Tel: 7676775624 | Mail: info@yellowandred.in

Language: EN KAN

    Follow us :


ಟಿಬೇಟಿಯನ್ನರ ಹನ್ನೊಂದನೇ ಧರ್ಮಗುರು ಪಂಚೆನ್ ಲಾಮಾ ಬಿಡುಗಡೆಗೆ ಒತ್ತಾಯಿಸಿ ಪಾದಯಾತ್ರೆ.

Posted date: 29 Apr, 2019

Powered by:     Yellow and Red

ಟಿಬೇಟಿಯನ್ನರ ಹನ್ನೊಂದನೇ ಧರ್ಮಗುರು   ಪಂಚೆನ್ ಲಾಮಾ ಬಿಡುಗಡೆಗೆ ಒತ್ತಾಯಿಸಿ ಪಾದಯಾತ್ರೆ.

ಪಾದಯಾತ್ರೆ ಹೊರಟ ಟಿಬೆಟಿಯನ್ ಮಹಿಳಾ ಅಸೋಸಿಯೇಶನ್ ಸದಸ್ಯರು

ಟಿಬೇಟಿನ ಹತ್ತನೇ ಧರ್ಮಗುರು ದಲೈಲಾಮಾ ರವರು 1995 ರಲ್ಲಿ ಹನ್ನೊಂದನೇ ಧರ್ಮ ಗುರುವಾಗಿ ಆರು ವರ್ಷದ ಗೆಧೆಮ್ ಚೊಯ್ಕಿ ಎಂಬ ಬಾಲಕನನ್ನು ಗುರುತಿಸಿ ಅವರ ಸಂಪ್ರದಾಯದಂತೆ ದೀಕ್ಷೆ ನೀಡುವ ಸುದ್ದಿ ತಿಳಿದ ಚೀನಾ ಸರ್ಕಾರವು ಆ ಬಾಲಕನನ್ನು ಕುಟುಂಬ ಸಮೇತವಾಗಿ ಅಪಹರಿಸಿ ಬಂಧನದಲ್ಲಿ ಇಟ್ಟಿದ್ದಾರೆ, ಅಪಹರಿಸಿ 24 ವರ್ಷಗಳು ಸಂದರೂ ಸಹ ಅವರ ಬಿಡುಗಡೆ ಮಾಡಿಲ್ಲ.  ಹಾಗೂ ಎಲ್ಲಿದ್ದಾರೆ ? ಹೇಗಿದ್ದಾರೆ ? ಎಂಬ ಮಾಹಿತಿಯನ್ನು ನೀಡುತ್ತಿಲ್ಲ, ಅವರನ್ನು ಬಿಡುಗಡೆ ಮಾಡಬೇಕೆಂದು ಕರ್ನಾಟಕದಲ್ಲಿ ನೆಲೆಯೂರಿರುವ ಟಿಬೇಟಿಯನ್ನರು ಬೆಂಗಳೂರಿಗೆ ಪಾದಯಾತ್ರೆ ನಡೆಸಿದರು.


ಗೆಧೇಮ್ ಚೊಯ್ಕಿ ಜನಿಸಿದ್ದು 25/04/1989 ರಲ್ಲಿ. ಆತನಿಗೆ ಆರು ವರ್ಷಗಳು ತುಂಬಿದ ನಂತರ ಈಗಿನ ಧರ್ಮಗುರು ದಲೈಲಾಮಾ ರವರು ಆ ಬಾಲಕನನ್ನು ಗುರುತಿಸಿ ಹನ್ನೊಂದನೇ ಧರ್ಮ ಗುರುಗಳನ್ನಾಗಿ ಮಾಡಲು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದ್ದರು, ಈ ವಿಷಯ ತಿಳಿದ ಚೀನಾ ಸರ್ಕಾರವೂ ದಲೈಲಾಮಾ ಧಾರ್ಮಿಕ ಪ್ರಭಾವವನ್ನು ಕುಗ್ಗಿಸುವ ಸಲುವಾಗಿ ಹಾಗೂ ಪಂಚೆನ್ ಲಾಮಾ ಬದಲು ಚೀನಿಯರ ಹಾಗೂ ಸರ್ಕಾರದ ಪರ ಇರುವಂತಹ ಧರ್ಮ ಗುರುವನ್ನು ನೇಮಿಸಿಕೊಳ್ಳಲು ಈ ಅಪಹರಣ ಮಾಡಲಾಗಿದೆ ಎಂದು ದಲೈಲಾಮಾ ಅನುಯಾಯಿಗಳ ಅಭಿಪ್ರಾಯವಾಗಿದೆ.


ಹನ್ನೊಂದನೇ ಧರ್ಮಗುರು ಪಂಚೆನ್ ಲಾಮಾ ರವರನ್ನು ಬಿಡುಗಡೆ ಮಾಡಿ ಅವರ ಧಾರ್ಮಿಕ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕೆಂದು ಹುಣಸೂರಿನ ಬಳಿ ಇರುವ ಟಿಬೇಟಿಯನ್ನರ ನಿರಾಶ್ರಿರ ತಾಣದಿಂದ ಬೆಂಗಳೂರಿನ ತನಕ ಹನ್ನೊಂದನೇ ಪಂಚೆನ್ ಲಾಮಾ ಚಿರಾಯುವಾಗಲಿ ಎಂಬ  ಘೋಷಣೆಯೊಂದಿಗೆ ಟಿಬೇಟಿಯನ್ ವುಮೆನ್ ಅಸೋಷಿಯನ್ ಮಹಿಳಾ ಸದಸ್ಯರು ಪಾದಯಾತ್ರೆ ಹೊರಟರು. ನಗರದ ಅನುಗ್ರಹ ವಸತಿಯಲ್ಲಿ ನಿನ್ನೆ ರಾತ್ರಿ ತಂಗಿದ್ದು ಇಂದು ಮುಂಜಾನೆ ಪ್ರಯಾಣ ಮುಂದುವರೆಸಿದರು.


ಗೋ ರಾ ಶ್ರೀನಿವಾಸ...

ಮೊ; 9845856139


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑