣವುಳ್ಳ ನಿವೇಶನಗಳು ಮತ್ತು ಮನೆಗಳಿರುವ ಬಡಾವಣೆ ಎಂದರೆ ಅದು ಬೆಂಗಳೂರು ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತಿರುವ ಪ್ರತೀಷ್ಟಿತ ಕನ್ನಡದ ಹಿರಿಯ ಕವಿ ಕುವೆಂಪು ಹೆಸರಿನ ಬಡಾವಣೆ.

ಈ ಬಡಾವಣೆಯ ಎಲ್ಲಾ ಮುುಖ್ಯ ರಸ್ತೆಗಳಿಗೆ ಎರಡು ರಸ್ತೆ ಸೇರಲು ಗಲ್ಲಿಗಳನ್ನು ನಿವೇಶನಗಳನ್ನು ಹಂಚುವಾಗಲೇ ಬಿಟ್ಟುಕೊಟ್ಟಿದ್ದಾರೆ.


ಬಹುತೇಕ ಗಲ್ಲಿಗಳನ್ನು ಕೆಲವು ನಿವಾಸಿಗಳು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿಕೊಂಡಿದ್ದರೆ ಮಿಕ್ಕ ಗಲ್ಲಿಗಳಲ್ಲಿ ಇಡೀ ಬಡಾವಣೆಯ ಮನೆಗಳ ಕಸದ ರಾಸಿಯೆ ಬಿದ್ದಿರುವುದು ಪ್ರತಿಷ್ಠಿತ ಬಡಾವಣೆಯ ನಿವಾಸಿಗಳಿಗೂ ಹಾಗೂ ನಗರಸಭೆಯ ಕಾರ್ಯವೈಖರಿಗೂ ಹಿಡಿದ ಕನ್ನಡಿಯೇ ಸರಿ.


ಮಾಜಿ ಮಂತ್ರಿಗಳಾದ ಸಿ ಪಿಯೋಗೇಶ್ವರ್, ಎಂ ಸಿಅಶ್ವಥ್ ಸೇರಿದಂತೆ ಸ್ಥಳೀಯ ರಾಜಕಾರಣಿಗಳ ಮನೆಗಳು ಹಾಗು ವೈದ್ಯರು, ಇಂಜಿನಿಯರಗಳು, ಯುಜಿಸಿ ವೇತನ ಪಡೆಯುವ ಉದ್ಯೋಗಿಗಳು, ವಾಣಿಜ್ಯ ಕೇಂದ್ರಗಳು, ಆಸ್ಪತ್ರೆಗಳು ಸೇರಿದಂತೆ ಪ್ರತಿಷ್ಠತರೇ ಇರುವ ಬಡಾವಣೆಗಳಲ್ಲಿನ ಗಲ್ಲಿಗಳು ಇಷ್ಟೊಂದು ಗಬ್ಬು ನಾರುತ್ತಿರುವುದು ಕಸವನ್ನು ಎಲ್ಲೆಂದರಲ್ಲಿ ಬಿಸಾಡುವ ನಿವಾಸಿಗಳಿಗಾಗಲಿ, ಕಸ ಹಾಕಲು ಶಾಶ್ವತ ಪರಿಹಾರ ಒದಗಿಸದೆ, ಪ್ರತಿದಿನವು ಶೀಘ್ರವಾಗಿ ವಿಲೇವಾರಿ ಮಾಡದೆ ಇರುವ ನಗರಸಭೆ ಗಾಗಲಿ ಶೋಭೆ ತರುವಂತದ್ದಲ್ಲ.


ಕೆಲವು ಕನ್ಸರ್ವೆನ್ಸಿ ಗಲ್ಲಿಗಳಲ್ಲಿ ಇತ್ತಿಚೆಗೆ ಡಾಂಬರು ಹಾಕಿ ಎರಡು ಬದಿಯ ಜನರು ಓಡಾಡಲು ಅನುವು ಮಾಡಿಕೊಟ್ಟ ನಗರಸಭೆಯು ಮಿಕ್ಕ ಎಲ್ಲಾ ಗಲ್ಲಿಗಳಿಗೂ ಚರಂಡಿ ನಿರ್ಮಿಸಿ ರಸ್ತೆ ಮಾಡಲಿ, ಇಲ್ಲವಾದರೆ ಎಲ್ಲಾ ಗಲ್ಲಿಗಳಲ್ಲಿ ಉದ್ಯಾನ ನಿರ್ಮಿಸಿ ವಾಯು ವಿಹಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಎಲ್ಲೆಂದರಲ್ಲಿ ಕಸ ಹಾಕುವ ವಾಣಿಜ್ಯ ಮಳಿಗೆಯವರು,  ಬಡಾವಣೆಯ ನಿವಾಸಿಗಳು ಹಾಗೂ ಶೀಘ್ರವಾಗಿ ಕಸ ವಿಲೇವಾರಿ ಮಾಡದ ನಗರಸಭೆಯ ಸಿಬ್ಬಂದಿ ಮತ್ತು ಗುತ್ತಿಗೆದಾರರ ವಿರುದ್ದವೂ ಸಹ ಕಾನೂನು ಕ್ರಮ ಜರುಗಿಸಿದರೆ ಸ್ವಚ್ಚ ಚನ್ನಪಟ್ಟಣ ನಿರ್ಮಾಣವಾಗುವುದರಲ್ಲಿ ಅನುಮಾನವೇ ಇಲ್ಲ.


ಗೋ ರಾ ಶ್ರೀನಿವಾಸ.

ಮೊ;9845856139


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑