Tel: 7676775624 | Mail: info@yellowandred.in

Language: EN KAN

    Follow us :


ಸ್ಪ್ರಿಂಗ್ ಫೀಲ್ಡ್ ಶಾಲೆಯಲ್ಲಿ ಪಠ್ಯಪುಸ್ತಕ ಮಾರಾಟ: ಡಿಡಿಪಿಐ ಭೇಟಿ ತರಾಟೆ

Posted date: 01 Jun, 2019

Powered by:     Yellow and Red

ಸ್ಪ್ರಿಂಗ್ ಫೀಲ್ಡ್ ಶಾಲೆಯಲ್ಲಿ ಪಠ್ಯಪುಸ್ತಕ ಮಾರಾಟ: ಡಿಡಿಪಿಐ ಭೇಟಿ ತರಾಟೆ

ಚನ್ನಪಟ್ಟಣ : ಅಕ್ರಮವಾಗಿ ಪಠ್ಯ ಪುಸ್ತಕ ಮಾರಾಟ ಮಾಡುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ನಗರದ ಹೊರಭಾಗದ ಚನ್ನಂಕೇಗೌಡನ ದೊಡ್ಡಿ ಸಮೀಪ ಇರುವ ಗೋವಿಂದೇಗೌಡನದೊಡ್ಡಿ ಗ್ರಾಮದ ಸ್ಪ್ರಿಂಗ್‌ಪೀಲ್ಡ್ ಖಾಸಗಿ ಶಾಲೆಗೆ ಗುರುವಾರ ದಿಢೀರ್ ಭೇಟಿನೀಡಿ ಪರಿಶೀಲನೆ ನಡೆಸಿದರು.


ಉಪನಿರ್ದೇಶಕರ ಭೇಟಿ ವೇಳೆ ಶಾಲೆಯಲ್ಲಿ ಪಠ್ಯಪುಸ್ತಗಳನ್ನು ಮಾರಾಟ ಮಾಡುತ್ತಿದ್ದು  ಕಂಡು ಬಂದಿತು. ಶಾಲಾ ಕೊಠಡಿಯೊಂದರಲ್ಲಿ ಪಠ್ಯಪುಸ್ತಕಗಳನ್ನು ಬ್ಯಾಗ್‌ನಲ್ಲಿ ಹಾಕಿ ರಾಶಿ ಹಾಕಿದ್ದು ಕಂಡು ಬಂದಿದ್ದು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಶಾಲಾ ಸಿಬ್ಬಂದಿ ಖಾಸಗಿ ವ್ಯಕ್ತಿಗಳು ಮಾರಾಟ ಮಾಡುತ್ತಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟೀಕರಣ ನೀಡಲು ಮುಂದಾದರು.


ಇದನ್ನು ಒಪ್ಪದ ಡಿಡಿಪಿಐ ಶಾಲೆಯೊಳಗೆ ಪಠ್ಯ ಪುಸ್ತಕ ಮಾರಾಟ ಮಾಡಲು ಅವಕಾಶ ಮತ್ತು ಅನುಮತಿ ನೀಡಿದವರು ಯಾರು ? ಎಂದು ತರಾಟೆಗೆ ತೆಗೆದು ಕೊಂಡರು.


ಪುಸ್ತಕ ಮತ್ತು ಸಮವಸ್ತ್ರ ಮಾರಾಟ ಮಾಡುತ್ತಿರುವ ವಿಡಿಯೋ ಚಿತ್ರಣ ಮಾಡಿಕೊಂಡ ಅವರು ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ಉಪಸ್ಥಿತರಿದ್ದರು.


ಶಾಲೆಯಲ್ಲಿ ಅಕ್ರಮವಾಗಿ ಪಠ್ಯ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಮೇರೆಗೆ ಭೇಟಿ ನೀಡಿ ಪರೀಶೀಲಿಸಲಾಗಿ ಅಕ್ರಮ ಮಾರಾಟ ಮಾಡುತ್ತಿರುವುದು ಸಾಬೀತಾಗಿದೆ, ಸೋಮವಾರ ನೋಟೀಸ್ ಜಾರಿ ಮಾಡುತ್ತೇನೆ.

*ಗಂಗಮಾರೇಗೌಡ ಡಿಡಿಪಿಐ ರಾಮನಗರ*


ಪಠ್ಯ ಪುಸ್ತಕ ಅಕ್ರಮ ಮಾರಾಟದ ದೂರಿನ ಮೇರೆಗೆ ಡಿಡಿಪಿಐ ಮತ್ತು ನಾವು ದಿಢೀರ್ ಭೇಟಿ ನೀಡಿ ಪರೀಶೀಲಿಸಿದ್ದು ಅಕ್ರಮ ಮಾರಾಟ ಸಾಬಿತಾಗಿದೆ, ಡಿಡಿಪಿಐ ರವರು ನೋಟೀಸ್ ಜಾರಿ ಮಾಡಿದ ನಂತರ ಕ್ರಮ ಕೈಗೊಳ್ಳುತ್ತೇವೆ.

*ಆರ್ ಎಸ್ ಸೀತಾರಾಮು ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪಟ್ಟಣ*


ಇತ್ತೀಚೆಗೆ ನಡೆದ ಆರ್ ಟಿ ಇ ಮಕ್ಕಳಿಗೆ ಹೆಚ್ಚುವರಿ ಶುಲ್ಕ ವಸೂಲಿ ಸಭೆಯಲ್ಲಿ ಸಹ ಬಂದ ದೂರುಗಳ ಪೈಕಿ ಅತಿ ಹೆಚ್ಚು ದೂರುಗಳು ಇದೇ ಶಾಲೆಯ ವಿರುದ್ದ ಬಂದಿದ್ದನ್ನು ಗಮನಿಸಬಹುದು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑