Tel: 7676775624 | Mail: info@yellowandred.in

Language: EN KAN

    Follow us :


ಉಗ್ರರ ಅಡಗುತಾಣಗಳಾಗುತ್ತಿರುವ ಜಿಲ್ಲೆಗಳು, ವಿಫಲವಾದ ಗೃಹ ಇಲಾಖೆ ಅಶ್ವಥ್ ನಾರಾಯಣಗೌಡ

Posted date: 28 Jun, 2019

Powered by:     Yellow and Red

ಉಗ್ರರ ಅಡಗುತಾಣಗಳಾಗುತ್ತಿರುವ ಜಿಲ್ಲೆಗಳು, ವಿಫಲವಾದ ಗೃಹ ಇಲಾಖೆ ಅಶ್ವಥ್ ನಾರಾಯಣಗೌಡ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಭಯೋತ್ಪಾದಕರ ಅಡಗುತಾಣಗಳಾಗಿವೆ (Sleeper Cell Terrorism) ಎಂದು ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಬಿಜೆಪಿ ವಕ್ತಾರರಾದ ಅಶ್ವಥ್ ನಾರಾಯಣಗೌಡ ಇಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನೆರೆಯ ಬಾಂಗ್ಲಾದೇಶ ದ ನಿಷೇಧಿತ ಭಯೋತ್ಪಾದಕ ಜೆಎಂಬಿ (Jamaat-ul-Mujahideen Bangladesh) ಸಂಘಟನೆಯ ಭಯೋತ್ಪಾದಕನೊಬ್ಬನನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ತವರು ಜಿಲ್ಲೆ ರಾಮನಗರದಲ್ಲಿ ೨೦೧೮ ರ ಆಗಸ್ಟ್ ೫ ರಂದು ಬಂಧಿಸಲಾಗಿತ್ತು.


ಕೇಂದ್ರದ ರಾಷ್ಟ್ರೀಯ ತನಿಖಾ ದಳ (NIA) ಮಾಹಿತಿ ಕಲೆ ಹಾಕಿ ರಾಮನಗರ ಮತ್ತು ಬೆಂಗಳೂರಿನ ಕಂಟೋನ್ಮೆಂಟ್ ಗೆ ಬಂದು ಉಗ್ರರನ್ನು ಬಂಧಿಸುವವರೆಗೂ ಸ್ಥಳೀಯ ಪೋಲಿಸರಿಗಾಗಲಿ ರಾಜ್ಯದ ಗೃಹ ಇಲಾಖೆಗಾಗಲಿ ಮಾಹಿತಿಯೇ ಇರಲಿಲ್ಲವೆಂದರೆ ಗೃಹ ಸಚಿವರು ಮತ್ತು ಗುಪ್ತಚರ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ ಎಂದು ಉಲ್ಲೇಖಿಸಿದ್ದಾರೆ.


ಉಗ್ರರ ಬಂಧನ ವೇಳೆ ಅಂದಿನ ಗೃಹ ಸಚಿವರಾದ ಡಾ ಜಿ ಪರಮೇಶ್ವರ ರವರನ್ನು ಕೇಳಿದಾಗ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಐಷಾರಾಮಿ ಕಾರಿನಲ್ಲಿ ಬಂದು ಉಗ್ರರನ್ನು ಬಂಧಿಸಿ ಕರೆದೊಯ್ಯುತ್ತಾರೆ, ನಮಗೆ ಮಾಹಿತಿಯನ್ನೇ ನೀಡುವುದಿಲ್ಲ ಎಂಬ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.


 ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದಲ್ಲಿ ಜೆಎಂಬಿ ಸಂಘಟನೆಯು ಬಿಹಾರದ ಬುದ್ದಗಯಾ ಸ್ಪೋಟ ಪ್ರಕರಣ ಮತ್ತು ಪಶ್ಚಿಮ ಬಂಗಾಳದ ಬರ್ದಾನ್ ಪ್ರಕರಣದಲ್ಲಿ ಬೇಕಾಗಿದ್ದ ಬಯೋತ್ಪಾದಕ ಹಬೀಬುಲ್ಲಾ ರೆಹಮಾನ್ ನನ್ನು ಬಂಧಿಸಿ ರಾಮನಗರ ದ ವಾಡ್೯ ೨೩ ರಲ್ಲಿ ಹುದುಗಿಸಿಟ್ಟಿದ್ದ ಎರಡು ಸಜೀವ ಬಾಂಬ್ ಗಳನ್ನು ಎನ್ ಐ ಎ ಪತ್ತೆ ಹಚ್ಚಿರುವುದು, ಈ ಹಿಂದೆ ರಾಮನಗರ ದಲ್ಲಿ ಉಗ್ರವಾದಿಗಳನ್ನು ಬಂಧಿಸಿರುವುದನ್ನು ಗಮನಿಸಿದರೇ ಈ ಜಿಲ್ಲೆಗಳು ಉಗ್ರರರಿಗೆ ಸುರಕ್ಷಿತ ತಾಣವಾಗಿದೆ ಎಂದೆನುಸುತ್ತಿದೆ ಎಂದಿದ್ದಾರೆ.


ನೆರೆಯ ಶ್ರೀಲಂಕಾ ದೇಶದ ಚಚ್೯ನಲ್ಲಿ ಇತ್ತೀಚಿಗೆ ಬಾಂಬ್ ಸ್ಪೋಟಗೊಂಡು ನೂರಾರು ಅಮಾಯಕರು ಸತ್ತ ನಂತರ ಈ ದಾಳಿಗೆ ಬೆಂಗಳೂರಿನ ನಂಟಿದೆ ಎಂಬ ಮಾಹಿತಿ ದೊರಕಿದ್ದರೂ ಸಹ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳದಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.


ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಈ ರೀತಿಯಾದರೇ, ಗೃಹ ಸಚಿವರು ನೇರ ಹೊಣೆಯಾಗುತ್ತಾರೆ, ಪೋಲಿಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ, ಪ್ರಾಮಾಣಿಕ ಪೋಲಿಸ್ ಅಧಿಕಾರಿಗಳ ವರ್ಗಾವಣೆ (೩ ತಿಂಗಳಿಗೆ-೬ ತಿಂಗಳಿಗೆ) ದಂಧೆಯಿಂದ ಇಲಾಖೆ ನಿಷ್ಕ್ರಿಯವಾಗಿದೆ, ಈ ಹಿಂದೆ ರಾಮನಗರದ ವಾಡ್೯ ೨೩ ರಲ್ಲಿ ಪೋಲಿಸ್ ಔಟ್ ಪೋಸ್ಟ್ ತೆರೆಯಬೇಕೆಂಬ ಬೇಡಿಕೆ ಇದ್ದರೂ ಜಿಲ್ಲಾಡಳಿತ ಗಮನ ಹರಿಸಿಲ್ಲ, ಇವೆಲ್ಲವೂ ರಾಜಕೀಯ ಹಸ್ತಕ್ಷೇಪದಿಂದ ಕೂಡಿದ ಕಾರಣ ಭಯೋತ್ಪಾದಕರಿಗೆ ರಾಮನಗರ ಉಗ್ರರ ಅಡಗುತಾಣವಾಗಿದೆ, ರಾಜ್ಯ ಸರ್ಕಾರವು ಉಗ್ರರ ಬಗ್ಗೆ ಮೃದು ಧೋರಣೆ ಬಿಟ್ಟು ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑