Tel: 7676775624 | Mail: info@yellowandred.in

Language: EN KAN

    Follow us :


ಆರ್ ಟಿ ಇ ಮಕ್ಕಳಿಗೆ ಶುಲ್ಕ ಪಡೆಯುತ್ತಿಲ್ಲ ಸುಬ್ಯಯ್ಯಚೆಟ್ಟಿ

Posted date: 30 May, 2019

Powered by:     Yellow and Red

ಆರ್ ಟಿ ಇ ಮಕ್ಕಳಿಗೆ ಶುಲ್ಕ ಪಡೆಯುತ್ತಿಲ್ಲ ಸುಬ್ಯಯ್ಯಚೆಟ್ಟಿ

ಆರ್ ಟಿ ಇ ಮಕ್ಕಳಿಂದ ನಾವು ಯಾವುದೇ ಶುಲ್ಕವನ್ನು ಪಡೆಯುತ್ತಿಲ್ಲ, ರಾಜ್ಯ ಸರ್ಕಾರ ನೀಡುವ ಪಠ್ಯ ಪುಸ್ತಕವನ್ನೇ ಬೋಧಿಸುತ್ತಿದ್ದೇವೆ, ಶಾಲೆಯಲ್ಲಿ ಸಮವಸ್ತ್ರ ಮತ್ತು ಬರವಣಿಗೆ ಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ನಾವು ಮಾರಾಟ ಮಾಡುವುದಿಲ್ಲ, ಅದಕ್ಕಾಗಿಯೇ ಜಿ ಎಸ್‌ ಟಿ ಉಳ್ಳ ಅಂಗಡಿಯನ್ನು ಶಾಲೆಯ ಹೊರಗೆ ತೆರೆದಿದ್ದೇವೆ ಪೋಷಕರು ಖರೀದಿಸಲು ಒತ್ತಡವನ್ನು ಹೇರುತ್ತಿಲ್ಲ, ಖರೀದಿ ಮಾಡಿದ ವಸ್ತುವಿಗೆ ಅಂಗಡಿಯ ಹೆಸರಿನಲ್ಲಿ ರಶೀದಿ ಕೊಡಲಾಗತ್ತಿದೆ ಎಂದು ಬಾಲು ಪಬ್ಲಿಕ್ ಶಾಲೆಯ ಸಂಸ್ಥಾಪಕ ಸುಬ್ಬಯ್ಯಚೆಟ್ಟಿ ಹೇಳಿದರು.


ಇಂದು ಅವರ ಒಡೆತನದ ಬಾಲು ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಆರ್ ಟಿ ಇ ಪೋಷಕರ ಸಭೆಯಲ್ಲಿ ಪೋಷಕರು, ಅಧಿಕಾರಿಗಳು ಮತ್ತು ಮಾಧ್ಯಮದವರಿಗೆ ದಾಖಲೆಗಳ ಸಮೇತ ಉತ್ತರ ನೀಡಿ ಸಮರ್ಥನೆ ಮಾಡಿಕೊಂಡರು.

ಆರ್ ಟಿ ಇ ಮಕ್ಕಳಿಗೆ ವಾಹನದ ಶುಲ್ಕ, ನೋಟ್ ಬುಕ್, ಹಾಗೂ ಶಾಲಾ ವಾರ್ಷಿಕೋತ್ಸವದಲ್ಲಿ ಭಾಹವಹಿಸಿದ ಮಕ್ಕಳಿಗೆ ಮಾತ್ರ ಬಟ್ಟೆ ಖರೀದಿಸಲು ಶುಲ್ಕ ಪಡೆಯಲಾಗುತ್ತದೆ, ಯಾವ ಮಗುವನ್ನು ತಾರತಮ್ಯ ಮಾಡುತ್ತಿಲ್ಲ, ಪ್ರತಿಯೊಂದು ಶುಲ್ಕಕ್ಕೂ ರಶೀದಿ ಕೊಡಲಾಗುತ್ತಿದೆ, ಇನ್ನೂ ಮುಂದೆ ಯಾವ ವಸ್ತು ಕೊಂಡರೂ ವಸ್ತುಗಳ ಹೆಸರು ಮತ್ತು ದರ ನಮೂದಿಸಿ ಕೊಡಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ಮಾತನಾಡಿ, ಮೊನ್ನೆ ನಡೆದ ಸಭೆಯಲ್ಲಿ ಬಾಲು ಪಬ್ಲಿಕ್ ಶಾಲೆಗೆ ಸಂಬಂಧಿಸಿದಂತೆ ಒಂದು ದೂರು ಮಾತ್ರ ಬಂದಿದ್ದು ಅದನ್ನು ಸಹ ಅವರು ಸರಿಪಡಿಸಿದ್ದಾರೆ, ಯಾವುದೇ ಹೆಚ್ಚುವರಿ ಶುಲ್ಕ ವಸೂಲಿ ಮಾಡದೆ ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದ ಶುಲ್ಕವನ್ನು ಪಡೆದಿದ್ದಾರೆ, ಅದಕ್ಕೂ ಅವರು ರಶೀದಿ ಕೊಟ್ಟಿದ್ದಾರೆ, ಪೋಷಕರ ಇಚ್ಚೆಯ ಮೇರೆಗೆ ಖಾಸಗಿಯಾಗಿ ಎರಡು ಪುಸ್ತಕಗಳನ್ನು ಬೋಧಿಸುತ್ತಿರುವುದಾಗಿ ತಿಳಿಸಿದ್ದಾರೆ, ಪೋಷಕರಿಗೆ ಯಾವುದೇ ರೀತಿಯ ತೊಂದರೆ ಆಗಿದ್ದರೂ ನೇರವಾಗಿ ತಿಳಿಸಿ, ತಮಗೆ ಈಗ ಹೇಳಲು‌ ಆಗುವುದಿಲ್ಲ ಎಂದಾದರೆ ಪತ್ರದ ಮೂಲಕವು‌ ನನಗೆ ತಿಳಿಸಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಪೋಷಕರಿಗೆ ಕರೆ ನೀಡಿದರು.

ಸಭೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶಬೀನಾಬಾನು, ದೈಹಿಕ ಶಿಕ್ಷಣ ಪರಿವೀಕ್ಷಕ ನರಸಿಂಹಯ್ಯ, ಶಿಕ್ಷಣ ಸಂಯೋಜಕ ವಸಂತಕುಮಾರ್ ಹಾಗೂ ಹಲವಾರು ಪೋಷಕರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑