Tel: 7676775624 | Mail: info@yellowandred.in

Language: EN KAN

    Follow us :


ಸಂಸ್ಕೃತಿ ಸಂಸ್ಕಾರಗಳ ಹೊಣೆ ಮಹಿಳೆಯರ ಮೇಲಿದೆ ಶಿಕ್ಷಕ ಯೋಗೇಶ್

Posted date: 03 May, 2019

Powered by:     Yellow and Red

ಸಂಸ್ಕೃತಿ ಸಂಸ್ಕಾರಗಳ ಹೊಣೆ ಮಹಿಳೆಯರ ಮೇಲಿದೆ ಶಿಕ್ಷಕ ಯೋಗೇಶ್

ಜಗತ್ತಿನಲ್ಲಿ ಸರ್ವಶ್ರೇಷ್ಠ ಸಂಸ್ಕೃತಿ ಭಾರತೀಯ ಸಂಸ್ಕೃತಿಯಾಗಿದ್ದು, ಜಗತ್ತಿಗೆ ಬದುಕುವ ಕಲೆಯನ್ನು ತೋರಿಸಿಕೊಟ್ಟಿದೆ.ಆದರೆ ಇಂದು ಆಧುನಿಕತೆ, ನಗರೀಕರಣ, ಕೈಗಾರೀಕರಣದಿಂದಾಗಿ ನಮ್ಮ ಭಾರತೀಯ ಸಂಸ್ಕೃತಿ ನಶಿಸುತ್ತಿದೆ, ಆಧುನೀಕರಣದ ಭರಾಟೆಯಲ್ಲಿ ಮಹಿಳೆ ಎಲ್ಲಾ ರಂಗಗಳಲ್ಲಿ ಬೆಳೆಯುತ್ತಿರುವುದು ಸಂತೋಷದ ಸಂಗತಿ, ಆದರೆ ಕೌಟುಂಬಿಕ ಸ್ವಾಸ್ಥ್ಯವನ್ನು ಕಾಪಾಡುವ ಹೊಣೆಗಾರಿಕೆ, ಸಂಸ್ಕೃತಿ - ಸಂಸ್ಕಾರವನ್ನು ಮತ್ತು  ಸಂಸಾರವನ್ನು ಕಾಪಾಡುವ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ಶಿಕ್ಷಕ ಯೋಗೇಶ್ ಅಭಿಪ್ರಾಯ ಪಟ್ಟರು.


ನಮ್ಮ ಭಾರತೀಯ ಸಂಸ್ಕೃತಿಯ ಅಂಗಗಳಾದ ವೈವಾಹಿಕ ಪದ್ಧತಿ, ಕೌಟುಂಬಿಕ ವ್ಯವಸ್ಥೆ' ಮಕ್ಕಳ ಲಾಲನೆ, ಪಾಲನೆ , ಪೋಷಣೆ ನಮ್ಮ ನಡೆ ನುಡಿ ವಿಚಾರಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚಾಗುತ್ತಿದ್ದು, ನಮ್ಮ ಗ್ರಾಮೀಣ ಆಟೋಟಗಳು, ಹಬ್ಬ ಹರಿದಿನಗಳು, ಸಾಂಪ್ರದಾಯಿಕ ಉಡುಗೆ ತೊಡುಗೆಗಳು , ಆಹಾರ ಪದ್ಧತಿ ಅತಿಥಿ ಸತ್ಕಾರದ ಮನೋಭಾವ ಎಲ್ಲವೂ ಕ್ರಮೇಣ ಮರೆಯಾಗುತ್ತಿದ್ದು , ನಮ್ಮ ಭಾರತೀಯ  ಸಂಸ್ಕೃತಿ ಪರಂಪರೆ ಆದರ್ಶಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ಹೊಣೆಗಾರಿಕೆ ಹೆಣ್ಣು ಮಕ್ಕಳ ಮೇಲಿದೆ ಎಂದು ಚನ್ನಪಟ್ಟಣ ಸರ್ಕಾರಿ ಬಾಲಕರ ಪ್ರೌಢಶಾಲೆಯ ಸಹ ಶಿಕ್ಷಕ ಯೋಗೇಶ್ ಭಾರತೀಯ ಸಂಸ್ಕೃತಿಯ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಕುರಿತು ಉಪನ್ಯಾಸ ನೀಡಿದರು.


ಆದಿಚುಂಚನಗಿರಿ ಶಾಖಾ ಮಠ, ರಾಮನಗರದ ಅರ್ಚಚಕರಹಳ್ಳಿಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ 22 ನೇ ಮಹಿಳಾ ಜನ ಜಾಗೃತಿ ಶಿಬಿರದಲ್ಲಿ ಅವರು ದಿ 03-05-2019 ರಂದು ಎಂದಿನಂತೆ ಯೋಗಾಭ್ಯಾಸ, ಭಜನೆ ಕಾರ್ಯಕ್ರಮಗಳು ನಡೆದವು. 

ಶಾಖಾ ಮಠದ ಕಾರ್ಯದರ್ಶಿಗಳಾದ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿಯವರು, ಶ್ರೀ ಶ್ರೀ ಮಂಗಳನಾಥ ಸ್ವಾಮೀಜಿಯವರು ಭಾಗವಹಿಸಿದ್ದರು.

ಶ್ರೀ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರು ಸಾನಿಧ್ಯ ವಹಿಸಿದ್ದರು.

ವಿಶೇಷ ಆಹ್ವಾನಿತರಾದ ಸುವರ್ಣವಾಹಿನಿಯ ಜಗದೀಶ್, ದಿಗ್ವಿಜಯ ವಾಹಿನಿಯ ಅಭಿಷೇಕ್, ಭೂಮಿಪುತ್ರ ಪತ್ರಿಕೆಯ ಸಂಪಾದಕ ಸು ನಾ ನಂದಕುಮಾರ್ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑