Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ಎಸ್ ಎಸ್ ಎಲ್ ಸಿ ಯಲ್ಲಿ ಸರ್ಕಾರಿ ಶಾಲೆಯೇ ಮೇಲುಗೈ

Posted date: 30 Apr, 2019

Powered by:     Yellow and Red

ಚನ್ನಪಟ್ಟಣ ಎಸ್ ಎಸ್ ಎಲ್ ಸಿ ಯಲ್ಲಿ ಸರ್ಕಾರಿ ಶಾಲೆಯೇ ಮೇಲುಗೈ

ಚನ್ನಪಟ್ಟಣ:೨೦೧೮/೧೯ ನೇ ಸಾಲಿನ ಎಸ್‌ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದರೆ, ಚನ್ನಪಟ್ಟಣ ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಅದರಲ್ಲೂ ಬಹುತೇಕ ಪೋಷಕರು ಮೂಗು ಮುರಿಯುವ ಸರ್ಕಾರಿ ಶಾಲೆಗಳೇ ಮೇಲುಗೈ ಸಾಧಿಸಿರುವುದು ಶಿಕ್ಷಣ ಇಲಾಖೆಯ ಸಾಧನೆ ಎನ್ನಲಡ್ಡಿಯಿಲ್ಲ.


ಚನ್ನಪಟ್ಟಣ ತಾಲ್ಲೂಕಿನಾದ್ಯಂತ ೨,೯೩೬ ಮಕ್ಕಳು ಪರೀಕ್ಷೆ ಬರೆದಿದ್ದು ೨,೫೮೮ ಮಕ್ಕಳು ಉತ್ತೀರ್ಣರಾಗಿದ್ದು ೩೪೮ ಮಕ್ಕಳು ಮಾತ್ರ ನಪಾಸಾಗಿದ್ದಾರೆ.


ಇಡೀ ತಾಲ್ಲೂಕಿನ ಅರವತ್ತು ಶಾಲೆಗಳಲ್ಲಿ ಶೇಕಡಾ ೮೮.೧೫ ರಷ್ಟು ಫಲಿತಾಂಶ ಬಂದಿದ್ದು ೨೯ ಸರ್ಕಾರಿ ಶಾಲೆಗಳಲ್ಲಿ ೦೯ ಶಾಲೆಗಳು, ೧೪ ಅನುದಾನಿತ ಶಾಲೆಗಳಲ್ಲಿ ೦೪ ಶಾಲೆಗಳು ಮತ್ತು ೧೭ ಅನುದಾನ ರಹಿತ ಶಾಲೆಗಳಲ್ಲಿ ೦೬ ಶಾಲೆಗಳು ಶೇಕಡಾ ನೂರು ಫಲಿತಾಂಶ ಬಂದಿದೆ.


ಸೇಂಟ್ ಮೈಕೆಲ್ ಶಾಲೆಯ ಚೇತನ್ ಸಿ ೬೨೫/೬೧೧ ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ ಸೆಂಟ್ ಮೈಕೆಲ್ ಶಾಲೆಯ ಸ್ಕಂದ ೬೦೩ ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸೆಂಟ್ ಮೈಕೆಲ್ ಶಾಲೆಯ ಸಮತಾ ಮತ್ತು ಬಾಲು ಪಬ್ಲಿಕ್ ಶಾಲೆಯ ಪೂಜಾಶ್ರೀ ೬೦೦ ಅಂಕ ಪಡೆದು ತೃತೀಯ ಸ್ಥಾನ ಪಡೆದರೆ ಸಾಧನಾ ವಿದ್ಯಾಲಯದ ಹೇಮಂತ್ ೫೯೮ ಅಂಕ ಪಡೆದು ನಾಲ್ಕನೇ ಸ್ಥಾನ ಪಡೆದಿದ್ದಾರೆ.


ಬಿಇಓ ಇಸಿಓ ಸಂದೇಶ


ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಸೀತಾರಾಮು ಮತ್ತು ಇಸಿಓ ತಮ್ಮಣ್ಣ ಮಾತನಾಡಿ ಪರೀಕ್ಷೆಯಲ್ಲಿ ಅನುತ್ತೀರ್ಣ ಆದ ಮಕ್ಕಳು ಮತ್ತು ಪೋಷಕರು ಆತಂಕ ಪಡದೆ, ಧೈರ್ಯದಿಂದ ಇರಬೇಕು, ಪೋಷಕರು ಸಹ ಮಕ್ಕಳಿಗೆ ಸಾಂತ್ವನ ಹೇಳಿ ಮುಂದಿನ ಪರೀಕ್ಷೆ ಗೆ ತಯಾರಾಗುವಂತೆ ಪ್ರೇರೇಪಿಸಬೇಕು, ಇದೇ ಜೀವನವಲ್ಲ, ಇಂದು ಸೋತವರು ನಾಳೆ ಗೆದ್ದೇ ಗೆಲ್ಲುತ್ತಾರೆ, ಯಾರೂ ಸಹ ದುಡುಕದೇ ಮುಂದಿನ ಪರೀಕ್ಷೆ ಗೆ ತಯಾರಿ ಮಾಡಿಕೊಳ್ಳಿ ಎಂದು ಕರೆ ನೀಡಿದರು.


ಸಿ ಪುಟ್ಟಸ್ವಾಮಿ ಶ್ಲಾಘನೆ


ಇಡೀ ರಾಜ್ಯದಲ್ಲಿ ರಾಮನಗರ ಜಿಲ್ಲೆ ದ್ವಿತೀಯ ಸ್ಥಾನ ಹಾಗೂ ಜಿಲ್ಲೆಯಲ್ಲಿ ಚನ್ನಪಟ್ಟಣ ಪ್ರಥಮ ಸ್ಥಾನ ಗಳಿಸಲು ಶ್ರಮಿಸಿದ  ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಜಿಲ್ಲಾ ಶಿಕ್ಷಣಾಧಿಕಾರಿ, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ಸಿಬ್ಬಂದಿಗಳು ಮತ್ತು ಆಯಾಯ ಶಾಲೆಗಳ ಅಧ್ಯಾಪಕರು, ಪೋಷಕರು ಮತ್ತು ಮಕ್ಕಳಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ವರ್ಷ ರಾಮನಗರ ಜಿಲ್ಲೆಯು ಪ್ರಥಮ ಸ್ಥಾನ ಗಳಿಸಲಿ ಎಂದು ಆಶಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑