Tel: 7676775624 | Mail: info@yellowandred.in

Language: EN KAN

    Follow us :


ರಾಜರುಗಳಿಗೆಲ್ಲ ಮಾದರಿಯಾಗಿದ್ದ ನಾಡಪ್ರಭು ಕೆಂಪೇಗೌಡರು ಬಿಇಓ

Posted date: 27 Jun, 2019

Powered by:     Yellow and Red

ರಾಜರುಗಳಿಗೆಲ್ಲ ಮಾದರಿಯಾಗಿದ್ದ ನಾಡಪ್ರಭು ಕೆಂಪೇಗೌಡರು ಬಿಇಓ

ಚನ್ನಪಟ್ಟಣ:ಜೂನ್: ಕೆಂಪೇಗೌಡರು ಒಂದು ಸಮುದಾಯಕ್ಕೆ ಮತ್ತು ಧರ್ಮಕ್ಕೆ ಸೀಮಿತವಾಗದೇ ಇಡೀ ಸಮಾಜವನ್ನು ಅಭಿವೃದ್ಧಿ ದೃಷ್ಟಿಯಿಂದ ಮುನ್ನಡೆಸಿದರು ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಸೀತಾರಾಮು ಹೇಳಿದರು.

ಅವರು ಇಂದು ನಾಡಪ್ರಭು ಕೆಂಪೇಗೌಡ ವೇದಿಕೆ ವತಿಯಿಂದ ಚಚ್೯ ರಸ್ತೆ ಬದಿ ಹಮ್ಮಿಕೊಂಡಿದ್ದ ಕೆಂಪೇಗೌಡರ ೫೧೦ ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.


ಕೆಂಪೇಗೌಡರು ಒಕ್ಕಲಿಗ ಸಮುದಾಯದ ಪ್ರಭುಗಳಾಗಿದ್ದರೂ ಸಹ ಒಂದೇ ಸಮುದಾಯಕ್ಕೆ ಸೀಮೀತವಾದವರಲ್ಲ ಎಂಬುದಕ್ಕೆ ಅವರು ಕಟ್ಟಿದ ಬೆಂಗಳೂರು ನಗರವೇ ಸಾಕ್ಷಿ, ಪ್ರತಿಯೊಂದು ಸಮುದಾಯದ ಜನರಿಗೂ ಒಂದೊಂದು ಕೇರಿಯನ್ನು ಸಮುದಾಯದ ಹೆಸರಿನಲ್ಲೇ ಕಟ್ಟಿಕೊಟಿದ್ದಾರೆ ಎಂದು ತಿಳಿಸಿದರು.


ಅವರು ನಡೆಸಿದ ರಾಜಾಡಳಿತವೂ ಇತರ ರಾಜರಿಗೆ ಮಾದರಿಯಾಗಿದ್ದನ್ನು ನಾವು ಇತಿಹಾಸದ ಪುಟದಲ್ಲಿ ಕಾಣಬಹುದು, ಇಂತಹ ಮಹಾನ್ ನಾಯಕ ನೆಲೆಸಿದ ನಾಡಿನಲ್ಲಿ ಬದುಕುತ್ತಿರುವ ನಾವುಗಳೇ ಪುಣ್ಯವಂತರು ಎಂದು ಸ್ಮರಿಸದರು.


ಎಲ್ ಐ ಸಿ ಪ್ರತಿನಿಧಿ ನಾಗರಾಜು ಮಾತನಾಡಿ ಕೆಂಪೇಗೌಡರ ಜಯಂತಿಯನ್ನು ತಾಲ್ಲೂಕು ಆಡಳಿತ ಅದ್ದೂರಿಯಾಗಿ ಆಚರಿಸಬೇಕಿತ್ತು, ತಾಲ್ಲೂಕು ಆಡಳಿತ ನಿಷ್ಕ್ರಿಯವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ, ಇನ್ನೂ ಮುಂದೆಯಾದರೂ ವಿಜೃಂಭಣೆಯಿಂದ ಆಚರಿಸಬೇಕು ಹಾಗೂ ರಾಜ್ಯ ಸರ್ಕಾರವು ಕೆಂಪೇಗೌಡರ ಜೀವನವನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕೆಂದು ಒತ್ತಾಯಿಸಿದರು.


*ಬೇಜವಬ್ದಾರಿ ತಾಲ್ಲೂಕು ಆಡಳಿತ*


ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಡಿ ಕೆ ಶಿವಕುಮಾರ್ ರವರು ಜಿಲ್ಲೆಯಲ್ಲಿ ಮತ್ತೊಂದು ದಿನ ಅದ್ದೂರಿಯಾಗಿ ಜಯಂತಿಯನ್ನು ಆಚರಿಸೋಣಾ, ಈ ದಿನ ಸಾಂಕೇತಿಕವಾಗಿ ಆಚರಿಸಿ ಎಂದು ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆಯೆ ವಿನಹ ತಾಲ್ಲೂಕು ಆಡಳಿತಕ್ಕೆ ಹೇಳಿರಲಿಲ್ಲ, ಆದರೂ ಸಹ ತಾಲ್ಲೂಕು ಆಡಳಿತ ನೆಪ ಮಾತ್ರಕ್ಕೆ ಕೆಲವರಿಗೆ ಮೊಬೈಲ್ ಸಂದೇಶ ಕಳುಹಿಸಿ ಅವರ ಇಷ್ಟದಂತೆ ಹಾಗೂ ಯಾರಿಗೂ ಗೊತ್ತಾಗದಂತೆ ಜಯಂತಿ ಆಚರಿಸಿರುವುದು ತಾಲ್ಲೂಕಿಗೆ ಅವಮಾನ ಎಂದು ಇದೇ ವೇಳೆ ನೆರೆದಿದ್ದ ಕೆಂಪೇಗೌಡರ ಅಭಿಮಾನಿಗಳು ತಾಲ್ಲೂಕು ಆಡಳಿತವನ್ನು ಖಂಡಿಸಿದರು. 


ಸಮಾರಂಭದಲ್ಲಿ ಸಂಚಾರಿ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್, ಹಾಪ್ ಕಾಮ್ಸ್ ನಿರ್ದೇಶಕ ಬೋರ್ ವೆಲ್ ರಂಗನಾಥ, ಎಲೆಕೇರಿ ರವೀಶ್, ಬಮೂಲ್ ನಿರ್ದೇಶಕ ಜಯಮುತ್ತು, ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ, ಪಿ ಡಿ ರಾಜು, ಜಯಂತಿಯ ರೂವಾರಿಗಳಾದ ಮೆಂಗಳ್ಳಿ ಮಹೇಶ್, ವಿವೇಕ್, ರೋಹಿತ್ ಹಾಗೂ ವೇದಿಕೆಯ ಪದಾಧಿಕಾರಿಗಳು ಮತ್ತು ಕೆಂಪೇಗೌಡರ ಅಭಿಮಾನಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ.

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑